ಬೆಂಗಳೂರು: ಈ ವರ್ಷ ಕನ್ನಡ ಇಂಡಸ್ಟ್ರಿಯಿಂದ ನಮಗೆ ಸಿಕ್ಕ ಮತ್ತೊಂದು ರತ್ನ ರಿಷಬ್ ಶೆಟ್ಟಿಯವರ 'ಕಾಂತಾರ' ಸಿನಿಮಾ ಎಂದರೆ ಅದು ತಪ್ಪಾಗಲಾರದು. ಹೌದು, ಈಗ ಇದು ಇಡೀ ದೇಶದಲ್ಲಿ ತನ್ನ ವಿಭಿನ್ನ ಕಥಾ ಹಂದರದಿಂದಾಗಿ ದೇಶದಲ್ಲೆಡೆ ಸಾಕಷ್ಟು ಚರ್ಚೆಗೆ ಒಳಗಾಗಿದೆ.


COMMERCIAL BREAK
SCROLL TO CONTINUE READING

ಕೇವಲ 16 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಚಿತ್ರ ಈಗ ಬಾಕ್ಸ್ ಆಫೀಸ್ ನಲ್ಲಿ 400 ಕ್ಕೂ ಅಧಿಕ ಕೋಟಿ ರೂ ಗಳಿಸುವ ಮೂಲಕ ಅತಿ ಹೆಚ್ಚು ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿದ ಭಾರತೀಯ ಸಿನಿಮಾಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.ಕೇವಲ ದೊಡ್ಡ ಬಜೆಟ್ ಸಿನಿಮಾಗಳು ಮಾತ್ರ ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡಬಲ್ಲವು ಎನ್ನುವುದನ್ನು ಮಾತನ್ನು ಅದು ಸುಳ್ಳಾಗಿಸಿದೆ.


ಇದನ್ನೂ ಓದಿ : ಕಿರಿಮಗನ ಲವ್ ಸ್ಟೋರಿ: ಒಂದೇ ಕುಟುಂಬದ ಮೂವರು ಆತ್ಮಹತ್ಯೆ..!


ಈಗ ಈ ವರ್ಷ ರಾಜಮೌಳಿ ನಿರ್ದೇಶನದ ಆರ್.ಆರ್.ಆರ್ ಸಿನಿಮಾ ಆಸ್ಕರ್ ಪ್ರಶಸ್ತಿಗೆ ನಾಮ ನಿರ್ದೇಶನವಾಗಿದೆ.ಇದಾದ ಬೆನ್ನಲ್ಲೇ ಈಗ ಕನ್ನಡದ ಸಿನಿಮಾವೊಂದು ಜಾಗತಿಕವಾಗಿ ಪ್ರತಿಷ್ಠಿತ ಪ್ರಶಸ್ತಿ ಕಣಕ್ಕೆ ಇಳಿಯುತ್ತಿರುವುದು ನಿಜಕ್ಕೂ ಶ್ಲಾಘನೀಯವಾಗಿದೆ.


ಹೊಂಬಾಳೆ ಪ್ರೊಡಕ್ಷನ್ಸ್‌ನ ವಿಜಯ್ ಕಿರಗಂದೂರು ಅವರು ಇಂಡಿಯಾ ಟುಡೇಗೆ ನೀಡಿದ ಇತ್ತೀಚಿನ ಸಂದರ್ಶನದಲ್ಲಿ ಅವರು ಚಲನಚಿತ್ರವನ್ನು ನಾಮನಿರ್ದೇಶನಕ್ಕೆ ಕಳುಹಿಸಿದ್ದಾರೆ ಎನ್ನುವ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.“ಕಾಂತಾರ ಚಿತ್ರಕ್ಕಾಗಿ ಆಸ್ಕರ್‌ಗಾಗಿ ಅರ್ಜಿ ಸಲ್ಲಿಸಿದ್ದೇವೆ ಮತ್ತು ಅಂತಿಮ ನಾಮನಿರ್ದೇಶನಗಳು ಇನ್ನೂ ಬರಬೇಕಾಗಿದೆ" ಎಂದು ಹೇಳಿದ್ದಾರೆ.ರಿಷಬ್ ಶೆಟ್ಟಿ ಬರೆದು ನಿರ್ದೇಶಿಸಿದ್ದಾರೆ ಮತ್ತು ಸಪ್ತಮಿ ಗೌಡ ಮತ್ತು ಕಿಶೋರ್ ಕುಮಾರ್ ಜಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.


ಇದನ್ನೂ ಓದಿ : Shocking: ಮುಗ್ಧ ಬಾಲಕಿಯ ಪ್ರಾಣ ಬಲಿ ಪಡೆದ ಪೆನ್ಸಿಲ್ ಸಿಪ್ಪೆ


ಆಸ್ಕರ್ ಶಾರ್ಟ್‌ಲಿಸ್ಟ್‌ಗಳಲ್ಲಿ 'ಆರ್‌ಆರ್‌ಆರ್ ':


ಅಕಾಡೆಮಿ ಆಫ್ ಮೋಷನ್ ಪಿಕ್ಚರ್ಸ್ ಆರ್ಟ್ಸ್ ಅಂಡ್ ಸೈನ್ಸಸ್ 2023 ರ ಆಸ್ಕರ್‌ನ 10 ವಿಭಾಗಗಳಲ್ಲಿ ಕಿರುಪಟ್ಟಿಗಳನ್ನು ಪ್ರಕಟಿಸಿದೆ. ಭಾರತೀಯ ಚಲನಚಿತ್ರಗಳಾದ 'ಆರ್‌ಆರ್‌ಆರ್', 'ದಿ ಲಾಸ್ಟ್ ಫಿಲ್ಮ್ ಶೋ' ಮತ್ತು 'ಆಲ್ ದಟ್ ಬ್ರೀತ್ಸ್' ವಿವಿಧ ವಿಭಾಗಗಳಲ್ಲಿ ನಾಮ ನಿರ್ದೇಶನಗೊಂಡಿವೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.