ಸದಾ ಸೋಷಿಯಲ್ ಮಿಡಿಯಾದಲ್ಲಿ ಆಕ್ಟಿವ್ ಆಗಿರುವ ನಿರ್ದೇಶಕ ರಾಮ್ ಗೋಪಾಲ್ ವರ್ಮಾ (RGV tweet on Pushpa Trailer) , ಒಂದಿಲ್ಲೊಂದು ರೀತಿಯಲ್ಲಿ ಸುದ್ದಿಯಲ್ಲಿರುತ್ತಾರೆ. ಇದೀಗ ತೆಲುಗು ಸ್ಟಾರ್ ನಟರಿಗೆ ಸವಾಲೆಸೆಯುವ ಮೂಲಕ ಅವರ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. 


COMMERCIAL BREAK
SCROLL TO CONTINUE READING

'ಪುಷ್ಪ' (Pushpa) ಚಿತ್ರದ ಟ್ರೈಲರ್ ರಿಲೀಸ್​ ಆಗಿದ್ದು, ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿದೆ. ಅಲ್ಲು ಅರ್ಜುನ್ (Allu Arjun) ಅವರ ಬಹುನಿರೀಕ್ಷಿತ ಚಿತ್ರ 'ಪುಷ್ಪ: ದಿ ರೈಸ್' (Pushpa: The Rise) ಚಿತ್ರದ ಒಂದೊಂದು ಅಪ್ಡೇಟ್‌ಗಳು ಮಿಲಿಯನ್ಸ್‌ಗಟ್ಟಲೆ ವೀವ್ಸ್‌ ಪಡೆಯುತ್ತಿವೆ. 


ಮೈತ್ರಿ ಮೂವೀ ಮೇಕರ್ಸ್ ಸಂಸ್ಥೆ (Mythri Movie Makers) ಈ ಚಿತ್ರವನ್ನು ಅದ್ದೂರಿಯಾಗಿ ನಿರ್ಮಾಣ ಮಾಡುತ್ತಿದ್ದು, ಅಲ್ಲು ಅರ್ಜುನ್ ರಕ್ತ ಚಂದನ ಕಳ್ಳಸಾಗಾಣಿಕೆ ಮಾಡುವ ಲಾರಿ ಚಾಲಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಅಲ್ಲೂ ಅಭಿನಯಕ್ಕೆ ಹೇಗಿರಬಹುದು ಎಂಬುದಕ್ಕೆ ಟ್ರೈಲರ್ ಸಾಕ್ಷಿಯಾಗಿದೆ.


ಇದನ್ನೂ ಓದಿ: Vicky Kaushalಗಿಂತಲೂ ಸಿರಿವಂತೆ Katrina Kaif, ಯಾರ ಬಳಿ ಎಷ್ಟು ಸಂಪತ್ತು?


ಚಿತ್ರದಲ್ಲಿ ನ್ಯಾಷನಲ್ ಕ್ರಷ್‌ ರಶ್ಮಿಕಾ ಮಂದಣ್ಣ (Rashmika Mandanna) ಶ್ರೀವಲ್ಲಿಯಾಗಿ ನಟಿಸಿದ್ದಾರೆ. ಈ ಸಿನಿಮಾದ ಮೇಕಿಂಗ್​(Making)ಗೆ ಸಿನಿಮಾರಂಗದ ಗಣ್ಯಾತಿಗಣ್ಯರೇ ಫಿದಾ ಆಗಿದ್ದಾರೆ. ಟ್ರೈಲರ್​​ ನೋಡಿದ ಸ್ಟಾರ್​ಗಳು ಕೂಡ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. 


ಈ ಮಧ್ಯೆ ಸದಾ ವಿವಾದಕ್ಕೀಡಾಗುವ ನಿರ್ದೇಶಕ ರಾಮ್ ಗೋಪಾಲ್ ವರ್ಮಾ (RGV) ಅವರ ಟ್ವೀಟರ್ ಪೋಸ್ಟ್​ವೊಂದು ಇದೀಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. 


"ನೈಜ ಪಾತ್ರದಲ್ಲಿ ನಟಿಸಲು ಭಯಪಡದ ಏಕೈಕ ಸೂಪರ್ ಸ್ಟಾರ್ ಅಲ್ಲು ಅರ್ಜುನ್. ನಾನು ಪವನ್​ ಕಲ್ಯಾಣ್​, ಮಹೇಶ್​ ಬಾಬು, ಚಿರಂಜೀವಿ, ರಜನಿಕಾಂತ್​  ಮತ್ತು ಇತರ ಎಲ್ಲಾ ನಟರಿಗೆ ಸವಾಲು ಮಾಡುತ್ತೇನೆ. ಪುಷ್ಪ ಹೂ ಅಲ್ಲ..ಇದು ಬೆಂಕಿ (PUSHPA is not FLOWER ..it’s FIRE)" ಎಂದು ಟ್ವೀಟ್ ಮಾಡಿದ್ದಾರೆ.


 



 


ಅವರ ಪೋಸ್ಟ್ ನೋಡಿ ಸ್ಟಾರ್​ ನಟರ ಅಭಿಮಾನಿಗಳು​ ಅಸಮಾಧಾನಗೊಂಡಿದ್ದಾರೆ. ಹಲವಾರು ನೆಟ್ಟಿಗರು ಮೊದ್ಲು ಪೋಸ್ಟ್ ಡಿಲೀಟ್ ಮಾಡಿ ಎಂದು ಒತ್ತಾಯಿಸುತ್ತಿದ್ದಾರೆ.