ಬೆಂಗಳೂರು : ದುನಿಯಾ ವಿಜಯ ಡಾಲಿ ಧನಂಜಯ ಅಭಿನಯದ ಸಲಗ ಸಿನಿಮಾವನ್ನ ರಿಷಬ್ ಶೆಟ್ಟಿ ಹಾಡಿ ಹೊಗಳಿದ್ದಾರೆ.


COMMERCIAL BREAK
SCROLL TO CONTINUE READING

ಈ ಕುರಿತು ಟ್ವಿಟ್ಟರ್ ನಲ್ಲಿ ಬರೆದುಕೊಂಡಿರುವ ರಿಷಬ್(Rishab Shetty), ಸಲಗ ರಾ, ಎಂಟರ್ಟೈನಿಂಗ್, ಮಜಾ ಫಸ್ಟ್ ಹಾಫ್, ಸುಂದರವಾದ, ಭಾವನಾತ್ಮಕ ಸೆಕೆಂಡ್ ಆಫ್ ಎಂದಿದ್ದಾರೆ. ಮತ್ತೆ ದುನಿಯಾ ವಿಜಯ ಅವರಿಗೆ ಟ್ಯಾಗ್ ಮಾಡಿ ವಿಜಯ ಸರ್, ಅವರ ನಾಯಕತ್ವ ಅಲ್ಲಿ ಎಲ್ಲರದು ಅದ್ಬುತ ಬ್ಯಾಟಿಂಗ್ ಮತ್ತೆ ಡಾಲಿ ಧನಂಜಯ ಅವ್ರು ಖಡಕ್ ಪೊಲೀಸ್ ಪಾತ್ರದಲ್ಲಿ ಅದ್ಭುತವಾಗಿ ನಟಿಸಿದ್ದಾರೆ. ಚರಣ್ ರಾಜ್ ಅವರ ಮ್ಯೂಸಿಕ್ ಅದ್ಭುತವಾಗಿ ಬಂದಿದೆ ಎಂದು ಹದಿ ಹೊಗಳಿದ್ದಾರೆ.


ಇದನ್ನೂ ಓದಿ : Sameer Wankhede ಹಾಗೂ Shah Rukh Khan ಈ ಮೊದಲೂ ಕೂಡ ಮುಖಮುಖಿಯಾಗಿದ್ದಾರೆ


ಸಧ್ಯ ಬಾಕ್ಸ್ ಆಫೀಸ್‌ನಲ್ಲಿ 'ಸಲಗ' ಸಿನಿಮಾ(Salaga Film) ಭರ್ಜರಿ ಸೌಂಡ್ ಮಾಡುತ್ತಿದೆ. ಅ.14 ರಂದು ತೆರೆ ಕಂಡ ಈ ಸಿನಿಮಾ ರಾಜ್ಯಾದ್ಯಂತ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಇಂದಿಗೆ ಸಿನಿಮಾ ತೆರೆಕಂಡು 
11 ದಿನಗಳಾಯ್ತು. ಆದರೆ, ಈವರೆಗೂ ಸಿನಿಮಾ ತಂಡ ಅಧಿಕೃತವಾಗಿ ಕಲೆಕ್ಷನ್ ಬಗ್ಗೆ ಮಾಹಿತಿ ಹಂಚಿಕೊಂಡಿಲ್ಲ. 


Duniya Vijay) ಅವರು ಸಖತ್ ಖುಷಿಯಲ್ಲಿದ್ದಾರೆ. ಬಹಳ ದಿನಗಳ ಬಳಿಕ ಅವರ ಸಿನಿಮಾವೊಂದು ತೆರೆಕಂಡು ಸೂಪರ್ ಹಿಟ್ ಎನಿಸಿಕೊಂಡರೆ, ಅವರ ಚೊಚ್ಚಲ ನಿರ್ದೇಶನಕ್ಕೂ ಪ್ರೇಕ್ಷಕ ಜೈ ಎಂದಿದ್ದಾನೆ. 'ಇಂಥದ್ದೊಂದು ಸಕ್ಸಸ್ ನನಗೆ ಬೇಕಿತ್ತು' ಎಂದು ಅವರು ಹೇಳಿದ್ದಾರೆ ಕೂಡ.


ಈ ಸಿನಿಮಾ ಪಕ್ಕಾ ಭೂಗತಲೋಕದ ಕಥೆಯದ್ದಾಗಿದೆ. ಇದರಲ್ಲೊಂದು ಸೇಡಿನ ಕಥೆ ಇದೆ. ಇಂಥ ಎಳೆ ಇಟ್ಟುಕೊಂಡು ಈಗಾಗಲೇ ಅನೇಕ ಸಿನಿಮಾಗಳು ಬಂದಿದ್ದರೂ ಕೂಡ ಅದ್ದೂರಿ ಮೇಕಿಂಗ್​ನಿಂದಾಗಿ ದುನಿಯಾ ವಿಜಯ್​ ಗಮನ ಸೆಳೆಯುತ್ತಾರೆ. 


ಇದನ್ನೂ ಓದಿ : Aryan Khan Case : ಮುಂಬೈ ರೇವ್ ಪಾರ್ಟಿ ಪ್ರಕರಣದ ಈ ಇಬ್ಬರು ಆರೋಪಿಗಳಿಗೆ ಬಿಗ್ ರಿಲೀಫ್!


ಸಿನಿಮಾದ ಒನ್​ ಲೈನ್ ಕಥೆ ಬಗ್ಗೆ ಹೇಳೋದಾದರೆ; ವಿಜಯ್​ ಅಲಿಯಾಸ್​ ಸಲಗ ಎಂಬುವವನು ನಟೋರಿಸ್​ ರೌಡಿ(Notorious Rowdy). ಯಾರನ್ನು ಕೊಲೆ ಮಾಡಲೂ ಆತ ಹೇಸುವುದಿಲ್ಲ. ಅಷ್ಟಕ್ಕೂ ಅವನು ಯಾಕೆ ಅಂಥ ರೌಡಿ ಆದ? ಊರ ತುಂಬೆಲ್ಲ ಅವನಿಗೆ ಯಾಕೆ ದುಶ್ಮನ್​ಗಳು ಇದ್ದಾರೆ? ಅವರನ್ನೆಲ್ಲ ಆತ ಹೇಗೆ ಮಟ್ಟ ಹಾಕುತ್ತಾನೆ? ಸಲಗನ ಎದೆಯೊಳಗೆ ಹೊತ್ತಿಕೊಂಡಿರುವ ಸೇಡಿನ ಬೆಂಕಿಗೆ ಕಾರಣ ಏನು? ಇದನ್ನೆಲ್ಲ ತಿಳಿಯಲು ಪೂರ್ತಿ ಚಿತ್ರ ನೋಡಬೇಕು. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ