Shah Rukh Khan lady bodyguard : ಸೂಪರ್‌ಸ್ಟಾರ್ ಶಾರುಖ್ ಖಾನ್ ಪ್ರಪಂಚದಾದ್ಯಂತ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ, ಅವರಲ್ಲಿ ಹೆಚ್ಚಿನ ಭಾಗ ಯುವತಿಯರಿದ್ದಾರೆ. ʼದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆʼ ಮತ್ತು ʼಕುಚ್ ಕುಚ್ ಹೋತಾ ಹೈʼ ಸೇರಿದಂತೆ ಮುಂತಾದ ಶಾರುಖ್‌ ರೋಮ್ಯಾಂಟಿಕ್ ಚಿತ್ರಗಳು ಹುಡುಗಿರನ್ನ ತುಂಬಾ ಕಾಡಿವೆ. ಹೀಗಾಗಿ, ಅವರು ಎಲ್ಲಾದ್ರೂ ಖಾನ್‌ ಕಂಡ್ರೆ ಅಪ್ಪಿಕೊಂಡು ಮುತ್ತಿಡಲು ಮುಗಿಬಿಳುತ್ತಾರೆ.


COMMERCIAL BREAK
SCROLL TO CONTINUE READING

ಇದೇ ಕಾರಣಕ್ಕಾಗಿ ಶಾರುಖ್ ಖಾನ್ ಅವರು ತಮ್ಮ ಮಹಿಳಾ ಅಭಿಮಾನಿಗಳಿಂದ ಸುರಕ್ಷತೆ ಕಾಪಾಡಿಕೊಳ್ಳಲು ಈಗ ಮಹಿಳಾ ಅಂಗರಕ್ಷಕರನ್ನು ನೇಮಿಸಿಕೊಂಡಿದ್ದಾರಂತೆ. 2017 ರಲ್ಲಿ ನಡೆದ ಇಂಡಿಯನ್ ಟುಡೇ ಕಾನ್ಕ್ಲೇವ್‌ನಲ್ಲಿ ಬಾದ್‌ ಸಾ ಸ್ವತಃ ಇದನ್ನು ಬಹಿರಂಗಪಡಿಸಿದರು. ಪುರುಷ ಅಂಗರಕ್ಷಕರು ಮಹಿಳೆಯರನ್ನು ತಳ್ಳುವುದು ಸರಿಯಲ್ಲ ಅದಕ್ಕಾಗಿ ಮಹಿಳಾ ಅಂಗರಕ್ಷಕರನ್ನು ನೇಮಿಸಿಕೊಂಡಿರುವುದಾಗಿ ತಿಳಿಸಿದ್ದರು.


ಇದನ್ನೂ ಓದಿ: ವಿಜಯ್ - ತ್ರಿಷಾ ಪ್ರೇಮ ಪ್ರಕರಣ..! 15 ವರ್ಷಗಳ ನಂತರ ಮತ್ತೇ ಒಂದಾದ ಜೋಡಿ


ಕಾರ್ಯಕ್ರಮದಲ್ಲಿ ಮಾತನಾಡಿದ ಎಸ್‌ಆರ್‌ಕೆ, ʼನನ್ನನ್ನು ಇಷ್ಟಪಡುವ ಬಹಳಷ್ಟು ಜನ ಲೆಡಿ ಫ್ಯಾನ್ಸ್‌ಗಳಿದ್ದಾರೆ. ಆದ್ದರಿಂದ ನನಗೆ ಈಗ ಮಹಿಳಾ ಅಂಗರಕ್ಷಕರಿದ್ದಾರೆ, ಪುರುಷರು ಮಹಿಳೆಯರನ್ನು ತಳ್ಳುವುದು ಅಸಭ್ಯ ವರ್ತನೆಯಾಗುತ್ತದೆ. ಅಲ್ಲದೆ, ಮಹಿಳೆಯರ ಸುಂದರ ಉದ್ದನೆಯ ಉಗುರುಗಳು ಪ್ರೀತಿಯು ನೋವುಂಟುಮಾಡುತ್ತವೆ ಅಂತ ಹಾಸ್ಯವಾಗಿ ಲೆಡಿ ಬಾಡಿಗಾರ್ಡ್‌ಗಳ ನೇಮಿಸಿದ್ದರ ಕುರಿತು ಮಾಹಿತಿ ನೀಡಿದ್ದರು.


ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದ್ರೆ, ಶಾರುಖ್ ಇತ್ತೀಚೆಗೆ ನಾಲ್ಕು ವರ್ಷಗಳ ನಂತರ ಆಕ್ಷನ್-ಪ್ಯಾಕ್ಡ್ ಎಂಟರ್‌ಟೈನರ್ ಪಠಾಣ್‌ನೊಂದಿಗೆ ದೊಡ್ಡ ಪರದೆಗೆ ಮರಳಿದರು. ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ಸಹ ಈ ಚಿತ್ರದಲ್ಲಿ ನಟಿಸಿದ್ದಾರೆ. ಸಿದ್ಧಾರ್ಥ್ ಆನಂದ್ ನಿರ್ದೇಶನದ ಈ ಸಿನಿಮಾ ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ವಿಶ್ವಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ 1000 ಕೋಟಿ ರೂಪಾಯಿಗಳನ್ನು ಗಳಿಸಿದ ಅತಿದೊಡ್ಡ ಬ್ಲಾಕ್‌ಬಸ್ಟರ್‌ಗಳಲ್ಲಿ ಒಂದಾಗಿದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.