2020ರಲ್ಲಿ ರಾಕಿ 35 ನೇ ಹುಟ್ಟು ಹಬ್ಬವನ್ನು ಗ್ರ್ಯಾಂಡ್ ಆಗಿ ಸೆಲೆಬ್ರೇಶನ್ ಮಾಡಿದ ನಂತ್ರ ಮತ್ತೆ ರಾಕಿ ತನ್ನ ಅಭಿಮಾನಿಗಳ ಜೊತೆ ಹುಟ್ಟು ಹಬ್ಬವನ್ನು ಸೆಲೆಬ್ರೇಶನ್ ಮಾಡಲಿಲ್ಲ..ಅದಕ್ಕೆ ಒಂದು ಕಾರಣನೂ ಇದೆ..ಅದೇನಪ್ಪ ಅಂದ್ರೆ ಕಿಲ್ಲರ್ ಕೊರೊನ ಕಾರಣ ರಾಕಿ ಕಳೆದ ಎರಡು ವರ್ಷಗಳಿಂದ ಅಭಿಮಾನಿಗಳ ಜೊತೆ ತಮ್ಮ ಜನ್ಮ ದಿನವನ್ನು ಸಂಭ್ರಮಿಸಿಲ್ಲ..ಅದ್ರೆ ಈ ವರ್ಷಅಂದ್ರೆ ಜನವರಿ 08 2023 ಕ್ಕೆ ತಮ್ಮ 37 ,ನೇ ಹುಟ್ಟು ಹಬ್ಬವನ್ನು ಯಶ್ ಅಭಿಮಾನಿಗಳ ಜೊತೆ ಆಚರಿಸೋ ಸಾಧ್ಯತೆ ಇದೆ.ಅಲ್ಲದೆ ರಾಕಿ 37 ನೇ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಲು
ರಾಕಿ ಫ್ಯಾನ್ಸ್ ಗಳು ತೆರೆ ಮೆರೆಯಲ್ಲಿ ಸಿದ್ದತೆ ಮಾಡಿ ಕೊಳ್ತಿದ್ದು, ರಾಕಿ ಹುಟ್ಟು ಹಬ್ಬದ ಆಚರಣೆ ಬಗ್ಗೆ ಇನ್ನೆರಡು ದಿನಗಳಲ್ಲಿ ಪ್ಯಾನ್ ಇಂಡಿಯಾ ಅಭಿಮಾನಿಗಳಿಗೆ ಮಾಹಿತಿ ಸಿಗಲಿದೆ...


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಕಾರು ಅಪಘಾತ: ಮೋದಿ ಸಹೋದರನ ಆರೋಗ್ಯ ವಿಚಾರಿಸಿದ ಸುತ್ತೂರು ಶ್ರೀಗಳು


ರಾಕಿ ಬರ್ತ್ ಡೇ ಸೆಲೆಬ್ರೇಶನ್ ವಿಚಾರವಾಗಿ  ರಾಕಿಂಗ್ ಅಭಿಮಾನಿಗಳಿ ಈಗಾಗಲೇ ಒಂದು ಸುತ್ತಿನ ಚರ್ಚೆ ಮಾಡಿದ್ದು, ಅಭಿಮಾನಿಗಳು ಒಂದೆಡೆ ಸೇರಿ ರಾಕಿ ಹುಟ್ಟು ಹಬ್ಬದ ಆಚರಣೆ ಬಗ್ಗೆ ಬಿಗ್ ಪ್ಲಾನ್ ಡಿಸೈಡ್ ಆಗಲಿದೆ..ಈ ಮೂಲಕ ಈ ವರ್ಷ ರಾಕಿಂಗ್ ಸ್ಟಾರ್ ಸಿನಿಮಾ ಮೂಲಕ ಅಭಿಮಾನಿಗಳಿಗೆ ದರ್ಶನ ಕೊಡದೆ ಇದ್ರು‌.ತಮ್ಮ ಹುಟ್ಟು ಹಬ್ಬದ ದಿನ ತಮ್ಮನ್ನು ಹೃದಯದಲ್ಲಿಟ್ಟು ಪೂಜಿಸಿ ಅರಾಧಿಸಿ ಬೆಳೆಸಿದ ಅಭಿಮಾನಿ ದೇವರುಗಳ ದರ್ಶನ ಮಾಡಲು ರಾಕಿ ಸಜ್ಜಾಗಿದ್ದಾರೆ.


ಕಳೆದ ಬಾರೀ ನಂದಿ ಲಿಂಕ್ ಗ್ರೌಂಡ್ ನಲ್ಲಿ 10 ಸಾವಿರ ಕೆಜಿ ತೂಕ ಕೇಕ್ ,ಹಾಗೂ 150ಅಡಿ ಎತ್ತರದ ಬೃಹತ್ ಕಟೌಟ್ ನಿಲ್ಲಿಸುವ ಮೂಲಕ ಸಾವಿರಾರು ಅಭಿಮಾನಿಗಳು ಒಂದು ಕಡೆ ಸೇರಿ ಸಂಭ್ರಮಿಸುವ ಮೂಲಕ  ಕೆಜಿಎಫ್ ಚಿತ್ರದಂತೆ ರಾಕಿ ಹುಟ್ಟು ಹಬ್ಬದ ಆಚರಣೆಯಲ್ಲೂ ರೆಕಾರ್ಡ್ ಮಾಡಿ ಗಮನ ಸೆಳೆದಿದ್ರು ರಾಕಿಂಗ್ ಸ್ಟಾರ್ ಅಭಿಮಾನಿ‌ದೇವರುಗಳು.. ಈ ಸಲ ಇದಕ್ಕೂ ಮೀರಿ ದೊಡ್ಡ ಮಟ್ಟದಲ್ಲಿ  ಅಭಿಮಾನಿಗಳು ಹುಟ್ಟುಹಬ್ಬ ಆಚರಿಸಿ  ಈಗ ಇರೋ ರೆಕಾರ್ಡ್ ಬ್ರೇಕ್ ಮಾಡಲು ಭರ್ಜರಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಹೇಗಿರುತ್ತೆ ಈ ಬಾರಿಯ ಹುಟ್ಟುಹಬ್ಬ ಅನ್ನೋದನ್ನ ವೇಟ್ ಮಾಡಿ ನೋಡಿ ಸಂಭ್ರಮಿಸೋಣ..


ಇದನ್ನೂ ಓದಿ: ಕಾರು ಹಾಗೂ ಬೈಕ್ ಮಧ್ಯೆ ಡಿಕ್ಕಿ, ಸ್ಥಳದಲ್ಲಿಯೇ ಮೂವರ ಸಾವು


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.