Rishab Shetty : ʼದಾದಾಸಾಹೇಬ್ ಫಾಲ್ಕೆ ಪ್ರಶಸ್ತಿʼ ಹಿಂದಿ ಕಾಂತಾರಕ್ಕೆ ಕೊಟ್ಟಿದ್ದು, ಕನ್ನಡಕ್ಕೆ ಅಲ್ಲ..!
ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಹಿಂದಿ ಸಿನಿಮಾಗೆ ಕೊಟ್ಟಿದ್ದಾರೆ, ಕನ್ನಡ ಸಿನಿಮಾಗೆ ಅಲ್ಲ. ಪ್ರಶಸ್ತಿ ಸಿಕ್ಕದ್ದು ತುಂಬಾ ಖುಷಿ ತಂದಿದೆ. ಜವಾಬ್ದಾರಿ ಹೆಚ್ಚಾಯಿತು ಅನಿಸುತ್ತದೆ ಎಂದು ನಟ, ನಿರ್ದೇಶಕ ರಿಷಬ್ ಶೆಟ್ಟಿ ಹೇಳಿದ್ದಾರೆ. ಇದೇ ವೇಳೆ ಕಾಂತಾರ 2 ಕೆಲಸವನ್ನು ಶುರು ಮಾಡುವುದಾಗಿ ಅಪ್‌ಡೆಟ್ ನೀಡಿದರು.
Rishab Shetty : ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಹಿಂದಿ ಸಿನಿಮಾಗೆ ಕೊಟ್ಟಿದ್ದಾರೆ, ಕನ್ನಡ ಸಿನಿಮಾಗೆ ಅಲ್ಲ. ಪ್ರಶಸ್ತಿ ಸಿಕ್ಕದ್ದು ತುಂಬಾ ಖುಷಿ ತಂದಿದೆ. ಜವಾಬ್ದಾರಿ ಹೆಚ್ಚಾಯಿತು ಅನಿಸುತ್ತದೆ ಎಂದು ನಟ, ನಿರ್ದೇಶಕ ರಿಷಬ್ ಶೆಟ್ಟಿ ಹೇಳಿದ್ದಾರೆ. ಇದೇ ವೇಳೆ ಕಾಂತಾರ 2 ಕೆಲಸವನ್ನು ಶುರು ಮಾಡುವುದಾಗಿ ಅಪ್‌ಡೆಟ್ ನೀಡಿದರು.
ಸೋಮವಾರ ಮುಂಬೈನಲ್ಲಿ ನಡೆದ ದಾದಾಸಾಹೇಬ್ ಫಾಲ್ಕೆ ಇಂಟರ್‌ನ್ಯಾಶನಲ್ ಫಿಲ್ಮ್ ಫೆಸ್ಟಿವಲ್ ಅವಾರ್ಡ್ಸ್ ಸಮಾರಂಭದಲ್ಲಿ ರಿಷಬ್ ಶೆಟ್ಟಿ ಅತ್ಯಂತ ಭರವಸೆಯ ನಟ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪ್ರಶಸ್ತಿ ಸ್ವೀಕರಿಸಲು ಆಗಮಿಸಿದ ಡಿವೈನ್ ಸ್ಟಾರ್ ಕಪ್ಪು ಶರ್ಟ್ ಮತ್ತು ಬಿಳಿ ಪಂಚೆ ತೊಟ್ಟಿದ್ದರು. ಅಲ್ಲದೆ, ತಮ್ಮ ಪ್ರಶಸ್ತಿಯನ್ನು ಪುನೀತ್ ರಾಜ್‌ಕುಮಾರ್ ಮತ್ತು ನಿರ್ದೇಶಕ ಎಸ್‌ಕೆ ಭಗವಾನ್ ಅವರಿಗೆ ಅರ್ಪಿಸಿದ್ದಾರೆ.
ಇದನ್ನೂ ಓದಿ: ಪವಿತ್ರ ಶ್ರೀಕಾಳಹಸ್ತಿ ದೇಗುಲದಲ್ಲಿ ಮಂಗ್ಲಿ ಸಾಂಗ್ ಶೂಟಂಗ್..! ಪರ್ಮಿಷನ್ ಹೇಗೆ ಸಿಕ್ತು..?
ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಪಶಸ್ತಿ ಪಡೆದ ಖುಷಿಯನ್ನು ಮಾಧ್ಯಮದವರೊಂದಿಗೆ ರಿಷಬ್ ಹಂಚಿಕೊಂಡರು ಈ ವೇಳೆ ಅವರು, ಇದು ಕಾಂತಾರ ಹಿಂದಿ ಸಿನಿಮಾಗೆ ಕೊಟ್ಟ ಪ್ರಶಸ್ತಿ, ಕನ್ನಡ ಸಿನಿಮಾಗೆ ಅಲ್ಲ. ಪ್ರಶಸ್ತಿ ಸಿಕ್ಕಿದ್ದು ತುಂಬಾ ಖುಷಿ ತಂದಿದೆ. ಜವಾಬ್ದಾರಿ ಹೆಚ್ಚು ಆಯ್ತು ಅನ್ನಿಸುತ್ತೆ. ಕನ್ನಡ ಸಿನಿಮಾಗಳ ಬಗ್ಗೆ ವಿಶೇಷ ಗೌರವ ಬರ್ತಾ ಇದೆ. ನಮ್ಮ ಟ್ರಡೀಷನ್ ನಲ್ಲೇ ಹೋಗಿದ್ದೆ. ಅಲ್ಲಿದ್ದವರೆಲ್ಲಾ ಗುರುತಿಸಿದ್ರು. ಇನ್ಮುಂದೆ ಕಾಂತಾರ 2 ಕೆಲಸ ಶುರು ಮಾಡುತ್ತೇನೆ. ಮಾರ್ಚ್ ನಿಂದ ಫೋನ್ ಆಫ್ ಮಾಡುತ್ತೇನೆ ಅಂತ ಹೇಳಿದರು.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.