ಬೆಂಗಳೂರು : ದಿ ಡಿವೈನ್‌ ಬ್ಲಾಕ್‌ಬ್ಲಸ್ಟರ್‌ ಕಾಂತಾರ ಎಂಬ ಅದ್ಭುತ ಸಿನಿಮಾದ ಮೂಲಕ ನಟ, ನಿರ್ದೇಶಕ ರಿಷಬ್‌ ಶೆಟ್ಟಿ ಪ್ರಪಂಚಕ್ಕೆ ತುಳುನಾಡಿನ ಕಾರಣಿಕ ಶಕ್ತಿಗಳ ದರ್ಶನ ಮಾಡಿಸಿದ್ದಾರೆ. ಅಲ್ಲದೆ, ಪಂಜುರ್ಲಿ ಮತ್ತು ಗುಳಿಗ ದೈವದ ಮಹಿಮೆಯನ್ನು ಜಗತ್ತಿಗೆ ಸಾರಿ ಹೇಳಿದ್ದಾರೆ. ಅದ್ರೆ, ರಿಷಬ್‌ ಮಾತ್ರ ಈ ಒಂದು ದೈವವನ್ನು ನಂಬಿ ಪ್ರತಿಯೊಂದು ಕಾರ್ಯವನ್ನು ನಡೆಸುತ್ತಾರೆ... ಅವರು ಏನೇ ಮಾಡಿದ್ರೂ ತಮ್ಮ ಇಷ್ಟ ದೇವರ ಅಪ್ಪಣೆ ಪಡಿತಾರೆ... ರಿಷಬ್‌ ನಂಬಿರುವ ಆ ದೈವ ಯಾವುದು ಗೊತ್ತೇ.. ಹಾಗಿದ್ರೆ ಈ ವರದಿ ಓದಿ.


COMMERCIAL BREAK
SCROLL TO CONTINUE READING

ರಿಷಬ್‌ ಸಿನಿಮಾ ಕಾಂತಾರ ಭಾರತೀಯ ಚಿತ್ರರಂಗವಲ್ಲದೆ ಅನ್ಯ ದೇಶಗಳಲ್ಲಿಯೂ ಉತ್ತಮ ಪ್ರದರ್ಶನ ಕಂಡು ಪ್ರೇಕ್ಷಕರಿಂದ ಶಹಬ್ಬಾಸ್ ಎನಿಸಿಕೊಂಡಿದೆ. ಈ ನಡುವೆ ತಲೈವಾ ರಜನಿಕಾಂತ್ ಸೇರಿದಂತೆ ಭಾರತೀಯ ಚಿತ್ರರಂಗದ ದಿಗ್ಗಜರು ಕಾಂತಾರವನ್ನು ಹಾಡಿ ಹೊಗಳಿದ್ದಾರೆ. ಗುಳಿಗ ಮತ್ತು ಪಂಜುರ್ಲಿ ದೈವದ ಲೀಲೆಯನ್ನು ಅಖಂಡ ಭಾರತಕ್ಕೆ ಸಾರಿ ಹೇಳಿದ ರಿಷಬ್‌ ಶೆಟ್ಟಿ ನಂಬುವ ದೈವ ಉಡುಪಿಯ ಕೊರಂಗ್ರಪಾಡಿಯ ಶ್ರೀ ನೀಲಕಂಠ ಮಹಾಬಬ್ಬು ಸ್ವಾಮಿ.


ಇದನ್ನೂ ಓದಿ: Gandhada Gudi : ಕರುನಾಡ ಕಂದನಿಗೆ ಮಿಡಿದ ಅನಿವಾಸಿ ಭಾರತೀಯರ ಮನ! ವಿಶ್ವಾದ್ಯಂತ ಗಂಧದ ಗುಡಿ ಘಮಲು


ಹೌದು.. ಶ್ರೀ ನೀಲಂಕಠ ಮಹಾಬಬ್ಬು ಸ್ವಾಮಿ ಅಂದ್ರೆ ರಿಷಬ್ ಶೆಟ್ಟಿ ಅವರಿಗೆ ಅಪಾರ ಭಕ್ತಿ. ಯಾವುದೇ ಚಿತ್ರದಲ್ಲಿ ನಟಿಸುವ ಇಲ್ಲವೆ ನಿರ್ದೇಶನ ಮಾಡುವ ಮೊದಲು ಈ ದೇವಸ್ಥಾನಕ್ಕೆ ಅವರು ಭೇಟಿ ನೀಡುತ್ತಾರಂತೆ. ಅಲ್ಲದೆ, ಅಲ್ಲಿರುವ ಕೊರಗಜ್ಜ ಗುಡಿಯಲ್ಲಿ ದೈವದ ಅಪ್ಪಣೆ ಕೇಳುತ್ತಾರಂತೆ. ಇನ್ನು ಕಾಂತರ ಚಿತ್ರದ ಶೂಟಿಂಗ್‌ ಸಮಯದಲ್ಲೂ ಎದುರಾದ ಕೆಲ ವಿಘ್ನಗಳ ನಿವಾರಣೆಗೆ ಶ್ರೀ ನೀಲಕಂಠಸ್ವಾಮಿ ಕ್ಷೇತ್ರಕ್ಕೆ ಭೇಟಿ ನೀಡಿ ಪ್ರಾರ್ಥನೆ ಮಾಡಿಕೊಂಡಿದ್ದರಂತೆ.


ಪ್ರತಿಯೊಬ್ಬರಿಗೆ ಒಂದು ದೈವದ ಮೇಲೆ ಅಪಾರ ನಂಬಿಕೆ ಇರುತ್ತದೆ. ಆ ದೈವ ನಮ್ಮನ್ನ ಸದಾ ಕಾಯುತ್ತೆ ಎನ್ನುವ ಅಚಲ ಭಕ್ತಿ ಇರುತ್ತದೆ. ಅದರಂತೆ ಶ್ರೀ ನೀಲಕಂಠ ಮಹಾಬಬ್ಬು ಸ್ವಾಮಿ ರಿಷಬ್‌ ಶೆಟ್ಟಿ ಆರಾಧಿಸುವ ದೈವ ಎಂದು ಅವರ ಗೆಳೆಯ ಸಿಂಪಲ್‌ ಸ್ಟಾರ್‌ ರಕ್ಷಿತ್‌ ಶೆಟ್ಟಿ ಅವರು ಹೇಳಿದ್ದಾರೆ.  ಅಲ್ಲದೆ, ಇದೇ ದೈವವನ್ನು ರಕ್ಷಿತ್ ಶೆಟ್ಟಿಯವರು ಕೂಡ ನಂಬುತ್ತಾರೆ. ಅಲ್ಲದೆ ತಾವು ಮಾಡುವ ಪ್ರತಿಯೊಂದು ಕಾರ್ಯಕ್ಕೂ ಈ ಪವಿತ್ರ ದೇಗುಲಕ್ಕೆ ಭೇಟಿ ನೀಡಿ ಪ್ರಾರ್ಥಿಸುತ್ತಾರೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.