Jio Cinema : ರಿಲಯನ್ಸ್ ಇಂಡಿಯಾದ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಜಿಯೋ ಸಿನಿಮಾ ವಾರ್ನರ್ ಬ್ರದರ್ಸ್, ಡಿಸ್ಕವರಿ+ ಜೊತೆಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಇದರೊಂದಿಗೆ, ಹಾಲಿವುಡ್ ಚಲನಚಿತ್ರಗಳು, ವೆಬ್-ಸರಣಿಗಳನ್ನು ತನ್ನ ಪ್ರಸಾರ ಮಾಡಲು ಮುಂದಾಗಿದ್ದು, ನೆಟ್‌ಫ್ಲಿಕ್ಸ್ ಮತ್ತು ಅಮೆಜಾನ್ ವಿರುದ್ಧ ಸ್ಪರ್ಧಿಸಲು ಬಿಗ್‌ ಪ್ಲಾನ್‌ ರೂಪಿಸಿದೆ.


COMMERCIAL BREAK
SCROLL TO CONTINUE READING

ರಿಲಯನ್ಸ್‌ನ ವಯಾಕಾಮ್ 18 ನಡುವಿನ ಒಪ್ಪಂದವಾಗಿದ್ದು, ವಾರ್ನರ್ ಬ್ರದರ್ಸ್ ಮತ್ತು ಅದರ ಎಚ್‌ಬಿಒ ಎಲ್ಲಾ ಸೀರಿಸ್‌ ಮತ್ತು ಸಿನಿಮಾಗಳು ಇನ್ನು ಮುಂದೆ, ಜಿಯೋಸಿನಿಮಾ ಅಪ್ಲಿಕೇಶನ್‌ನಲ್ಲಿ ಲಭ್ಯವಿರುತ್ತವೆ. ಇವುಗಳಲ್ಲಿ ಜನಪ್ರಿಯ ಚಲನಚಿತ್ರಗಳು ಮತ್ತು ಕಾರ್ಯಕ್ರಮಗಳಾದ, ಗೇಮ್ ಆಫ್ ಥ್ರೋನ್ಸ್, ಲಾರ್ಡ್ ಆಫ್ ದಿ ರಿಂಗ್ಸ್ ಮತ್ತು ಹ್ಯಾರಿ ಪಾಟರ್ ಸರಣಿಗಳು ಸೇರಿವೆ ಎಂದು ಕಂಪನಿಗಳು ನೀಡಿದ ಜಂಟಿ ಹೇಳಿಕೆಯಲ್ಲಿ ತಿಳಿಸಿವೆ. 


ಇದನ್ನೂ ಓದಿ: KKBKKJ : 7ನೇ ದಿನಕ್ಕೆ 150 ಕೋಟಿ ಗಳಿಕೆ ಕಂಡ ಸಲ್ಲು ʼಕೆಕೆಬಿಕೆಕೆಜೆʼ ಚಿತ್ರ..!


ರಾಯಿಟರ್ಸ್ ಸುದ್ದಿ ಸಂಸ್ಥೆ ಈ ಕುರಿತು ಸುದ್ದಿ ಬಿತ್ತರಿಸಿದೆ ಆದ್ರೆ, ಎಷ್ಟು ಮೊತ್ತಕ್ಕೆ ಒಪ್ಪಂದವಾಗಿದೆ ಎಂದು ತಿಳಿದು ಬಂದಿಲ್ಲ. ಒಪ್ಪಂದವು ಮುಂದಿನ ತಿಂಗಳಿನಿಂದ ಜಾರಿಗೆ ಬರುವ ನಿರೀಕ್ಷೆಯಿದೆ. ಇತ್ತ ವಾರ್ನರ್ ಬ್ರದರ್ಸ್‌ನ ಭಾರತ, ಆಗ್ನೇಯ ಏಷ್ಯಾ ಮತ್ತು ಕೊರಿಯಾದ ಮುಖ್ಯಸ್ಥ ಕ್ಲೆಮೆಂಟ್ ಶ್ವೆಬಿಗ್, ಈ ಒಪ್ಪಂದವು ದಕ್ಷಿಣ ಏಷ್ಯಾದ ಮಾರುಕಟ್ಟೆಯಲ್ಲಿ ಕಂಪನಿಯನ್ನು ಬಲಪಡಿಸುವ ಪ್ರಯತ್ನಗಳ ಭಾಗವಾಗಿದೆ ಎಂದು ಹೇಳಿದ್ದಾರೆ. 


ಪ್ರಸ್ತುತ ಐಪಿಎಲ್ ಸರಣಿಯನ್ನು ಉಚಿತವಾಗಿ ಪ್ರಸಾರ ಮಾಡುವುದರಿಂದ ಜನಪ್ರಿಯವಾಗಿರುವ ಜಿಯೋ ಸಿನಿಮಾ ಈ ಒಪ್ಪಂದದಿಂದ ಹೆಚ್ಚು ಜನಪ್ರಿಯತೆ ಗಳಿಸಲಿದೆ. ಈ ಹಿಂದೆ HBO ನ ಹಲವು ಅತ್ಯುತ್ತಮ ಚಲನಚಿತ್ರಗಳು ಮತ್ತು ವೆಬ್‌ ಸರಣಿಗಳನ್ನು Hotstar ನಲ್ಲಿ ಪ್ರದರ್ಶನಗೊಳ್ಳುತ್ತಿದ್ದವು. ಆದ್ರೆ, ಮಾರ್ಚ್ 31 ರಂದು, Hotstar ಮತ್ತು HBO ನಡುವಿನ ಒಪ್ಪಂದದ ಅವಧಿ ಮುಗಿದಿದ್ದು, ಇನ್ನುಮುಂದೆ ಜಿಯೋ ಸಿನಿಮಾದಲ್ಲಿ ಪ್ರಸಾರವಾಗಲಿವೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.