Kantara on Amazon Prime : ದೇಶಾದ್ಯಂತ ಅಬ್ಬರಿಸಿದ ಕನ್ನಡಿಗನ ದಿ ಡಿವೈನ್‌ ಬ್ಲಾಕ್ಬಸ್ಟರ್ ಸಿನಿಮಾ ʼಕಾಂತಾರʼ ಇದೀಗ ಓಟಿಟಿಯಲ್ಲಿ ದಾಖಲೆಗಳನ್ನು ಧೂಳಿಪಟ ಮಾಡಲು ಸಿದ್ದವಾಗಿದೆ. ನಾಳೆ ಅಂದ್ರೆ ನ.24 ರಂದು ಕಾಂತಾರ ಸಿನಿಮಾ ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾಗಲಿದ್ದು, ಈ ಕುರಿತು ಸ್ವತಃ ಓಟಿಟಿ ಅಮೆಜಾನ್ ಪ್ರೈಮ್ ಇಂಡಿಯಾ ಅಧಿಕೃತವಾಗಿ ಮಾಹಿತಿ ನೀಡಿದೆ.


COMMERCIAL BREAK
SCROLL TO CONTINUE READING

ಭಾರತ ಸಿನಿ ಬಾಕ್ಸ್‌ ಆಫೀಸ್‌ನಲ್ಲಿ 400 ಕೋಟಿ ರೂ. ಗೆದ್ದು, ಚಿತ್ರಮಂದಿಗಳನ್ನು ದೇಗುಲವನ್ನಾಗಿಸಿ ಭಾರತೀಯರ ಪ್ರೀತಿಗಳಿಸಿರುವ ರಿಷಬ್‌ ಶೆಟ್ಟಿ ಕಾಂತಾರ ಸಿನಿಮಾ ನಾಳೆ ನ.24ರಂದು ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾಗಲಿದೆ. ಚಿತ್ರಮಂದಿರಲ್ಲಿ ನೋಡುವ ಅವಕಾಶ ಕಳೆದುಕೊಂಡವರು ಕುಟುಂಬದ ಜೊತೆ ಮನೆಯಲ್ಲಿಯೇ ಕುಳಿತು ನೋಡಬಹುದಾಗಿದೆ. ಕೇವಲ 16 ಕೋಟಿ ರೂ.ನಲ್ಲಿ ನಿರ್ಮಾಣವಾದ ಸಿನಿಮಾ ಇದೀಗ 400 ಕೋಟಿ ಗಳಿಸುವ ಮೂಲಕ ದಾಖಲೆ ನಿರ್ಮಿಸಿದೆ. ಅಲ್ಲದೆ ಬಿಗ್‌ ಬಜೆಟ್‌ ಸಿನಿಮಾ ತಯಾರಕರ ನಿದ್ದೆಗೆಡಿಸಿ ಮುನ್ನುಗ್ಗುತ್ತಿದೆ.


ಇದನ್ನೂ ಓದಿ: ʼಮಿಸ್ಟರ್ ಅಂಡ್ ಮಿಸಸ್ ರಾಜಾಹುಲಿʼ ಟೈಟಲ್‌ ಲಾಂಚ್‌ : ಮರುಕಳಿಸುತ್ತಾ ʼರಾಜಾಹುಲಿʼ ದಿನಗಳು..!


ಸೆ.30 ರಂದು ಬಿಡುಗಡೆಯಾದ ಸಿನಿಮಾ ಇಂದಿಗೂ ಚಿತ್ರಮಂದಿರಗಳಲ್ಲಿ ಅಬ್ಬರಿಸುತ್ತಿದೆ. 50 ದಿನಗಳನ್ನು ದಾಟಿ ಮುನ್ನುಗ್ಗುತ್ತಲೇ ಇದೆ. ಹೊಂಬಾಳೆ ಫಿಲಂಸ್ ಬ್ಯಾನರ್‌ ಅಡಿಯಲ್ಲಿ ನಿರ್ಮಾಣವಾದ ಕಾಂತಾರ ಸಿನಿಮಾವನ್ನು ರಿಷಬ್‌ ಶೆಟ್ಟಿ ನಿರ್ದೇಶಿಸಿ ನಟಿಸಿದ್ದಾರೆ. ಚಿತ್ರದಲ್ಲಿ ಸಪ್ತಮಿಗೌಡ, ಕಿಶೋರ್‌, ಅಚ್ಯುತ್ ಕುಮಾರ್ ಸೇರಿದಂತೆ ಬಹುದೊಡ್ಡ ತಾರಾಬಳಗ ಇದೆ. ಅಲ್ಲದೆ, ಪ್ರತಿಯೊಬ್ಬ ಕಲಾವಿದರೂ ಸಹ ಸಿನಿಮಾದಲ್ಲಿ ನಟಿಸದೇ ಜೀವಿಸಿದ್ದರು ಅಂದ್ರೆ ತಪ್ಪಾಗಲಾರದು.


ಮೊದಲು ಕನ್ನಡದಲ್ಲೇ ಬಿಡುಗಡೆಯಾದ ಸಿನಿಮಾಗೆ ದೇಶಾದ್ಯಂತ ಬಹು ಬೇಡಿಕೆ ಪ್ರಾರಂಭವಾಯಿತು. ಪ್ರೇಕ್ಷಕರು ಸೇರಿದಂತೆ ಸ್ಟಾರ್‌ ನಟರು ಸಹ ಡಬ್ಬಿಂಗ್‌ ಮಾಡುವಂತೆ ಮನವಿ ಮಾಡಿದ್ದರು. ನಂತರ ತಮಿಳು, ತೆಲುಗು, ಹಿಂದಿ, ಮಲಯಾಳಂ ಭಾಷೆಯಲ್ಲಿ ಚಿತ್ರ ಬಿಡುಗಡೆಯಾಯಿತು. ಕಾಂತಾರ ಅಬ್ಬರ ಹೇಗಿತ್ತು ಅಂದ್ರೆ ಭಾರತೀಯ ಸಿನಿ ರಂಗದ ದಿಗ್ಗಜರಾದ ಸೂಪರ್‌ ಸ್ಟಾರ್‌, ರಜನಿಕಾಂತ, ಬಿಗ್ ಬಿ ಅಮಿತಾಭ್, ಸೇರಿದಂತೆ ಖ್ಯಾತ ನಟ, ನಟಿಯರು ಮತ್ತು ವಿಮರ್ಶಕರಿಂದ ಉತ್ತಮ ಪ್ರಶಂಸೆ ಪಡೆಯಿತು.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.