ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ 'ರಾಬರ್ಟ್' ಚಿತ್ರ ತಂಡದಿಂದ ದಚ್ಚು ಅಭಿಮಾನಿಗಳಿಗೆ ರಂಜಾನ್ ಗಿಫ್ಟ್ ದೊರೆತಿದೆ. ದರ್ಶನ್ ತಮ್ಮ ಟ್ವಿಟ್ಟರ್ ಹ್ಯಾಂಡಲ್ ನಲ್ಲಿ ರಾಬರ್ಟ್ ಚಿತ್ರದ ಫಸ್ಟ್ ಲುಕ್ ಹಂಚಿಕೊಂಡಿದ್ದಾರೆ.


COMMERCIAL BREAK
SCROLL TO CONTINUE READING

ಚಿತ್ರತಂಡ ರಾಬರ್ಟ್ ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ಲುಕ್ ಹೇಗಿರುತ್ತದೆ ಎಂಬ ಸಸ್ಪೆನ್ಸ್ ಅನ್ನು ಹಾಗೆ ಉಳಿಸಿಕೊಂಡಿದೆ.


ಸಿನಿಮಾದ ಥೀಮ್ ಪೋಸ್ಟರ್ ನಲ್ಲಿ ದರ್ಶನ್ ಮುಖವನ್ನು ಮರೆಮಾಡಲಾಗಿದೆ. ಜಾಕೆಟ್ ಮಧ್ಯದಲ್ಲಿ 'ಗಜ'ನ ಚಿತ್ರ ಇರುವ ಕಪ್ಪು ಜಾಕೆಟ್ ತೊಟ್ಟು ದರ್ಶನ್ ಬೈಕ್ ಮೇಲೆ ಕುಳಿತಿದ್ದು, D BOOS ಎಂದು ಬೈಕ್ ನಂಬರ್ ಇದೆ.



ಸದ್ಯ #RoberrtThemePoster ಎನ್ನುವ ಹ್ಯಾಶ್ ಟ್ಯಾಗ್ ನಲ್ಲಿ ಚಿತ್ರದ ಪೋಸ್ಟರ್ ಟ್ರೆಂಡ್ ಆಗುತ್ತಿದೆ.


ಉಮಾಪತಿ ಫಿಲಂಸ್ ಬ್ಯಾನರ್ ಅಡಿಯಲ್ಲಿ, ತರುಣ್ ಕಿಶೋರ್ ಸುಧೀರ್ ‘ರಾಬರ್ಟ್’ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಚಿತ್ರದ ಹೆಸರು ‘ರಾಬರ್ಟ್’ ಕ್ರಿಶ್ಚಿಯನ್ ಧರ್ಮದ್ದಾದರೆ, ಮುಸಲ್ಮಾನರ ಪವಿತ್ರ ಹಬ್ಬ ರಂಜಾನ್ ದಿನದಂದು ಫಸ್ಟ್ ಲುಕ್ ಬಿಡುಗಡೆಗೊಂಡಿದೆ. ಇದಲ್ಲದೆ ಪೋಸ್ಟರ್​ನಲ್ಲಿ ಹಿಂದೂಗಳ ಆರಾಧ್ಯ ದೈವ ಹನುಮನಿದ್ದಾನೆ. ಒಟ್ಟಿನಲ್ಲಿ ‘ರಾಬರ್ಟ್’ ಸರ್ವಧರ್ಮ ಸಮ್ಮಿಲನ ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಹೈಪ್ ಕ್ರಿಯೇಟ್ ಮಾಡಿದೆ.