KD Machlakshmi Motion Poster: ಸ್ಯಾಂಡಲ್‌ವುಡ್‌ ಬೆಡಗಿ ರೀಷ್ಮಾ ನಾಣಯ್ಯ ಕೆಡಿ ಚಿತ್ರದಲ್ಲಿನ ಹೊಸ ಮೋಷನ್‌ ಪೋಸ್ಟರ್‌ ರಿವೀಲ್‌ ಆಗಿದೆ. ಈ ನಟಿ ಆಕ್ಷನ್‌ ಪ್ರಿನ್ಸ್‌ ಧುವ ಸರ್ಜಾ ಹಾಗೂ ಡೈರೆಕ್ಟರ್‌ ಜೋಗಿ ಪ್ರೇಮ್‌ ಕಾಂಬಿನೇಷನ್‌ನ ಕೆಡಿ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದು,  ಇದೀಗ ಈ ನಟಿಯ ಸಿನಿಮಾದಲ್ಲಿನ ನಯಾ ಲುಕ್‌ನ ಮೋಷನ್‌ ಪೋಸ್ಟರ್‌ ಬಿಡುಗಡೆಯಾಗಿದೆ.


COMMERCIAL BREAK
SCROLL TO CONTINUE READING

ಕೆಡಿ ಚಿತ್ರದ ಮಚ್‌ಲಕ್ಷ್ಮಿಯ ಹೊಸ ಮೋಷನ್‌ ಪೋಸ್ಟರ್‌ನಲ್ಲಿ ನಟಿ ರೀಷ್ಮಾ ನಾಣಯ್ಯ ಲಂಗಾ-ದಾವಣಿ ಧರಿಸಿಕೊಂಡು ಪಕ್ಕಾ ಹಳ್ಳಿ ಹುಡುಗಿಯ ಹಾಗೆ  ಸಖತ್ ಆಗಿ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಈ ನಟಿ ಇದರಲ್ಲಿ ಕೈಯಲ್ಲಿ ತಮಟೆ ಇಡಿದುಕೊಂಡು ತುಂಬಾ ಖುಷಿಯಾಗಿರುವ ಹಾಗೆ ಕಣ್ಣಿಗೆ ಬಿದ್ದಿದ್ದಾರೆ. ಈ ನಟಿ ಮಸ್ತ್ ಆಗಿಯೇ ಕುಣಿದು ಕುಪ್ಪಳಿಸುತ್ತಿದ್ದಾರೆ.


Samantha Birthday:ಹುಟ್ಟು ಹಬ್ಬದ ಸಂಭ್ರಮದಲ್ಲಿ ಸ್ಯಾಮ್‌: ಈ ಸೌತ್‌ ಸುಂದರಿಯ ಒಟ್ಟು ಆಸ್ತಿಯೆಷ್ಟು ಗೊತ್ತೇ?


ಚಂದನವನದ ನಿರ್ದೇಶಕ ಜೋಗಿ ಪ್ರೇಮ್‌ ರೀಷ್ಮಾ ನಾಣಯ್ಯ ಕೆಡಿ ಚಿತ್ರದಲ್ಲಿ ಜೀವ ತುಂಬಿರುವ ಮಚ್‌ಲಕ್ಷ್ಮಿ ಒಂದು ಪೋಸ್ಟರ್‌ ಅನ್ನು ಕಳೆದ ವರ್ಷ ಬಿಟ್ಟಿದ್ದರು. ಇದೀಗ ಹೊಸ ಮೋಷನ್‌ ಪೋಸ್ಟರ್‌ ಮಚ್‌ಲಕ್ಷ್ಮಿಯ ಮತ್ತೊಂದು ಖದರ್‌ ತೋರಿಸುತ್ತಿದೆ. ಈ ಪೋಸ್ಟರ್‌ ಏಪ್ರಿಲ್-28 ರೀಷ್ಮಾ ನಾಣಯ್ಯ ಜನ್ಮ ದಿನದಂದು ರಿವೀಲ್‌ ಮಾಡಿದ್ದಾರೆ.


ನಟಿ ರೀಷ್ಮಾ ನಾಣಯ್ಯಗೆ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ್ದು, ಈ ವಿಶೇಷ ಮೋಷನ್ ಪೋಸ್ಟರ್‌ನಲ್ಲಿಯೇ ತಿಳಿಯುತ್ತದೆ. ಈಗಾಗಲೇ ಕೆಡಿ ಚಿತ್ರದ ಒಂದು ಭಾಗದ ಶೂಟಿಂಗ್‌ ಮುಗಿದಿದ್ದು, ತಮ್ಮ ಚಿತ್ರದ ನಾಯಕಿಯ ಹುಟ್ಟುಹಬ್ಬಕ್ಕೆ ಈ ಮೋಷನ್ ಪೋಸ್ಟರ್ ರಿಲೀಸ್ ಮಾಡಿದ್ದಾರೆ. ಈ ಮೂಲಕ ಬರ್ತ್‌ಡೇಗೆ ವಿಶೇಷವಾಗಿಯೇ  ವಿಶಸ್‌ ತಿಳಿಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.