Raviteja : ಟೈಗರ್‌ ನಾಗೇಶ್ವರ್‌ ರಾವ್‌ ಸಿನಿಮಾದ ಮೊದಲ ಲುಕ್‌ನ್ನು ಭಾರತದ ಮೂರನೇ ಅತಿ ಉದ್ದದ ರಸ್ತೆ ಹಾಗೂ ರೈಲ್ವೆ ಸೇತುವೆ ಎನಿಸಿಕೊಂಡಿರುವ ರಾಜಮುಂಡ್ರಿಯಲ್ಲಿರುವ ಗೋದಾವರಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಹ್ಯಾವ್ಲಾಕ್‌ ಸೇತುವೆ ಮೇಲೆ ಅನಾವರಣ ಮಾಡಲಾಯಿತು. 


COMMERCIAL BREAK
SCROLL TO CONTINUE READING

ಟೈಗರ್‌ ನಾಗೇಶ್ವರ್‌ ರಾವ್‌ ಫಸ್ಟ್‌ ಲುಕ್‌ನಲ್ಲಿ ಮಾಸ್‌ ಮಹಾರಾಜ ರವಿತೇಜ ಉಗ್ರ ರೂಪದಲ್ಲಿ ಕಾಣಿಸಿಕೊಂಡಿದ್ದು, ಬಿಯರ್ಡ್‌, ಗಾಯವಾದ ಮುಖ, ಒಟ್ಟಾರೆಯಾಗಿ ಮಾಸ್‌ ಅವತಾರದಲ್ಲಿಯೇ ಕುತೂಹಲ ಕೆರಳಿಸಿದ್ದಾರೆ. ಐದು ಭಾಷೆಗಳಲ್ಲಿ ಬಿಡುಗಡೆಯಾಗಿರುವ ಕನ್ನಡದ ಫಸ್ಟ್‌ ಲುಕ್‌ಗೆ ಹ್ಯಾಟ್ರಿಕ್‌ ಹಿರೋ ಶಿವರಾಜ್‌ ಕುಮಾರ್‌ ಧ್ವನಿಯಾಗಿದ್ದಾರೆ. ಭಾರತದ ಕುಖ್ಯಾತ ಕಳ್ಳ ಎನಿಸಿಕೊಂಡಿರುವ ಟೈಗರ್‌ ನಾಗೇಶ್ವರ್‌ ರಾವ್‌ ಪ್ರಪಂಚವನ್ನು ಶಿವಣ್ಣ ತೋರಿಸಿದ್ದಾರೆ. 


"ನಾನು ಪ್ರಿಯಾಂಕಾ ಚೋಪ್ರಾಳ ಅಂಡರ್ ವೇರ್ ನೋಡಬೇಕು" ಎಂದಿದ್ದ ಸಿನಿಮಾ ನಿರ್ದೇಶಕ...!


ಕನ್ನಡದಲ್ಲಿ ಶಿವಣ್ಣ, ತೆಲುಗಿನಲ್ಲಿ ವೆಂಕಟೇಶ್‌ ದಗ್ಗುಭಾಟಿ, ಹೀಗೆ ಒಂದೊಂದು ಭಾಷೆಯಲ್ಲಿ ಒಬ್ಬೊಬ್ಬರು ಚಿತ್ರದ ಫಸ್ಟ್‌ ಲುಕ್‌ಗೆ ಧ್ವನಿಯಾಗಿದ್ದಾರೆ. ಜಿಂಕೆಯನ್ನು ಬೇಟೆಯಾಡುವ ಹುಲಿ ನೋಡಿರ್ತಿಯಾ.. ಹುಲಿಗಳನ್ನು ಬೇಟೆಯಾಡುವ ಹುಲಿ ನೋಡಿರ್ತಿಯಾ ಎಂಬ ಮಾಸ್‌ ಡೈಲಾಗ್‌ ಮೂಲಕ ರವಿತೇಜ ಭರ್ಜರಿ ಎಂಟ್ರಿಕೊಟ್ಟಿದ್ದಾರೆ.


ದಸರಾ ಹಬ್ಬಕ್ಕಿ ಈ ಸಿನಿಮಾ ಬಾಕ್ಸಾಫಿಸ್‌ ಕಣಕ್ಕಿಳಿಯಲಿದ್ದು, ಅಂದರೆ ಅಕ್ಟೋಬರ್‌ 22ರಂದು ವಿಶ್ವಾದ್ಯಂತ ರವಿತೇಜ ಸಿನಿಮಾ ಸೆಟ್ಟೆರಲಿದೆ. ದಸರಾ ಹಬ್ಬದ ಸಂದರ್ಭದಲ್ಲಿ ಹಾಗೂ ರಜೆ ಹಿನ್ನೆಲೆ ಪ್ಲಾನ್‌ ಮಾಡಿ ಫ್ಯಾನ್‌ ಇಂಡಿಯಾ ಮಟ್ಟದಲ್ಲಿ ಸಿನಿಮಾ ರಿಲೀಸ್‌ ಮಾಡುಲಾಗುವುದು ಎಂದು ಚಿತ್ರತಂಡ ತಿಳಿಸಿದೆ. 


ಇದನ್ನೂ ಓದಿ-ಕಪ್ಪು ಬಟ್ಟೆಯಲ್ಲಿ ಚಂದ್ರನಂತೆ ಮಿಂಚುತ್ತಿರುವ ಭರಾಟೆ ಬೆಡಗಿ ಶ್ರೀಲೀಲಾ-ಪೋಟೋಸ್‌ ನೋಡಿ


ರವಿತೇಜ ಅವರ ಸಾಕಷ್ಟು ಮಾಸ್‌ ಸಿನಿಮಾಗಳು ಡಬ್ಬಿಂಗ್‌ ಆಗಿದ್ದವು, ಆದರೆ ಮೊದಲ ಬಾರಿ ಫ್ಯಾನ್‌ ಇಂಡಿಯಾ ಸಿನಿಮಾವನ್ನು ಮಾಡಿದ್ದಾರೆ, ಸಿನಿಮಾ ಐದು ಭಾಷೆಗಳಲ್ಲಿ ಒಂದೇ ಸಲ ಬಿಡುಗಡೆಯಾಗುತ್ತಿದ್ದು, ಮಾಸ್‌ ಮಹಾರಾಜನಿಗೆ ಪ್ರೇಕ್ಷಕ ಪ್ರಭುಗಳಿಂದ ಯಾವ ರೆಸ್ಪಾನ್ಸ್‌ ಸಿಗಲಿದೆ ಎಂದು ಕಾದು ನೋಡಬೇಕು. ಆದರೆ ಚಿತ್ರದ ಟೀಸರ್‌ ಟೇಲರ್‌ ಬಿಡುಗಡೆಯಾದ ನಂತರ ಅಭಿಮಾನಿಗಳಲ್ಲಿ ಸಿನಿಮಾದ ಕ್ರೇಜ್‌ ಹೆಚ್ಚಾಗುವುದಂತು ಖಂಡಿತ.