ಮುಂಬೈ: ಅಮೆರಿಕದಲ್ಲಿ ಕ್ಯಾನ್ಸರ್ ಚಿಕಿತ್ಸೆಗೆ ಒಳಗಾಗಿ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಭಾರತಕ್ಕೆ ಮರಳಿದ್ದ ನಟ ರಿಷಿ ಕಪೂರ್ (Rishi Kapoor) ಆರೋಗ್ಯದಲ್ಲಿ ವ್ಯತ್ಯಯ ಉಂಟಾದ ಹಿನ್ನೆಲೆಯಲ್ಲಿ ಅವರನ್ನು  ಮುಂಬೈನಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ರಿಷಿ ಕಪೂರ್ ಅವರ ಹಿರಿಯ ಸಹೋದರ ರಣಧೀರ್ ಕಪೂರ್ ಈ ಮಾಹಿತಿ ನೀಡಿದ್ದಾರೆ. 


COMMERCIAL BREAK
SCROLL TO CONTINUE READING

ಕ್ಯಾನ್ಸರ್ ನಿಂದ ಬಳಲುತ್ತಿರುವ 67 ವರ್ಷದ ರಿಷಿ ಕಪೂರ್ ಅವರಿಗೆ ಉಸಿರಾಟದ ತೊಂದರೆ ಕಂಡು ಬಂದ ಹಿನ್ನೆಲೆಯಲ್ಲಿ ಅವರನ್ನು ಬುಧವಾರ ಬೆಳಿಗ್ಗೆ ಎಚ್‌ಎನ್ ರಿಲಯನ್ಸ್ ಆಸ್ಪತ್ರೆಗೆ ದಾಖಲಿಸಿದೆ. ಸಹೋದರ ರಣಧೀರ್ ಅವರೊಂದಿಗೆ ಆಸ್ಪತ್ರೆಯಲ್ಲಿದ್ದು ರಿಷಿ ಕಪೂರ್ ಅವರನ್ನು ನೋಡಿಕೊಳ್ಳುತ್ತಿದ್ದಾರೆ. ಸದ್ಯ ಅವರ ಆರೋಗ್ಯ ಸುಧಾರಿಸುತ್ತಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.



ಕ್ಯಾನ್ಸರ್ ಚಿಕಿತ್ಸೆಗಾಗಿ ನ್ಯೂಯಾರ್ಕ್‌ಗೆ ತೆರಳಿದ್ದ ರಿಷಿ ಕಪೂರ್ ಮತ್ತು ನೀತು ಚಿಕಿತ್ಸೆ ಪೂರ್ಣಗೊಂಡ ಬಳಿಕ ನ್ಯೂಯಾರ್ಕ್‌ನಿಂದ ಮರಳಿದ್ದಾರೆ. ರಿಷಿ ಕಪೂರ್ ಚಿಕಿತ್ಸೆಗಾಗಿ ನ್ಯೂಯಾರ್ಕ್‌ನಲ್ಲಿದ್ದ ಸಂದರ್ಭದಲ್ಲಿ ಆಗಾಗ್ಗೆ ಆಲಿಯಾ ಮತ್ತು ರಣಬೀರ್ ಸಹ ಅವರನ್ನು ಭೇಟಿ ಮಾಡುತ್ತಿದ್ದರು.



2019 ರಲ್ಲಿ ರಿಷಿ ಕಪೂರ್ ಎರಡು ಪ್ರಾಜೆಕ್ಟ್ ಗಳನ್ನು ಮಾಡಿದರು - 'ಏಕ್ ಜೂಟಾ ಕಹಿನ್ ಕಾ' ಮತ್ತು ಇನ್ನೊಂದು 'ದಿ ಬಾಡಿ'. ಇತ್ತೀಚೆಗೆ ಅವರು ದೀಪಿಕಾ ಪಡುಕೋಣೆ ಅವರೊಂದಿಗೆ 'ದಿ ಇಂಟರ್ನ್' ಚಿತ್ರವನ್ನು ಘೋಷಿಸಿದ್ದಾರೆ. ಚಿತ್ರವನ್ನು ದೀಪಿಕಾ ಕಂಪನಿಯ ವಾರ್ನರ್ಸ್ ಬ್ರದರ್ಸ್ ಮತ್ತು ಅಜುರೆ ನಿರ್ಮಿಸಲಿದ್ದಾರೆ. 'ದಿ ಇಂಟರ್ನ್' ಚಿತ್ರದ ರಿಮೇಕ್‌ನಲ್ಲಿ ನಾನು ದೀಪಿಕಾ ಅವರೊಂದಿಗೆ ಹೊಸ ಪ್ರಯಾಣವನ್ನು ಪ್ರಾರಂಭಿಸುತ್ತಿದ್ದೇನೆ ಎಂದು ರಿಷಿ ಕಪೂರ್ ಕೂಡ ಟ್ವೀಟ್ ಮಾಡಿದ್ದಾರೆ.