SIIMA 2023 ದಲ್ಲೂ ʼಕಾಂತಾರʼ ಅಬ್ಬರ..! ದಿ ಡಿವೈನ್ ಚಿತ್ರಕ್ಕೆ ಸಾಲು ಸಾಲು ಅವಾರ್ಡ್
SIIMA Awards 2023 : ʼಕಾಂತಾರʼ ಚಿತ್ರಕ್ಕೆ ಬೆನ್ನೆಲುಬಾಗಿದ್ದಂತಹ ದೈವ ನರ್ತಕರಾದ ಮುಖೇಶ್ ಲಕ್ಷ್ಮಣ್ ಅವರು ದುಬೈನಲ್ಲಿ ಸೈಮಾ ಪ್ರಶಸ್ತಿ ಸ್ವೀಕರಿಸಿದ್ದಾರೆ. ಎಲೆಮರೆಕಾಯಿಯಂತಿದ್ದ ದೈವ ನರ್ತಕರು ಇಂದು ಪ್ರತಿಷ್ಠಿತ ʼಸೈಮಾʼ ಪ್ರಶಸ್ತಿ ಪಡೆದಿದ್ದಾರೆ.
Kantara SIIMA 2023 : ಕಳೆದ ವರ್ಷ ಬಿಡುಗಡೆಗೊಂಡ ಕಾಂತಾರ ಸಿನಿಮಾದ ಅಲೆ ಇನ್ನೂ ಕಡಿಮೆಯಾಗಿಲ್ಲ. ದುಬೈನಲ್ಲಿ ನಡೆದ ಸೈಮಾ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಕಾಂತಾರ ಸಿನಿಮಾ 10 ಅವಾರ್ಡ್ ಗಳನ್ನು ಬಾಚಿಕೊಂಡಿದೆ. ಹೊಂಬಾಳೆ ಫಿಲಂಸ್ ಲಾಂಛನದಲ್ಲಿ ವಿಜಯ್ ಕಿರಗಂದೂರ್ ಅವರು ನಿರ್ಮಿಸಿ, ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿದ ಸಿನಿಮಾ "ಕಾಂತಾರ", ಕಳೆದ ವರ್ಷ ಬಿಡುಗಡೆಯಾಗಿ ದೇಶದೆಲ್ಲೆಡೆ ಉತ್ತಮ ಪ್ರಶಂಸೆಗಳಿಸಿತ್ತು. ಪ್ರಸ್ತುತ ಸೈಮಾ ಅವಾರ್ಡ್ಸ್ ನಲ್ಲಿ ಅತ್ಯುತ್ತಮ ನಟನೆಗೆ, ನಿರ್ದೇಶನಕ್ಕೆ ಹಾಗು ಪಾಥ್ ಬ್ರೇಕಿಂಗ್ ಸ್ಟೋರಿಗೆ ಸ್ಪೆಷಲ್ ಅಪ್ರಿಸಿಯೇಷನ್ ಅವಾರ್ಡ್ ಸೇರಿ ಒಟ್ಟು 3 ಅವಾರ್ಡ್ ಗಳು ರಿಷಬ್ ಶೆಟ್ಟಿಯವರಿಗೆ ದೊರಕಿದೆ.
ವಿಶೇಷವಾಗಿ ʼಕಾಂತಾರʼ ಚಿತ್ರಕ್ಕೆ ಬೆನ್ನೆಲುಬಾಗಿದ್ದಂತಹ ದೈವ ನರ್ತಕರಾದ ಮುಖೇಶ್ ಲಕ್ಷ್ಮಣ್ ಅವರು ದುಬೈನಲ್ಲಿ ಸೈಮಾ ಪ್ರಶಸ್ತಿ ಸ್ವೀಕರಿಸಿದ್ದಾರೆ. ಎಲೆಮರೆಕಾಯಿಯಂತಿದ್ದ ದೈವ ನರ್ತಕರು ಇಂದು ಪ್ರತಿಷ್ಠಿತ ʼಸೈಮಾʼ ಪ್ರಶಸ್ತಿ ಪಡೆದಿದ್ದಾರೆ. ಇಂತಹ ಜಗಮೆಚ್ಚಿದ ಚಿತ್ರದ ನಿರ್ದೇಶಕರಾದ ರಿಷಭ್ ಶೆಟ್ಟಿ ಅವರಿಗೆ ಅಭಿನಂದನೆ ಸಲ್ಲಬೇಕು.
ಇದನ್ನೂ ಓದಿ: ಉಪೇಂದ್ರ ʼಯುಐʼ ಟೀಸರ್ ರಿಲೀಸ್..! ಫ್ಯಾನ್ಸ್ ತಲೆಗೆ ಹುಳ ಬಿಟ್ಟ ಬುದ್ದಿವಂತ.. ಟ್ಯಾಲೆಂಟ್ ಇದ್ರೆ ತಿಳ್ಕೋರಿ..
ಉಳಿದಂತೆ ಅತ್ಯುತ್ತಮ ನಟಿ, ಖಳನಟ, ಹಾಸ್ಯನಟ, ಸಂಗೀತ ನಿರ್ದೇಶಕ, ಗಾಯಕ, ಸಾಹಿತಿ ಸೇರಿದಂತೆ ಒಟ್ಟು 10 ಅವಾರ್ಡ್ಸ್ ಕಾಂತಾರ ಸಿನಿಮಾ ಗೆದ್ದು ಸದ್ದು ಮಾಡಿದೆ. ಇದುವರೆಗೆ ಸೈಮಾ ಅವಾರ್ಡ್ಸ್ ನಲ್ಲಿ ಅತೀ ಹೆಚ್ಚು ಅವಾರ್ಡ್ ಗಳನ್ನು ಪಡೆದ ಚಿತ್ರ ಎಂಬ ಹೆಗ್ಗಳಿಕೆಗೆ ಕಾಂತಾರ ಪಾತ್ರವಾಗಿದೆ. ಒಟ್ಟಾರೆ ಕನ್ನಡ ಸಿನಿಮಾ ಈ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿದೆ ಎಂಬುದು ಹೆಮ್ಮೆಯ ವಿಷಯ. ಇದೀಗ ʼಕಾಂತಾರ 2ʼ ಚಿತ್ರ ಬರವಣಿಗೆ ಹಂತದಲ್ಲಿದ್ದು, ಪ್ರೇಕ್ಷಕರಲ್ಲಿ ಮತ್ತಷ್ಟು ನಿರೀಕ್ಷೆ ಹೆಚ್ಚು ಮಾಡಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.