ಬೆಂಗಳೂರು : ಮಾನ್ಸೂನ್  ರಾಗ.. ನಟ ಡಾಲಿ ಧನಂಜಯ್ ಮತ್ತು ರಚಿತಾ ರಾಮ್ ಮುಖ್ಯ ಭೂಮಿಕೆಯಲ್ಲಿ ನಟಿಸಿರೋ ಸಿನಿಮಾ. ಸಿನಿಮಾ ಭರ್ಜರಿಯಾಗಿ ರಿಲೀಸ್ ಆಗಿದೆ. ಮನ್ಸೂನ್  ರಾಗ ಸಿನಿಮಾ ರಿಲೀಸ್ ಗೂ ಮುನ್ನ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಇದೀಗ ಸಿನಿಮಾ ನೋಡಿದ ಅಭಿಮಾನಿಗಳು ಡಾಲಿ ನಟನೆಯನ್ನ ಮೆಚ್ಚಿಕೊಂಡಿದ್ದಾರೆ. ಸಿನಿಮಾದಲ್ಲಿ ರಚಿತಾ ರಾಮ್ ವೇಶ್ಯೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗಾದ್ರೆ ನಿಜಕ್ಕೂ ಮಾನ್ಸೂನ್ ರಾಗ ಸಿನಿಮಾ ಹೇಗಿದೆ ಅನ್ನೋದ್ರ ಪಕ್ಕಾ ರಿವ್ಯೂ ಇಲ್ಲಿದೆ..


COMMERCIAL BREAK
SCROLL TO CONTINUE READING

ಮಾನ್ಸೂನ್ ರಾಗ ಸಿನಿಮಾದ ಓಪನಿಂಗ್ ನಲ್ಲಿ ಅಚ್ಯುತ್ ರಾವ್ ಅವರ ಎಂಟ್ರಿ ಹಾಡಿನ ಮೂಲಕವಾಗುತ್ತೆ.ರಾಜು ಅನ್ನೋ ಪಾತ್ರದಲ್ಲಿ ಸಖತ್ ಮೋಡಿ ಮಾಡಿದ್ದಾರೆ. ಅಟೆಂಡೆರ್ ಕೆಲಸ ಮಾಡೋ ರಾಜು ವಯಸ್ಸಾದರೂ ಯಾಕೆ ಮದುವೆ ಆಗಿಲ್ಲ ಅನ್ನೋ ಪ್ರಶ್ನೆ ಎಲ್ಲರನ್ನೂ ಕಾಡುತ್ತಿರುತ್ತೆ. ಆ ಪ್ರಶ್ನೆಗೆ ಉತ್ತರ ಬೇಕು ಅಂದ್ರೆ ಸಿನಿಮಾ ಕೊನೆಯವರೆಗೆ ನೋಡಲೇಬೇಕು.


ಇದನ್ನೂ ಓದಿ : ಬಿಗ್‌ ಬಾಸ್‌ ಸೀಸನ್‌ 9 ಆರಂಭಕ್ಕೆ ಡೇಟ್‌ ಫಿಕ್ಸ್‌ : ಒಂಟಿಮನೆಯಲ್ಲಿ ವಾಸ ಮಾಡೋರು ಇವ್ರೆ ನೋಡಿ..!


ಮಾನ್ಸೂನ್ ರಾಗ್ ಸಿನಿಮಾದಲ್ಲಿ ನಾಲ್ಕು ಲವ್ ಸ್ಟೋರಿಯನ್ನ ನೋಡಬಹುದು. ಕೆಲವೊಂದು ಕಡೆ ಏನಾಗುತ್ತಿದೆ ಅನ್ನೋದು ಅರ್ಥವೇ ಆಗಲ್ಲ. ಕೆಲವೊಂದು ಕಡೆ ಈ ಸೀನ್ ಅನಾವಶ್ಯಕ ಅನಿಸಿದ್ದು ಉಂಟು. ವೇಶ್ಯೆ ವೃತ್ತಿ ಮಾಡುತ್ತಿದ್ದ ಆಸ್ಮಾ (ರಚಿತಾ ರಾಮ್ )ಗೆ ಎಣ್ಣೆ ಹೊಡೆಯೋ ಅಭ್ಯಾಸವಿರುತ್ತೆ. ರಾತ್ರಿ ಎಂಟಾದ್ರೆ ಬಾರ್ ಮುಂದೆ ಹಾಜರು. ಆಗ ಬಾರಿನಲ್ಲಿ ಕೆಲಸ ಮಾಡೋ ಕಟ್ಟೆ (ಡಾಲಿ) ಗೆ ಆಸ್ಮಾ ಮೇಲೆ  ಪರೀತಿ ಮೂಡುತ್ತದೆ. ಒಂದು ವರ್ಷ ಬರೀ ಕಣ್ಣು ನೋಡಿ ಪ್ರೀತಿ ಮಾಡೋ ಕಟ್ಟೆಗೆ ತಾನು ಪ್ರೀತಿ ಮಾಡಿದ್ದು ವೇಶ್ಯೆ ಅನ್ನೋ ಸತ್ಯ  ಗೊತ್ತಾದ ಮೇಲೆ ಏನಾಗುತ್ತೆ ಅನ್ನೋದನ್ನ ತಿಳಿಯಬೇಕಾದರೆ ಸಿನಿಮಾ ಮಂದಿರಕ್ಕೆ ಬರಲೇ ಬೇಕು. 


ಮೊದಲಾರ್ಧ ಸ್ವಲ್ಪ ಬೋರು ಅನಿಸಿದರೂ, ಎರಡನೇ ಭಾಗದಲ್ಲಿ ಕಥೆಯಲ್ಲಿ ರೋಚಕ ಟ್ವಿಸ್ಟ್ ಸಿಗುತ್ತೆ. ರಾಜು ಪಾತ್ರದಲ್ಲಿ ಅಚ್ಯುತ್ ರಾವ್ ಇಡೀ ಸ್ಕ್ರೀನ್ ತುಂಬಿಕೊಂಡಿದ್ದಾರೆ. ಹಾಸಿನಿ ಪಾತ್ರದಲ್ಲಿ ಸುಹಾಸಿನಿ ಮ್ಯಾಜಿಕ್ ಮಾಡಿದ್ದಾರೆ. ಬಾಲ್ಯ,ಯವ್ವನಾ ಮತ್ತು ಹಿರಿ ವಯಸ್ಸಿನ ಪ್ರೇಮ್ ಕಹಾನಿಯನ್ನ ಇಲ್ಲಿ ಕಾಣಬಹುದು. ಡಾಲಿಯ ಪಂಚಿಗ್ ಡೈಲಾಗ್ ಮಸ್ತ್ ಅನಿಸುತ್ತೆ. ಫೈಟ್ ಸೀನ್ ಕೂಡ ನೋಡಲು ಥ್ರಿಲ್ ಕೊಡುತ್ತೆ. ಕೆಲವು ಕಡೆ ಎಮೋಷನಲ್ ಕೂಡ ಆಗಬಹುದು. ಕೊಟ್ಟ ಕಾಸಿಗೆ ಮನರಂಜನೆ ಸಿಗೋದರಲ್ಲಿ ಡೌಟ್ ಇಲ್ಲ. ಆದರೆ ಡಾಲಿಗಿರೋ ಟ್ಯಾಲೆಂಟ್ ಗೆ ನೋಡಿ ಮಾಡಿ ಕಥೆ ಆಯ್ಕೆ ಮಾಡಿಕೊಂಡರೆ ಸೂಕ್ತ ಅನಿಸುತ್ತೆ.
ರವೀಂದ್ರನಾಥ್ ನಿರ್ದೇಶನದ ಈ ಸಿನಿಮಾಗೆ ವಿಖ್ಯಾತ್ ನಿರ್ಮಾಣವಿದೆ. ಅನೂಪ್ ಸೀಳಿನ್ ಸಂಗೀತವಿದೆ. ಇಡೀ ಸಿನಿಮಾ ಮಳೆಯಲ್ಲೇ ಮುಳುಗಿದೆ.ಕ್ಯಾಮರಾ ವರ್ಕ್ ಅದ್ಬುತವಾಗಿದೆ. ಲೊಕೇಶನ್ ಕಣ್ಣಿಗೆ ಹಬ್ಬ ಕೊಡುತ್ತೆ.


ಇದನ್ನೂ ಓದಿ : ʼಆ ಬೆತ್ತಲೆ ಫೋಟೋ ನಂದಲ್ಲʼ : ವಿಚಾರಣೆ ವೇಳೆ ರಣವೀರ್‌ ಸಿಂಗ್‌ ಶಾಕಿಂಗ್‌ ಹೇಳಿಕೆ


 



ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.