ರಾಕಿಂಗ್ ಸ್ಟಾರ್ ಯಶ್-ರಾಧಿಕಾ ದಂಪತಿಗೆ ವಿವಾಹ ವಾರ್ಷಿಕೋತ್ಸವ ಸಂಭ್ರಮ
ಬೆಂಗಳೂರು : ಸ್ಯಾಂಡಲ್ವುಡ್ನ `ಮಿಸ್ಟರ್ ಅಂಡ್ ಮಿಸ್ಸಸ್ ರಾಮಾಚಾರಿ' ನಟ ರಾಕಿಂಗ್ ಸ್ಟಾರ್ ಯಶ್ ಹಾಗು ರಾಧಿಕಾ ಪಂಡಿತ್ ಜೋಡಿ ಇಂದು ತಮ್ಮ ಮೊದಲನೆವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿದ್ದಾರೆ.
ಇಡೀ ಸಂದರ್ಭದಲ್ಲಿ ರಾಕಿಂಗ್ ಸ್ಟಾರ್ ಯಶ್ ತಮ್ಮ ಮನೆಯವರಿಗೆ ಉಡುಗೊರೆಯನ್ನು ಕೊಟ್ಟಿದ್ದಾರೆ. ಹೌದು, ಯಶ್ ಅವರು 3 ಮರ್ಸೆಡಿನ್ಜ್ ಬೆನ್ಜ್ ಕಾರುಗಳನ್ನು ಖರೀದಿಸಿ ರಾಧಿಕಾ ಹಾಗೂ ಅವರ ತಂದೆ, ತಾಯಿಗೆ ಉಡುಗೊರೆ ನೀಡಿದ್ದಾರೆ.
ಇಡೀ ಸಂದರ್ಭದಲ್ಲಿ ನಟಿ ರಾಧಿಕಾ ಪಂಡಿತ್ ತಮ್ಮ ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಮ್‌ನಲ್ಲಿ ಕಳೆದ ವರ್ಷದ ಸುಮಧುರ ಕ್ಷಣಗಳನ್ನು ಪೋಸ್ಟ್ ಮಾಡುತ್ತ ಬಂದಿದ್ದಾರೆ. ಈ ವಿಶೇಷ ದಿನದಂದು ಮದುವೆಯ ಸುಂದರ ಫೋಟೋವನ್ನು ಪೋಸ್ಟ್ ಮಾಡಿರುವ ರಾಧಿಕಾ 'ಮಿಸ್‌ನಿಂದ ಮಿಸಸ್ ಆದ ದಿನವಿದು, ಜೀವನದ ಅಮೂಲ್ಯ ಘಳಿಗೆ' ಎಂದು ಕ್ಯಾಪ್ಶನ್ ಬರೆದಿದ್ದಾರೆ.