South Actress Sara Arjun: ಸಲ್ಮಾನ್ ಖಾನ್, ಐಶ್ವರ್ಯಾ ರೈ ಬಚ್ಚನ್, ರಾಜ್‌ಕುಮಾರ್ ರಾವ್ ಮತ್ತು ಇತರರೊಂದಿಗೆ ಕೆಲಸ ಮಾಡಿದ ಈ ಸ್ಟಾರ್ ಕಿಡ್ ಅನೇಕ ಹಿಟ್ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ ಮತ್ತು ಉದ್ಯಮದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದಾರೆ. ನಾವು ಹೇಳುತ್ತಿರುವ ನಟಿ ಬೇರೆ ಯಾರೂ ಅಲ್ಲ ಸೌತ್ ಚಿತ್ರರಂಗದ ಖ್ಯಾತ ನಟಿ ಸಾರಾ ಅರ್ಜುನ್.


COMMERCIAL BREAK
SCROLL TO CONTINUE READING

ಸಾರಾ ಅರ್ಜುನ್ ಎರಡು ದಶಕಗಳಿಂದ ತೆಲುಗು ಮತ್ತು ಹಿಂದಿ ಚಿತ್ರರಂಗದಲ್ಲಿ ಹೆಸರುವಾಸಿಯಾಗಿರುವ ನಟ ರಾಜ್ ಅರ್ಜುನ್ ಅವರ ಪುತ್ರಿ. ಅನುರಾಗ್ ಕಶ್ಯಪ್ ಅವರ ಬ್ಲ್ಯಾಕ್ ಫ್ರೈಡೇ ಚಿತ್ರದ ಮೂಲಕ ಪಾದಾರ್ಪಣೆ ಮಾಡಿ.. ನಂತರ ಅವರು ರೌಡಿ ರಾಥೋಡ್, ರಯೀಸ್, ಸೀಕ್ರೆಟ್ ಸೂಪರ್ ಸ್ಟಾರ್, ಡಿಯರ್ ಕಾಮ್ರೇಡ್ ಮತ್ತು ತಲೈವಿಯಂತಹ ಚಿತ್ರಗಳಲ್ಲಿ ಕೆಲಸ ಮಾಡಿದರು.


ಇದನ್ನೂ ಓದಿ-Kriti Kharbanda: ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡ್ರಾ ʼಗೂಗ್ಲಿʼ ನಟಿ? .. ಪೋಟೋಸ್‌ ವೈರಲ್!‌


ಸಾರಾ ಕೇವಲ ಒಂದೂವರೆ ವರ್ಷದವಳಿದ್ದಾಗ ಮನರಂಜನಾ ಜಗತ್ತಿನಲ್ಲಿ ತನ್ನ ಪ್ರಯಾಣವನ್ನು ಪ್ರಾರಂಭಿಸಿದಳು... ನಂತರ ಸಾರಾ ಅನೇಕ ಜಾಹೀರಾತುಗಳಲ್ಲಿಯೂ ನಟಿಸಿದ್ದರು..ಇವರು ತಮ್ಮ 5 ನೇ ವಯಸ್ಸಿನಲ್ಲಿ 404 ಸಿನಿಮಾದ ಮೂಲಕ ಹಿಂದಿಗೆ ಪಾದಾರ್ಪಣೆ ಮಾಡಿದರು. ಇದರ ನಂತರ, ಸಾರಾ ಅರ್ಜುನ್ ಸಲ್ಮಾನ್ ಖಾನ್ , ಐಶ್ವರ್ಯಾ ರೈ ಅವರಂತಹ ಸೂಪರ್‌ಸ್ಟಾರ್‌ಗಳೊಂದಿಗೆ ದೊಡ್ಡ ಬಜೆಟ್ ಚಿತ್ರಗಳಲ್ಲಿ ಕೆಲಸ ಮಾಡುವುದನ್ನು ಮುಂದುವರೆಸಿದರು. 


ಇದನ್ನೂ ಓದಿ-Bollywood: ಬಾಲಿವುಡ್ ಬೆಡಗಿ ..! ಇದೀಗ ಗಾರ್ಜಿಯಸ್ ಲುಕ್‌ನಲ್ಲಿ ಮಿಂಚಿಂಗ್‌ !!


ಸಹಾರಾ ಅರ್ಜುನ್ 2021 ರಲ್ಲಿ ಮಣಿರತ್ನಂ ಅವರ ಪೊನ್ನಿಯಿನ್ ಸೆಲ್ವನ್ ಚಿತ್ರದಲ್ಲಿ ನಂದಿನಿ ಪಾತ್ರವನ್ನು ನಿರ್ವಹಿಸಿದ್ದರು.. ಇದೇ ಅವರಿಗೆ ದೊಡ್ಡ ಬ್ರೇಕ್ ನೀಡಿದ್ದು... ಅವರು ಚಿತ್ರದ ಭಾಗ 1 ರಲ್ಲಿ ಸಣ್ಣ ಪಾತ್ರವನ್ನು ಹೊಂದಿದ್ದರು, ಆದರೆ ಭಾಗ 2 ರಲ್ಲಿ ದೊಡ್ಡ ಪಾತ್ರವನ್ನು ಮಾಡಿದರು.. ಎರಡು ಭಾಗಗಳ ಚಿತ್ರವು ಭಾಕ್ಸಾಫಿಸ್‌ನಲ್ಲಿ 800 ಕೋಟಿ ರೂ ಗಳಿಸಿತು ಮತ್ತು ಈ ಯುವ ನಟಿಗೆ ಭಾರತದಾದ್ಯಂತ ದೊಡ್ಡ ಮನ್ನಣೆಯನ್ನು ನೀಡಿತು.


17 ನೇ ವಯಸ್ಸಿನಲ್ಲಿ ಈ ನಟಿಯ ನಿವ್ವಳ ಮೌಲ್ಯವು 10 ಕೋಟಿ ರೂಪಾಯಿಗಳಾಗಿದ್ದು, ಅವರು ಭಾರತದ ಅತ್ಯಂತ ಶ್ರೀಮಂತ ಬಾಲ ಕಲಾವಿದೆಯಾಗಿದ್ದರು.. ಆದರೆ, ಈಗ ಆಕೆಗೆ 18 ವರ್ಷ ತುಂಬುತ್ತಿದ್ದಂತೆ ಈ ಟ್ಯಾಗ್ ಕಳೆದುಕೊಂಡಿದ್ದಾರೆ.. ಸದ್ಯ ನಟಿಯಾಗಿ ಗುರುತಿಸಿಕೊಳ್ಳುತ್ತಿರುವ ಈಕೆ ಪ್ರತಿ ಚಿತ್ರಕ್ಕೆ 4 ಲಕ್ಷ ರೂ.ಗಳನ್ನು ತೆಗೆದುಕೊಳ್ಳುತ್ತಾರೆ ಎನ್ನಲಾಗಿದೆ.. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.