ಮೃತ ಫ್ಯಾನ್ಸ್ ಮನೆಗೆ ಯಶ್ ಭೇಟಿ.. ನನಗೆ ಬರ್ತ್ ಡೇ ಅಂದ್ರೇನೇ ಭಯ ಬಂದು ಬಿಟ್ಟಿದೆ ಎಂದ ರಾಕಿಭಾಯ್!
Yash Meet Fans Family : ಈ ರೀತಿ ಆಗುತ್ತದೆ ಎಂದೆ ನಾನು ಸರಳವಾಗಿ ಹುಟ್ಟು ಹಬ್ಬ ಆಚರಿಸಲು ತೀರ್ಮಾನಿಸಿದ್ದೆ ಎಂದು ನಟ ಯಶ್ ಹೇಳಿದ್ದಾರೆ.
ಗದಗ: ಮೃತ ಮೂವರು ಅಭಿಮಾನಿಗಳ ಮನೆಗೆ ನಟ ಯಶ್ ಭೇಟಿ ನೀಡಿದರು. ಭೇಟಿ ನೀಡಿ ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಬಳಿಕ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ನಟ ಯಶ್, ಯಾರು ಇದನ್ನು ಇಷ್ಟ ಪಡುವುದಿಲ್ಲ. ಈ ರೀತಿ ಆಗುತ್ತದೆ ಎಂದೆ ನಾನು ಸರಳವಾಗಿ ಹುಟ್ಟು ಹಬ್ಬ ಆಚರಿಸಲು ತೀರ್ಮಾನಿಸಿದ್ದೆ. ಈಗ ಅದನ್ನೆಲ್ಲಾ ಮಾತನಾಡುವ ಸಮಯವಲ್ಲ ಎಂದು ಯಶ್ ಹೇಳಿದರು.
ಅವರ ಕುಟುಂಬಕ್ಕೆ ಏನು ಅಗತ್ಯವೋ ಅದನ್ನು ಮಾಡುತ್ತೇವೆ. ಏನೇ ಪರಿಹಾರ ಕೊಟ್ಟರು ಮಗ ವಾಪಸ್ ಬರ್ತಾನಾ? ನಾನು ಇಲ್ಲಿ ಬಂದಿರುವುದು ಅವರ ತಂದೆ -ತಾಯಿಗಾಗಿ. ಅಭಿಮಾನ ತೋರಿಸುವುದಾದರೆ ನಿಮ್ಮ ಬದುಕಲ್ಲಿ ಖುಷಿಯಾಗಿರಿ. ನಮ್ಮ ಬಗ್ಗೆ ಯೋಚನೆ ಮಾಡಬೇಡಿ. ನಿಮಗೆ ಕೈ ಮುಗಿದು ಕೇಳಿಕೊಳ್ಳುತ್ತೇನೆ ಇದೆಲ್ಲಾ ಬಿಟ್ಟುಬಿಡಿ ಎಂದು ಯಶ್ ಮನವಿ ಮಾಡಿದರು.
ಇದನ್ನೂ ಓದಿ: ರಾಕಿಂಗ್ ಸ್ಟಾರ್ ಹುಟ್ಟುಹಬ್ಬದಂದೇ ದುರಂತ: ಯಶ್ ಬ್ಯಾನರ್ ಕಟ್ಟುವಾಗ 3 ಅಭಿಮಾನಿಗಳ ಸಾವು!
ಈ ರೀತಿ ಅಭಿಮಾನ ವ್ಯಕ್ತಪಡಿಸಬೇಕೆಂದು ಯಾರು ಇಷ್ಟ ಪಡಲ್ಲ. ನನಗಂತೂ ಈ ಥರ ಅಭಿಮಾನ ಬೇಡವೇ ಬೇಡ. ಈಗ ನಾನು ಬರುವಾಗಲೂ ಬೈಕ್ ಚೇಸ್ ಮಾಡುತ್ತಿದ್ದರು. ಬೈಕ್ ಚೇಸ್ ಮಾಡಿಕೊಂಡು ಬರುವುದೆಲ್ಲಾ ಬೇಡ. ಕಟೌಟ್ ಕಟ್ಟಬೇಡಿ ಅಂದರೆ ಬೇಜಾರು ಮಾಡಿಕೊಳ್ಳುತ್ತೀರಿ. ನಾನು ಹೆಂಡತಿ ಮಕ್ಕಳ ಜೊತೆ ಗೋವಾದಲ್ಲಿ ಇದ್ದೆ. ಈ ಸುದ್ದಿ ಕೇಳಿದಾಗ ಬಹಳ ಬೇಜಾರಾಗಿದೆ ಎಂದರು.
ರಾಕಿಂಗ್ ಸ್ಟಾರ್ ಯಶ್ ಪಡೆದ ಮೊದಲ ಪೇಮೆಂಟ್ ಎಷ್ಟು ಗೊತ್ತಾ?
ರಾಕಿಂಗ್ ಸ್ಟಾರ್ ಯಶ್ ಹುಟ್ಟು ಹಬ್ಬದ ಆಚರಣೆಗೆಂದು ಕಟೌಟ್ ನಿಲ್ಲಿಸುವ ವೇಳೆ ಬಹುದೊಡ್ಡ ಅನಾಹುತ ಸಂಭವಿಸಿದೆ. ಯಶ್ ಕಟೌಟ್ ನಿಲ್ಲಿಸಲು ಹೋಗಿ ಮೂರು ಜನ ಅಭಿಮಾನಿಗಳು ಪ್ರಾಣ ಕಳೆದುಕೊಂಡಿದ್ದಾರೆ. ವಿದ್ಯುತ್ ತಂತಿ ತಗುಲಿ ಹನಂಮತ, ಮುರಳಿ, ನವೀನ ಎಂಬ ಮೂವರು ಯುವಕರು ಮೃತಪಟ್ಟಿದ್ದಾರೆ.
ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದ ಯುವಕರು ಮಧ್ಯರಾತ್ರಿ 12 ಕ್ಕೆ ಯಶ್ ಕಟೌಟ್ ನಿಲ್ಲಿಸಲು ಹೋಗಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಹಿನ್ನೆಲೆ ಇಂದು ನಟ ರಾಕಿಂಗ್ ಸ್ಟಾರ್ ಯಶ್ ಲಕ್ಷ್ಮೇಶ್ವರಕ್ಕೆ ಭೇಟಿ ಕೊಟ್ಟಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.