ಸ್ಟಾರ್ ಪಟ್ಟ ಬಂದ್ಮೇಲೆ ನಟ ನಾನಿ ನಡುವಳಿಗೆ ಬೇರೆ ಆಗಿದೆ..! ನಿರ್ದೇಶಕನ ಹೇಳಿಕೆ ವೈರಲ್
Actor Nani : ನಾನಿ ಕೆಳಮಟ್ಟದಿಂದ ಬಂದು ಸ್ಟಾರ್ ಪಟ್ಟ ಪಡೆದುಕೊಂಡಿದ್ದಾರೆ. ಹಾಗಾಗಿಯೇ ತೆಲುಗಿನಲ್ಲಿ ನಾನಿಗೆ ಸಾಕಷ್ಟು ಅಭಿಮಾನಿಗಳಿದ್ದಾರೆ, ಕನ್ನಡದಲ್ಲೂ ಇದ್ದಾರೆ. ಆದರೆ ಇತ್ತೀಚೆಗಷ್ಟೇ ರಜಾಕಾರ್ ಚಿತ್ರದ ನಿರ್ದೇಶಕರು ಕೂಲ್ ನಾನಿ ಬಗ್ಗೆ ನೀಡಿರುವ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
Yata Satynarayana on Nani : ನಾಚುರಲ್ ಸ್ಟಾರ್ ನಾನಿ ತಮ್ಮ ನಟನೆಯಿಂದಲೇ ಸಾಕಷ್ಟು ಹೆಸರುವಾಸಿಯಾಗಿದ್ದಾರೆ. ಕನ್ನಡಿಗರಿಗೂ ಇವರು ಪರಿಚಿತರು. ಕನ್ನಡಕ್ಕೆ ಡಬ್ ಆಗುವ ಅವರ ಸಿನಿಮಾಗಳನ್ನು ನೋಡಲು ಸಿನಿ ರಸಿಕರು ಇಷ್ಟಪಡುತ್ತಾರೆ. ಇದೀಗ ಸ್ಟಾರ್ ನಿರ್ದೇಶಕರೊಬ್ಬರು ನಾನಿ ಕುರಿತು ನೀಡಿರುವ ಹೇಳಿಕೆ ಸಾಕಷ್ಟು ವೈರಲ್ ಆಗಿದೆ.
ಹೌದು, ಟೀಸರ್ ನಿಂದಲೇ ʼರಜಾಕಾರ್ʼ ಚಿತ್ರ ಉತ್ತಮ ಸ್ಪಂದನೆ ಪಡೆಯುತ್ತಿದೆ. ಈ ನಡುವೆ ಟಾಲಿವುಡ್ ನಲ್ಲಿ ಸಾಕಷ್ಟು ಖ್ಯಾತಿ ಗಳಿಸಿರುವ ನಾಯಕ ನಾನಿ ಬಗ್ಗೆ ಈ ಚಿತ್ರದ ನಿರ್ದೇಶಕರು ಮಾಡಿರುವ ಕಾಮೆಂಟ್‌ಗಳು ಎಲ್ಲರಲ್ಲೂ ಅಚ್ಚರಿ ಮೂಡಿಸುತ್ತಿವೆ.
ಇದನ್ನೂ ಓದಿ:ನಮ್ಮ ಜನಪರ ಕಾರ್ಯಕ್ರಮಗಳಿಗೆ ಜನರಿಂದ ಮೆಚ್ಚುಗೆ ವ್ಯಕ್ತ - ಬೊಮ್ಮಾಯಿ
ನ್ಯಾಚುರಲ್ ಸ್ಟಾರ್ ಎಂದೇ ಗುರುತಿಸಿಕೊಂಡಿರುವ ನಾನಿ ಕೆಳಮಟ್ಟದಿಂದ ಬಂದು ಸ್ಟಾರ್ ಪಟ್ಟ ಪಡೆದುಕೊಂಡಿದ್ದಾರೆ. ಹಾಗಾಗಿಯೇ ತೆಲುಗಿನಲ್ಲಿ ನಾನಿಗೆ ಸಾಕಷ್ಟು ಅಭಿಮಾನಿಗಳಿದ್ದಾರೆ, ಕನ್ನಡದಲ್ಲೂ ಇದ್ದಾರೆ. ಆದರೆ ಇತ್ತೀಚೆಗಷ್ಟೇ ರಜಾಕಾರ್ ಚಿತ್ರದ ನಿರ್ದೇಶಕರು ಕೂಲ್ ನಾನಿ ಬಗ್ಗೆ ನೀಡಿರುವ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ನಿರ್ದೇಶಕ ಯಾತ ಸತ್ಯನಾರಾಯಣ, ಖ್ಯಾತ ನಿರ್ದೇಶಕ ಕೆ.ರಾಘವೇಂದ್ರರಾವ್ ಅವರ ಶಿಷ್ಯ. ಈ ನಿರ್ದೇಶಕರು ಹಲವು ಸೂಪರ್ ಹಿಟ್ ಧಾರಾವಾಹಿಗಳನ್ನು ನಿರ್ಮಿಸಿದ್ದರು. ʼಅಲ್ಲರಿ ಬುಲ್ಲೋಡುʼ ಚಿತ್ರದಲ್ಲಿ ಸಹ ನಿರ್ದೇಶಕರಾಗಿ ಯಾತ ಸತ್ಯನಾರಾಯಣ ಪ್ರವೇಶ ಮಾಡಿದರು. ಅಲ್ಲದೆ, ಯಾತ ಸತ್ಯನಾರಾಯಣ ಅವರಿಗೆ ನಾನಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡುತ್ತಿದ್ದರು.
ಇದನ್ನೂ ಓದಿ: ಇನ್ಸ್ಪೆಕ್ಟರ್ ಹೆಸರಿನಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂ. ವಂಚನೆ!
ಇನ್ನು ಹಲವು ವರ್ಷಗಳ ಕಾಲ ಸಹಾಯಕ ನಿರ್ದೇಶಕರಾಗಿದ್ದ ನಾನಿ ಹೀರೋ ಆದ ನಂತರ ಸಾಕಷ್ಟು ಬದಲಾಗಿದ್ದಾರೆ ಅಂತ ನಿರ್ದೇಶಕ ಯಾತ ಹೇಳಿದ್ದಾರೆ. ನಾನಿ ಹೀರೋ ಆದ ನಂತರ ನಾನಿ ತಮ್ಮ ಜೊತೆ ಮಾತು ನಿಲ್ಲಿಸಿದರು ಅಂತ ನಿರ್ದೇಶಕರು ಹೇಳಿಕೊಂಡಿದ್ದಾರೆ. ‘ಅಷ್ಟಾಚೆಮ್ಮಾ’ ಸಿನಿಮಾದ ಮೂಲಕ ನಾನಿ ಹೀರೋ ಆಗಿ ಲಾಂಚ್ ಆದಾಗಲೂ ನಾನಿ ಅವರಿಗೆ ಒಂದು ಮಾತನ್ನೂ ಹೇಳಲಿಲ್ಲ ಎಂದು ಯಾತ ಹೇಳಿದ್ದಾರೆ.
ಅಲ್ಲದೆ, ಅವರ ಜೊತೆ ಸಿನಿಮಾ ಮಾಡಿದರೆ.. ಹಿಂದಿನಂತೆ ಸರ್ ಅನ್ನಬೇಕು ಅಂತ ಫೋನ್ ಎತ್ತುವುದನ್ನೂ ಬಿಟ್ಟರು.. ಹೀರೋ ಆಗುವ ಮುನ್ನ ನಾನಿ ಹೇಗಿದ್ದರು, ಇವಾಗ ಬದಲಾಗಿದ್ದಾರೆ ಅಂತ ನಿರ್ದೇಶಕ ಯಾತ ಸತ್ಯನಾರಾಯಣ ಹೇಳಿದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.