Darshan In Jail:  ಹೌದು ಕೊಲೆ ಕೇಸ್ ನಲ್ಲಿ ಪರಪ್ಪನ ಅಗ್ರಹಾರ ಜೈಲಿನ ಸ್ಪೆಷಲ್ ಬ್ಯಾರಕ್‌ನ ಕೊಠಡಿಯಲ್ಲಿರುವ ನಟ ದರ್ಶನ್ ಅಕ್ಷರಶಃ ಹೈರಾಣಾಗಿ ಹೋಗಿದ್ದಾರೆ. ಲಕ್ಸುರಿ ಲೈಫ್ ಲೀಡ್ ಮಾಡುತ್ತಿದ್ದ ನಟ ದರ್ಶನ್ ಅಟ್ಯಾಚ್ಡ್ ಬಾತ್ ರೂಂ ಹೊರತುಪಡಿಸಿ ಸಾಮಾನ್ಯ ಬೆಡ್ ಮೇಲೆ ಹೊದಿಕೆ ಹೊದ್ದು ಮಲಗಬೇಕಾದ ಸ್ಥಿತಿ ಬಂದೋದಗಿದೆ. 


COMMERCIAL BREAK
SCROLL TO CONTINUE READING

ಕಳೆದ ಎರಡು ದಿನಗಳಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿ ಸೆರೆವಾಸ ಅನುಭವಿಸುತ್ತಿರುವ ನಟ ದರ್ಶನ್ ದುಗುಡ ದುಮ್ಮಾನದಲ್ಲಿಯೇ ದಿನ ದೂಡುತ್ತಿದ್ದಾರೆ. ಪ್ರಮುಖ ಜೈಲಿನ ಸ್ಪೆಷಲ್ ಬ್ಯಾರಕ್ ನ ಕೊಠಡಿಯಲ್ಲಿ ಸಹಖೈದಿ ವಿನಯ್, ಪ್ರದೂಶ್, ಧನರಾಜ್ ಜೊತೆ ದರ್ಶನ್ ಜೈಲುವಾಸಕ್ಕೆ ವ್ಯವಸ್ಥೆ ಮಾಡಲಾಗಿದೆ. ಮೊದಲೇ ಫಿಟ್ನೆಸ್ ಮೇಯಿಂಟೈನ್ ಮಾಡಲು‌ ಚಿಕನ್, ಮಟನ್, ಪ್ರೂಟ್ಸ್, ಜೂಸ್ ಸೇವಿಸುತ್ತಿದ್ದ ದರ್ಶನ್ಗೆ ಜೈಲಿನಲ್ಲಿ ಸರಿಯಾಗಿ ಉಪ್ಪು ಕಾರ ಇಲ್ಲದ ಸಾಂಬಾರ್, ಮುದ್ದೆ ಅನ್ನ ತಿನ್ನಲು ದರ್ಶನ್ ಕಷ್ಟಪಡುತ್ತಿದ್ದಾರೆ. 


ರಾತ್ರಿ ಸಹ ಜೈಲಿನ ಮೇನು ಪ್ರಕಾರ ಮುದ್ದೆ, ಅನ್ನ, ಚಪಾತಿ ತರಕಾರಿ ಸಾಂಬಾರ್ ಮತ್ತು ಮಜ್ಜಿಗೆಯನ್ನ ಜೈಲು ಸಿಬ್ಬಂದಿ ನೀಡಿದ್ದರು. ಜೈಲೂಟ ತಿನ್ನಲಾಗದೆ ದರ್ಶನ್ ಪರದಾಟ ನಡೆಸಿದ್ದು ಸರಿಯಾಗಿ ಊಟ ಸೇರದೆ ನಿದ್ದೆಯು ಬಾರದೆ ದರ್ಶನ್ ವಿಲವಿಲ ಅಂತ ಒದ್ದಾಡುತ್ತಿದ್ದಾರೆ. ರಾತ್ರಿ ತಡವಾಗಿ ನಿದ್ರೆಗೆ ಜಾರಿದ ದರ್ಶನ್ ಬೆಳಗ್ಗೆ 6 ಗಂಟೆ ಸುಮಾರಿಗೆ ಎಚ್ಚರಗೊಂಡು ಕಾಫಿ ಸೇವಿಸದೆ ಬಿಸಿ ನೀರು ಕೇಳಿ ದರ್ಶನ್ ಪಡೆದುಕೊಂಡಿದ್ದಾರೆ‌. ಸಹಖೈದಿಗಳು ಮಾತನಾಡಲು ಯತ್ನಿಸಿದ್ರು ಅಷ್ಟಾಗಿ ಅವರ ಜೊತೆ ಬೇರೆಯದ ದರ್ಶನ್ ನಿಮ್ಮ ಸಹವಾಸ ಸಾಕಪ್ಪ ಎನ್ನುತ್ತ ದಯವಿಟ್ಟು ನನ್ನ ಪಾಡಿಗೆ ಬಿಟ್ಟು ಬಿಡಿ ಎಂದು ಕೊಠಡಿಯಲ್ಲಿ ಸುಮ್ಮನೆ ಕೂತಿದ್ದರು ಎನ್ನಲಾಗಿದೆ. 


ಜೈಲಿನ ಮೆನುವಿನಂತೆ ಬೆಳಿಗ್ಗೆ ಉಪ್ಪಿಟ್ಟು ಜೈಲ್ ಸಿಬ್ಬಂದಿ ಉಪ್ಪಿಟ್ಟು ನೀಡಿದ್ದು, ಡಿ-ಗ್ಯಾಂಗ್ ಜೈಲೂಟವನ್ನ ಸವಿಸಿದಿದ್ದಾರೆ. ಪವಿತ್ರಾ ಗೌಡಗೂ ಜೈಲೂಟ ಒಗ್ಗದೆ ರಾತ್ರಿ ನೀಡಿದ ಮುದ್ದೆ, ಅನ್ನ, ಚಪಾತಿ ತರಕಾರಿ ಸಾಂಬಾರ್ ಮತ್ತು ಮಜ್ಜಿಗೆ ಒಲ್ಲದ ಮನಸ್ಸಿನಿಂದ ಸೇವನೆ ಮಾಡಿದ್ದಾರೆ. ಐಷಾರಾಮಿ ಜೀವನ ನಡೆಸಿದ್ದ ಪವಿತ್ರಾಗೆ ಒಗ್ಗದ ಉಪ್ಪು ಕಾರ ರುಚಿ ಇಲ್ಲದ ಅರೆಬೆಂದ ಊಟ ಜೊತೆಗೆ ಚಾಪೆ ಮೇಲೆ ಸರಿಯಾಗಿ ನಿದ್ರಿಸಲಾಗದೆ ಚಡಪಡಿಸುತ್ತಿದ್ದಾರೆ. ಸೊಳ್ಳೆಗಾಳ ಕಾಟದಿಂದ ಮತ್ತಷ್ಟು ಹೈರಾಣಾದ ಪವಿತ್ರಾ ಸಹಖೈದಿಗಳ ಜೊತೆ ಸಹ ಬೇರೆಯದೆ ಮೌನಕ್ಕೆ ಶರಣಾಗಿದ್ದು, ರಾತ್ರಿ ಬೇಗ ಮಲಗಿದರು ಪದೇ ಪದೇ ಎಚ್ಚರಗೊಳ್ಳುತ್ತಿದ್ದ ಪವಿತ್ರಾಗೆ ಜೈಲುವಾಸ ನರಕದಂತಾಗಿದೆ. ಇನ್ನೂ ಪರಪ್ಪನ ಅಗ್ರಹಾರಕ್ಕೆ ನಮ್ಮನೆ ಸುಮ್ಮನೆ ಆಶ್ರಮದ ಟ್ರಸ್ಟಿ ಮಂಗಳಮುಖಿ ನಕ್ಷತ್ರ ಜೈಲಿನ ಬಳಿ ಆಗಮಿಸಿ ನಟ ದರ್ಶನ್ ಗ್ಯಾಂಗ್ನ A11 ಆರೋಪಿ ನಾಗರಾಜ್ನ ಭೇಟಿಯಾದರು. ಆಶ್ರಮದ ಕಟ್ಟಡ ನಿರ್ಮಾಣಕ್ಕೆ ನಟ ದರ್ಶನ ಆರ್ಥಿಕ ನೆರವು ನೀಡಿದ್ದಾರೆ. ದರ್ಶನ್ ತಪ್ಪು ಮಾಡಿದ್ದರೆ ಶಿಕ್ಷೆಯಾಗಲಿ, ನಮಗೆ ಅನ್ನ ನೀಡಿದ್ದಾರೆ ಹಾಗಾಗಿ ಭೇಟಿಗೆ ಬಂದಿದ್ದೆವೆ ಎಂದರು. 


 ಇನ್ನೂ ನಟ ದರ್ಶನ್ ನೋಡಲು ಪತ್ನಿ ವಿಜಯಲಕ್ಷ್ಮೀ ಮಗ ವಿನೀಶ್ ಕಪ್ಪು ಬಣ್ಣದ ಕಿಯಾ ಕಾರಿನಲ್ಲಿ ಆಗಮಿಸಿದ್ದರು. ಮಾಧ್ಯಮಗಳ ಕ್ಯಾಮಾರಾ ಕಂಡು ಬೆರೋಂದು ಕಾರಿನ ಮೂಲಕ ಮಾಧ್ಯಮದವರ ಕಣ್ತಪ್ಪಿಸಿ ಜೈಲಿನ ಒಳಹೋಗಿ ದರ್ಶನ್ ರನ್ನ ಭೇಟಿ ಮಾಡಿದರು. ದರ್ಶನ್ ಪತ್ನಿ ಮತ್ತು ಮಗನ ಬಳಿ ಕಣ್ಣೀರು ಹಾಕಿದ್ದ, ಮಗ ವಿನೀಶ್ ಹಾಗೂ ಪತ್ನಿ ವಿಜಯಲಕ್ಷ್ಮಿ ನೋಡುತ್ತಿದ್ದಂತೆ ದರ್ಶನ್ ಬಾವುಕರಾಗಿದ್ದಾರೆ. ಮಗನನ್ನು ತಬ್ಬಿಕೊಂಡು ಕೆಲ ಹೊತ್ತು ದರ್ಶನ್ ಕಣ್ಣೀರು ಹಾಕಿ ಮಗ ವಿನೀಶ್ ನನ್ನು ತಬ್ಬಿಕೊಂಡು ಮುದ್ದಾಡಿದ್ದಾರೆ. ಪತ್ನಿ ಬಳಿ ನಡೆದ ಘಟನೆಯ ಬಗ್ಗೆ ಕೆಲ ಮಾತುಗಳನ್ನಾಡಿದ ದರ್ಶನ್ ಕಾನೂನು ಹೋರಾಟದ ಬಗ್ಗೆ ದರ್ಶನ್ ಗೆ ಪತ್ನಿ ಮಾಹಿತಿ ನೀಡಿದ್ದು, ದರ್ಶನ್ ಗೆ ಧೈರ್ಯ ತುಂಬಿದ ಪತ್ನಿ ವಿಜಯಲಕ್ಷ್ಮೀ ಕೆಲ ಸಮಯದ ಬಳಿಕ ಜೈಲಿನಿಂದ ವಾಪಸ್ ಹೊರಟರು. ಜೊತೆಗೆ ನಟ ದರ್ಶನ್ ಆಪ್ತ ವಿನೋದ್ ಪ್ರಭಾಕರ್ ಕೂಡ ದರ್ಶನ್ ರನ್ನ ಭೇಟಿ ಮಾಡಿ ಹೊರಬಂದ ಬಳಿಕ ಮಾಧ್ಯಮಗಳಿಗೆ  ದರ್ಶನ್ ಭೇಟಿ ಬಳಿಕ ನಟ ವಿನೋದ್ ಪ್ರಭಾಕರ್ ಹೇಳಿಕೆ ನೀಡಿದ್ದು, ಮೃತ ರೇಣುಕಾ ಸ್ವಾಮಿ ಅವರ ಆತ್ಮಕ್ಕೆ ಶಾಂತಿ ಸಿಗಲಿ ಅವರ ಕುಟುಂಬಕ್ಕೆ ನೋವನ್ನು ಬರಿಸುವ ಶಕ್ತಿ ನೀಡಲಿ‌. ದರ್ಶನ್ ಅವರನ್ನು ಭೇಟಿ ಮಾಡಿ ನಾಲ್ಕು ತಿಂಗಳು ಆಗಿತ್ತು, ಅವರ ಬರ್ತಡೇಗೆ ಭೇಟಿ ಮಾಡಿದ್ದೆ, ಮಾಧ್ಯಮಗಳಲ್ಲಿ ಬರುವುದನ್ನ ನೋಡಿ ವಿಚಾರ ತಿಳಿದುಕೊಂಡೆ. ದರ್ಶನ್ ಅವರು ಮೌನವಾಗಿದ್ರು, ನನನ್ನು ನೋಡಿತ್ತಿದ್ದಂತೆ ಏನ್ ಟೈಗರ್ ಅಂತ ಹೇಳಿದ್ರು ಅಷ್ಟೇ ನನ್ನ ಬಳಿ ಮಾತಾನಾಡಿದ್ದು, ಅವರಿಗೆ ಶೆಕ್ ಹ್ಯಾಂಡ್ ಮಾಡಿ ಹೊರಬಂದೆ. ದರ್ಶನ್ ಭೇಟಿಗೆ ಹೋದಾಗ ಸಾಕಷ್ಟು ಮಂಕಾಗಿದ್ದರು ಎಂದರು. 


 ಒಟ್ನಲ್ಲಿ ನಟ ದರ್ಶನ್ ಗೆಳತಿ ಪವಿತ್ರಾ ಅಂಡ್ ಟೀಮ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ತಮ್ಮ ಸ್ಥಿತಿ ಬಗ್ಹೆ ಪರಿತಪಿಸುತ್ತಿದ್ದಾರೆ. ಇತ್ತ ಆರೋಪಿಗಳ ಕುಟುಂಬಸ್ಥರು ಒಬ್ಬೊಬ್ಬರಾಗಿಯೇ ಜೈಲಿಗೆ ಭೇಟಿ ನೀಡಿ ತಮ್ಮವರನ್ನ ಭೇಟಿಯಾಗಿ ತೆರಳುತ್ತಿದ್ದು, ಜೈಲಿನಲ್ಲಿ ನಟ ದರ್ಶನ್ ಸೇರಿದಂತೆ ಪವಿತ್ರಾ ಗೌಡ ಜೈಲೂಟ ಒಗ್ಗದೆ,ನಿದ್ರೆ ಬಾರದೆ ಜೈಲಿನಲ್ಲಿ ವಿಲವಿಲ ಅಂತ ಒದ್ದಾಡುವಂತಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.