14 ದಿನಗಳ ನ್ಯಾಯಾಂಗ ಬಂಧನಕ್ಕೆ Rhea Chakraborty, ಜಾಮೀನು ಅರ್ಜಿ ಕೂಡ ತಿರಸ್ಕೃತ
NCB ಕೋರಿಕೆಯ ಮೇರೆಗೆ ರಿಯಾ ಚಕ್ರವರ್ತಿಯನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.
ನವದೆಹಲಿ: ಸುಶಾಂತ್ ಸಿಂಗ್ ರಜಪೂತ್ (Sushant Singh Rajput) ಪ್ರಕರಣದಲ್ಲಿ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ ) ರಿಯಾ ಚಕ್ರವರ್ತಿಯನ್ನು ಬಂಧಿಸಿದೆ. ಮೂರು ದಿನಗಳಲ್ಲಿ ಸುಮಾರು 30 ಗಂಟೆಗಳ ಕಾಲ ಅವರನ್ನು ಪ್ರಶ್ನಿಸಲಾಗಿದೆ. ವಿಚಾರಣೆ ವೇಳೆ ರಿಯಾ ತಾನು ಸುಶಾಂತ್‌ಗೆ ಡ್ರಗ್ಸ್ ನೀಡುತ್ತಿದ್ದೆ ಎಂದು ಒಪ್ಪಿಕೊಂಡಿದ್ದಾಳೆ. ಎನ್‌ಸಿಬಿಯ ಕೋರಿಕೆಯ ಮೇರೆಗೆ ರಿಯಾ ಚಕ್ರವರ್ತಿಯನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.
14 ದಿನಗಳ ನ್ಯಾಯಾಂಗ ಬಂಧನಕ್ಕೆ ರಿಯಾ
ವಿಚಾರಣೆಯ ಬಳಿಕ ರಿಯಾ ಚಕ್ರವರ್ತಿಯನ್ನು ವಶಕ್ಕೆ ಪಡೆದು ನಂತರ ಸಾಯನ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ವಾಡಿಕೆಯಂತೆ ಅಲ್ಲಿ ಅವರ ಮೇಲೆ ಮೆಡಿಕಲ್ ಟೆಸ್ಟ್ ನಡೆಸಲಾಗಿದೆ. ಬಳಿಕ ರಿಯಾ ಚಕ್ರವರ್ತಿಯನ್ನು ಪುನಃ NCBಯ ಅಧಿಕೃತ ಕಚೆರಿಯಾಗಿರುವ ಎಕ್ಸ್ಚೇಂಜ್ ಬಿಲ್ಡಿಂಗ್ ಗೆ ಕರೆತರಲಾಗಿದ್ದು, ವಿಡಿಯೋ ಕಾನ್ಫಾರೆನ್ಸಿಂಗ್ ಮೂಲಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಆಲಿ ನ್ಯಾಯಾಲಯ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ಹೊರಡಿಸಿದೆ.
ಜಾಮೀನು ಅರ್ಜಿ ತಿರಸ್ಕರಿಸಿದ ನ್ಯಾಯಾಲಯ
ರಿಯಾ ಚಕ್ರವರ್ತಿಯನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಬಳಿಕ ರಿಯಾ ಪರ ವಕೀಲರು ಜಾಮೀನಿಗಾಗಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು . ಈ ಅರ್ಜಿಯ ವಿಚಾರಣೆ ನಡೆಸಿರುವ ನ್ಯಾಯಾಲಯ ರಿಯಾ ಚಕ್ರವರ್ತಿ ಅವರ ಜಾನೀನು ಅರ್ಜಿಯನ್ನು ತಿರಸ್ಕರಿಸಿದೆ. ಹೀಗಾಗಿ ಮುಂದಿನ 14 ದಿನಗಳ ಕಾಲ ರಿಯಾ ಜೈಲಿನಲ್ಲಿ ಕಂಬಿ ಎಣಿಸುವ ಪರಿಸ್ಥಿತಿ ಎದುರಾಗಿದೆ. ಆದರೆ, ಇಂದು ರಾತ್ರಿ ರಿಯಾ ಚಕ್ರವರ್ತಿಯನ್ನು ಎಕ್ಸ್ಚೇಂಜ್ ಬಿಲ್ಡಿಂಗ್ ನ ಮೂರನೇ ಮಹಡಿಯಲ್ಲಿರುವ ಲಾಕ್ ಅಪ್ ನಲ್ಲಿ ಇರಿಸಲಾಗುತ್ತಿದ್ದು , ನಾಳೆ ಬೆಳಗ್ಗೆ ಭಾಯ್ಖಲಾದಲ್ಲಿ ಮಹಿಳೆಯರಿಗೆಂದೇ ನಿರ್ಮಿಸಲಾಗಿರುವ ಜೈಲಿಗೆ ಶಿಫ್ಟ್ ಮಾಡಲಾಗುವುದು ಎಂದು ಮೂಲಗಳು ಮಾಹಿತಿ ನೀಡಿವೆ. ಆ ಬಳಿಕ ರಿಯಾ ಪರ ವಕೀಲರು ರಿಯಾ ಜಾಮೀನಿಗಾಗಿ ಮೇಲಿನ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬೇಕಾಗಿದೆ.