"ರಾಕಿಂಗ್ ಸ್ಟಾರ್" ಯಶ್ ಕನ್ನಡ ಚಿತ್ರ ರಂಗದ ಪ್ರಸಿದ್ದ ನಟರು. ಇವರು ಹಾಸನ ಜಿಲ್ಲೆಯ ಭುವನಹಳ್ಳಿಯಲ್ಲಿ ಜನವರಿ  8, 1986 ರಂದು ಜನಿಸಿದರು. ಇವರ ಹುಟ್ಟು ಹೆಸರು ನವೀನ್ ಕುಮಾರ್ ಗೌಡ. ಈ ಟಿವಿ ಚಾನೆಲ್ನಲ್ಲಿ ಪ್ರಸಾರವಗುತ್ತಿದ್ದ 'ನಂದ ಗೋಕುಲ' ಧಾರಾವಾಹಿಯಲ್ಲಿ ಅಭಿನಯಿಸುವ ಮೂಲಕ ಮೊದಲು ಅಭಿನಯಕ್ಕೆ ಕಾಲಿಟ್ಟರು. ಚಂದನವನದಲ್ಲಿ ರಾಕಿಂಗ್ ಸ್ಟಾರ್ ಎಂದೇ ಖ್ಯಾತಿ ಹೊಂದಿರುವ ಯಶ್, ಈಗ 'ಯಶೋಮಾರ್ಗ ಫೌಂಡೇಶನ್' ಮೂಲಕ ಸಾಮಾಜಿಕ ಸೇವೆಯಲ್ಲೂ ಸಕ್ರಿಯರಾಗಿದ್ದಾರೆ. ಇಂದು ಅವರು ತಮ್ಮ 32ನೇ ವಸಂತಕ್ಕೆ ಕಾಲಿರಿಸಿದ್ದಾರೆ. 


COMMERCIAL BREAK
SCROLL TO CONTINUE READING

2008ರಲ್ಲಿ 'ಮೊಗ್ಗಿನ ಮನಸ್ಸು' ಚಿತ್ರದ ಖ್ಯಾತ ನಟನಾಗಿ ಹೊರಹೊಮ್ಮಿದರು. ಆದರೆ ಇದಕ್ಕೂ ಮೊದಲು ಜಂಬದ ಹುಡುಗಿ ಎಂಬ ಚಿತ್ರದಲ್ಲಿ ಅಭಿನಯಿಸಿದ್ದರು. ನಂತರ ರಾಜಧಾನಿ, ಕಿರಾತಕ, ಲಕ್ಕಿ, ಡ್ರಾಮಾ, ಗೂಗ್ಲಿ, ರಾಜಾಹುಲಿ, ಗಜ ಕೇಸರಿ, ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ, ಮಾಸ್ಟರ್ ಪೀಸ್ ಇನ್ನೂ ಮೊದಲಾದ ಪ್ರಸಿದ್ದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಈಗ ಸ್ಯಾಂಡಲ್'ವುಡ್ ನ ಖ್ಯಾತ ನಟರ ಸಾಲಿನಲ್ಲಿ ನಿಂತಿರುವ ಯಶ್ ಅವರ ಜೊತೆಯಲ್ಲೇ 'ನಂದ ಗೋಕುಲ' ಧಾರವಾಹಿಯಿಂದಲೇ ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸಿದ ಮತ್ತೊಬ್ಬ ಕಲಾವಿದೆ ರಾಧಿಕಾ ಪಂಡಿತ್ ಅವರು ಇವರ ಬಾಳ ಸಂಗಾತಿಯಾಗಿದ್ದಾರೆ. ಮತ್ತೊಂದು ವಿಶೇಷವೆಂದರೆ ಈಕೆ ಕೂಡ 'ಮೊಗ್ಗಿನ ಮನಸ್ಸು ಚಿತ್ರದ ಮೂಲಕ ಖ್ಯಾತಿ ಪಡೆದ ನಟಿ.