Richest South Indian Actor: ಸೌತ್ ಫಿಲ್ಮ್ ಇಂಡಸ್ಟ್ರಿ ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಬಾಹುಬಲಿ, ಕೆಜಿಎಫ್, ಆರ್‌ಆರ್‌ಆರ್ ಚಿತ್ರಗಳು ಎಲ್ಲೆ ಮೀರಿ ಜಗತ್ತಿನಾದ್ಯಂತ ಅಭಿಮಾನಿಗಳನ್ನು ಗಳಿಸಿವೆ. ಬಾಕ್ಸ್‌ ಆಫಿಸ್‌ ಕೊಳ್ಳೆ ಹೊಡೆದಿವೆ. ಅನೇಕ ಸೌತ್ ಸಿನಿಮಾಗಳು ಪ್ಯಾನ್-ಇಂಡಿಯಾ ಮಟ್ಟದಲ್ಲಿಯೂ ಬ್ಲಾಕ್ ಬಸ್ಟರ್ ಹಿಟ್‌ ಆಗಿವೆ. ಈಗ, ದಕ್ಷಿಣದ ಅನೇಕ ನಟರು ತಮ್ಮ ಸಂಭಾವನೆಯನ್ನ ಭಾರೀ ಪ್ರಮಾಣದಲ್ಲಿ ಹೆಚ್ಚಿಸಿದ್ದಾರೆ.


COMMERCIAL BREAK
SCROLL TO CONTINUE READING

ವರದಿಯ ಪ್ರಕಾರ, ಸುಮಾರು 430 ಕೋಟಿ ಆಸ್ತಿ ಹೊಂದಿರುವ ರಜನಿಕಾಂತ್ ಜೈಲರ್ ಚಿತ್ರಕ್ಕಾಗಿ 110 ಕೋಟಿ ಸಂಭಾವನೆ ಪಡೆದಿದ್ದಾರೆ. ಮಾಸ್ಟರ್ ಮತ್ತು ಬೀಸ್ಟ್‌ನಂತಹ ಹಿಟ್ ಚಿತ್ರಗಳನ್ನು ನೀಡಿದ ದಳಪತಿ ವಿಜಯ್ ತಮ್ಮ ಇತ್ತೀಚಿನ ಚಿತ್ರ ಲಿಯೋಗಾಗಿ 130 ಕೋಟಿ ಸಂಭಾವನೆ ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ವಿಕ್ರಮ್ ಬ್ಲಾಕ್ ಬಸ್ಟರ್ ಯಶಸ್ಸಿನ ನಂತರ ಕಮಲ್ ಹಾಸನ್ ಕೂಡ ತಮ್ಮ ಸಂಭಾವನೆ ಹೆಚ್ಚಿಸಿದ್ದಾರೆ ಎನ್ನಲಾಗಿದೆ. ಇಂಡಿಯನ್-2 ಸಿನಿಮಾಗಾಗಿ 150 ಕೋಟಿ ಸಂಭಾವನೆ ಕೇಳಿದ್ದಾರೆ ಎಂದು ಹೇಳಲಾಗುತ್ತಿದೆ.


ಇದನ್ನೂ ಓದಿ: ಇವರೇ ಈ ಬಾರಿಯ ಬಿಗ್ ಬಾಸ್ ವಿನ್ನರ್! ನಿಜವಾಗುವುದೇ ಇಬ್ಬರು ಗುರೂಜಿಗಳ ಭವಿಷ್ಯವಾಣಿ 


ಅಕ್ಕಿನೇನಿ ನಾಗಾರ್ಜುನ ದಕ್ಷಿಣ ಚಿತ್ರರಂಗದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ವರದಿಯ ಪ್ರಕಾರ, ನಾಗಾರ್ಜು ಅವರ ಒಟ್ಟು ಆಸ್ತಿ 3010 ಕೋಟಿ ರೂಪಾಯಿ. ದಕ್ಷಿಣ ಭಾರತದ ಅತ್ಯಂತ ಶ್ರೀಮಂತ ನಟ ಎಂಬ ಖ್ಯಾತಿ ಇವರದ್ದಾಗಿದೆ. 


ಕಳೆದ 30 ವರ್ಷಗಳಲ್ಲಿ 100 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ನಾಗಾರ್ಜುನ ಪ್ರತಿ ಪ್ರಾಜೆಕ್ಟ್‌ಗೆ ಸುಮಾರು 9 ರಿಂದ 20 ಕೋಟಿ ವರೆಗೆ ಸಂಭಾವನೆ ಪಡೆಯುವರು. ಇದಲ್ಲದೆ, ಅವರು ತಮ್ಮ ಸ್ವಂತ ನಿರ್ಮಾಣ ಕಂಪನಿ ಅನ್ನಪೂರ್ಣ ಸ್ಟುಡಿಯೋಸ್ ಅಡಿಯಲ್ಲಿ ಚಲನಚಿತ್ರಗಳನ್ನು ನಿರ್ಮಿಸುವ ಮೂಲಕ ಹಣವನ್ನು ಗಳಿಸುತ್ತಿದ್ದಾರೆ. ಇದಲ್ಲದೇ, ರಿಯಲ್ ಎಸ್ಟೇಟ್ ಮತ್ತು ಇಂಡಿಯನ್ ಸೂಪರ್ ಲೀಗ್‌ನಲ್ಲಿ ಹೂಡಿಕೆ ಮಾಡಿದ್ದಾರೆ. ನಾಗಾರ್ಜುನ, ಕೇರಳ ಬ್ಲಾಸ್ಟರ್ಸ್ ಎಫ್‌ಸಿ ಸಹ-ಮಾಲೀಕರಾಗಿದ್ದಾರೆ. ಇವುಗಳ ಹೊರತಾಗಿ, ಬ್ರಾಂಡ್ ಎಂಡಾರ್ಸ್‌ಮೆಂಟ್‌ಗಳಿಂದಲೂ ಗಳಿಸುತ್ತಾರೆ.


ನಾಗಾರ್ಜುನ ಅವರದ್ದು ಐಷಾರಾಮಿ ಜೀವನಶೈಲಿ. ದುಬಾರಿ ಕಾರುಗಳು, ಐಷಾರಾಮಿ ಮನೆ, ಕೋಟಿಗಟ್ಟಲೆ ಮೌಲ್ಯದ ಆಧುನಿಕ ಖಾಸಗಿ ಜೆಟ್ ಮತ್ತು ಇತರ ಐಷಾರಾಮಿ ಆಸ್ತಿಗಳಿಗೆ ಇವರು ಒಡೆಯ. ಹೈದರಾಬಾದ್‌ನಲ್ಲಿ ರೂ.45 ಕೋಟಿ ಮೌಲ್ಯದ ಭವ್ಯವಾದ ಬಂಗಲೆ ಮತ್ತು ದುಬಾರಿ ಕಾರುಗಳ ಗ್ಯಾರೇಜ್ ಅನ್ನು ಹೊಂದಿದ್ದಾರೆ.


ದಕ್ಷಿಣದ ಕೆಲವು ಶ್ರೀಮಂತ ನಟರು


ಸಂಪತ್ತಿನ ವಿಚಾರದಲ್ಲಿ ಇತರ ಕೆಲವು ನಟರೂ ನಾಗಾರ್ಜುನ ಅವರಿಗೆ ಕಾಂಪಿಟೇಟರ್‌ ಆಗಿದ್ದಾರೆ. ವಿಕ್ಟರಿ ವೆಂಕಟೇಶ್ ರೂ. 2200 ಕೋಟಿ, ಮೆಗಾಸ್ಟಾರ್ ಚಿರಂಜೀವಿ ರೂ.1650 ಕೋಟಿ ಆಸ್ತಿ ಹೊಂದಿದ್ದಾರೆ ಎಂದು ವರದಿಯಾಗಿದೆ. ಈ ಪಟ್ಟಿಯಲ್ಲಿ ನಾಲ್ಕನೇ ಹೆಸರು ಚಿರಂಜೀವಿ ಅವರ ಪುತ್ರ ರಾಮ್ ಚರಣ್. ಅವರ ನಿವ್ವಳ ಮೌಲ್ಯ 1370 ಕೋಟಿ. ಇವರಲ್ಲದೆ, ದಳಪತಿ ವಿಜಯ್, ಜೂನಿಯರ್ ಎನ್‌ಟಿಆರ್, ಕಮಲ್ ಹಾಸನ್ ಮತ್ತು ಅಲ್ಲು ಅರ್ಜುನ್ ಕೂಡ ನೂರಾರು ಕೋಟಿ ಆಸ್ತಿಗೆ ಒಡೆಯರಾಗಿದ್ದಾರೆ.  


ಇದನ್ನೂ ಓದಿ: Bharathi Vishnuvardhan: ಅನಾರೋಗ್ಯದಿಂದ ಹಾಸಿಗೆ ಹಿಡಿದ ಹಿರಿಯ ನಟಿ ಭಾರತಿ ವಿಷ್ಣುವರ್ಧನ್ 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.