Salman Khan Galaxy Apartment : ಸಲ್ಮಾನ್ ಖಾನ್ ಮನೆಯ ಹೊರಗೆ ಫೈರಿಂಗ್ ನಡೆದಾಗಿನಿಂದ ಅವರ ಕುಟುಂಬದಲ್ಲಿ ಭಯದ ವಾತಾವರಣ ಆವರಿಸಿದೆ.ಈ ಗುಂಡಿನ ದಾಳಿಯ ನಂತರ,ಸಲ್ಮಾನ್ ತಂದೆ ಈ ಮನೆಯನ್ನು ಬಿಟ್ಟು ಬೇರೆಡೆಗೆ ತೆರಳುವ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.ಯಾಕೆಂದರೆ ಇಲ್ಲಿ ಇಂಥಹ ಘಟನೆ ನಡೆದಿರುವುದು ಇದೇ ಮೊದಲಲ್ಲ.ಈ ಹಿಂದೆ ಕೂಡಾ ಹಲವು ಬಾರಿ ಈ ರೀತಿಯ ಘಟನೆಗಳು ನಡೆದಿವೆ. ಆದರೆ ಸಲ್ಮಾನ್ ಖಾನ್ ಮಾತ್ರ ಯಾವುದೇ ಕಾರಣಕ್ಕೂ ತನ್ನ ಒಂದು ಬೆಡ್ ರೂಮ್ ಅಪಾರ್ಟ್ ಮೆಂಟ್ ಬಿಟ್ಟು ಬೇರೆಡೆ ಶಿಫ್ಟ್ ಆಗುವ ಮನಸ್ಸು ಮಾಡುತ್ತಿಲ್ಲ. ಹೀಗಿರುವಾಗ ಕೋಟ್ಯಂತರ ರೂಪಾಯಿ ಆಸ್ತಿಯ ಒಡೆಯನಾಗಿದ್ದರೂ  ಸಲ್ಮಾನ್ ಗೆ ಈ ಮನೆಯ ಮೇಲೆ ಇಷ್ಟೊಂದು ಮೋಹ ಯಾಕೆ ಎನ್ನುವ ಪ್ರಶ್ನೆ ಸಾಮಾನ್ಯವಾಗಿ ಮೂಡುತ್ತದೆ.


COMMERCIAL BREAK
SCROLL TO CONTINUE READING

ಸಲ್ಮಾನ್ ಯಾವ ಕಾರಣಕ್ಕೆ ಈ ಮನೆಯನ್ನು ಬಿಡುತ್ತಿಲ್ಲ ಎನ್ನುವ್ಯುದನ್ನು ಸ್ವತಃ ಸಲ್ಮಾನ್ ಟಿವಿ ಶೋ ವೊಂದರಲ್ಲಿ ತಿಳಿಸಿದ್ದರು.'ತೇರೆ ಮೇರೆ ಬೀಚ್ ಮೇ'ಷೋ ನಲ್ಲಿ ಕೇಳಲಾದ ಪ್ರಶ್ನೆಗೆ ಉತ್ತರಿಸುತ್ತಾ ಸಲ್ಮಾನ್ ತನಗೆ ಯಾಕೆ ಆ ಮನೆ ಎಂದರೆ ಇಷ್ಟ ಎನ್ನುವುದನ್ನು ಬಹಿರಂಗ ಪಡಿಸಿದ್ದರು. 


ಇದನ್ನೂ ಓದಿ : Anchor Anushree: ಯಾವ ಸಿನಿಮಾ ನಟಿಯರಿಗೂ ಕಮ್ಮಿಯಿಲ್ಲ.. ಆಂಕರ್‌ ಅನುಶ್ರೀ ಒಂದು ಎಪಿಸೋಡ್‌ಗೆ ಪಡೆಯುವ ಸಂಭಾವನೆ ಎಷ್ಟು ಗೊತ್ತಾ?


ಅಸಲಿಗೆ ಸಲ್ಮಾನ್  ಇರುವ ಅಪಾರ್ಟ್ ಮೆಂಟ್ ನ ಕೆಳಗೆ ನಟನ ತಾಯಿ ಸಲ್ಮಾ ಖಾನ್  ವಾಸಿಸುತ್ತಿದ್ದಾರೆ. ಒಂದು ವೇಳೆ ಬೇರೆ ಮನೆಗೆ ಶಿಫ್ಟ್ ಆಗುವುದಾದರೆ ತಂದೆ ತಾಯಿಯಿಂದ ದೂರ ಹೋಗಬೇಕಾಗುತ್ತದೆ.ತಾಯಿ ಸಲ್ಮಾ ಮತ್ತು ತಂದೆ ಸಲೀಂ ಅವರ ಹತ್ತಿರವೇ ಇರಬೇಕು ಎನ್ನುವ ಕಾರಣಕ್ಕಾಗಿ ಸಲ್ಮಾನ್ ಗ್ಯಾಲಕ್ಸಿ ಅಪಾರ್ಟ್‌ಮೆಂಟ್ ಬಿಟ್ಟು ಐಷಾರಾಮಿ ಮನೆಗೆ ಶಿಫ್ಟ್ ಆಗುತ್ತಿಲ್ಲವಂತೆ. 


 


Amruthadhaare Serial: ಯುಗಾದಿ ಹಬ್ಬದಂದು ಶಕುಂತಲಾಳ ಕುತಂತ್ರ ಬಯಲು: ಅತ್ತೆಗೆ ಶಾಕ್‌ ಕೊಟ್ಟ ಭೂಮಿಕಾ!


ಬೇರೆ ಮನೆಗೆ ಶಿಫ್ಟ್ ಆಗಿದ್ದ ಅರ್ಬಾಜ್ ಮತ್ತು ಸೊಹೈಲ್ :  
ಒಂದು ಕಡೆ  ಸಲ್ಮಾನ್ ತನ್ನ ಹೆತ್ತವರೊಂದಿಗೆ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದರೆ,ಉಳಿದ ಇಬ್ಬರು ಪುತ್ರರು ತಮ್ಮ ನಿವಾಸವನ್ನು ಈಗಾಗಲೇ ಬದಲಾಯಿಸಿದ್ದಾರೆ. ವಿಶೇಷವೆಂದರೆ ಒಂದು ಬೆಡ್‌ರೂಮ್ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿರುವ ಸಲ್ಮಾನ್ ಐಷಾರಾಮಿ ಫಾರ್ಮ್‌ಹೌಸ್ ಹೊಂದಿದ್ದಾರೆ.ಅಲ್ಲಿ ಅವರು ತಮ್ಮ ಕುಟುಂಬದೊಂದಿಗೆ ರಜಾದಿನಗಳನ್ನು ಕಳೆಯುತ್ತಾರೆ.  


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.