Anushka Shetty: ನಟಿಸಿದ ಸಿನಿಮಾ ಸಕ್ಸಸ್ ಟಾಕ್ ಪಡೆದರೆ ಮಾತ್ರ ಸ್ಟಾರ್ ನಾಯಕಿಯಾಗಿ ಮಿಂಚಬಹುದು. ಆದರೆ, ಈ ಪುರುಷ ಪ್ರಧಾನ ಚಿತ್ರೋದ್ಯಮದಲ್ಲಿ ನಾಯಕಿಯರ ವೃತ್ತಿಜೀವನ ಕೆಲವೇ ವರ್ಷಗಳು. ಎಷ್ಟೇ ದೊಡ್ಡ ಸ್ಟಾರ್ ಹೀರೋಯಿನ್ ಆಗಿದ್ದರೂ ಸ್ವಲ್ಪ ತೆರೆ ಮೇಲೆ ಕಾಣಿಸಿಕೊಳ್ಳದೇ ಹೋದರೆ ಆ ನಟಿಯರು ಮತ್ತೇ ಕ್ರೇಜ್‌ ಗಳಿಸೋದು ತುಂಬಾ ಕಷ್ಟ..


COMMERCIAL BREAK
SCROLL TO CONTINUE READING

ಆದರೆ 42 ವರ್ಷ ವಯಸ್ಸಾದರೂ ಅದೇ ಕ್ರೇಜ್‌ ಕಾಪಾಡಿಕೊಂಡು ತೆರೆ ಮೇಲೆ ಕೆಲವು ವರ್ಷ ಮಿಂಚದೇ ಇದ್ದರೂ ಅದೇ ಫ್ಯಾನ್‌ ಫಾಲೋಯಿಂಗ್‌ ಹೊಂದಿರುವ ನಟಿ ನಟಿಯೊಬ್ಬರಿದ್ದಾರೆ.. ಅವರು ಬೇರಾರೂ ಅಲ್ಲ.. ಸೌತ್‌ ಬ್ಯೂಟಿ ಅನುಷ್ಕಾ ಶೆಟ್ಟಿ.. ಈ ನಟಿ ಬಹುತೇಕ ಎಲ್ಲಾ ನಾಯಕರ ಎದುರು ನಟಿಸಿ ಟಾಲಿವುಡ್ ಪ್ರೇಕ್ಷಕರ ಮನದಲ್ಲಿ ಅಚ್ಚಳಿಯದ ಛಾಪು ಮೂಡಿಸಿದ್ದಾರೆ. 


ಇದನ್ನೂ ಓದಿ-Sobhita Dhulipala: ಮದುವೆಗೂ ಮುನ್ನವೇ ತಾಯಿಯಾದ ನಾಗಚೈತನ್ಯ ಭಾವಿ ಪತ್ನಿ! ಅಕ್ಕಿನೇನಿ ಕುಟುಂಬಕ್ಕೆ ಬಿಗ್‌ ಶಾಕ್‌!!


ನಟಿ ಅನುಷ್ಕಾ ಶೆಟ್ಟಿ ಬಗ್ಗೆ ವಿಶೇಷ ಪರಿಚಯದ ಅಗತ್ಯವಿಲ್ಲ.. ಅವರು ತಮ್ಮ ಸೌಂದರ್ಯ, ನಟನೆ, ಮತ್ತು ಡಾನ್ಸ್‌ನಿಂದಲೇ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ.. ಒಂದು ಸಮಯದಲ್ಲಿ ಟಾಲಿವುಡ್‌ನಲ್ಲಿ ಈಕೆಯದ್ದೇ ಹವಾ.. ಅನುಷ್ಕಾ ಅತಿ ಕಡಿಮೆ ಸಮಯದಲ್ಲಿ ಸ್ಟಾರ್ ಡಮ್ ಗಳಿಸಿದಳು.. 


 ಅನುಷ್ಕಾ ಶೆಟ್ಟಿ ತಮ್ಮ ವೃತ್ತಿ ಜೀವನದಲ್ಲಿ ರವಿತೇಜ, ಗೋಪಿಚಂದ್, ಪ್ರಭಾಸ್, ನಾಗಾರ್ಜುನ ಮತ್ತು ವೆಂಕಟೇಶ್ ಅವರಂತಹ ಸ್ಟಾರ್ ಹೀರೋಗಳ ಎದುರು ನಟಿಸುವ ಅವಕಾಶವನ್ನು ಪಡೆದರು. ಬಂದ ಪ್ರತಿಯೊಂದು ಅವಕಾಶವನ್ನೂ ಸದುಪಯೋಗಪಡಿಸಿಕೊಂಡು ಸ್ಟಾರ್ ಹೀರೋಯಿನ್ ಆಗಿ ಬೆಳೆದರು. 


 ಅನುಷ್ಕಾ ಅಭಿನಯದ ಸಿನಿಮಾಗಳಿಗೆ ಈಗ ಫುಲ್ ಕ್ರೇಜ್ ಇದೆ. ಸದ್ಯ ಅವರು ಪ್ಯಾನ್ ಇಂಡಿಯಾ ನಾಯಕಿಯಾಗಿದ್ದಾರೆ. ಝೀರೋ ಸೈಜ್ ಚಿತ್ರದ ನಂತರ ಅನುಷ್ಕಾ ಚಿತ್ರರಂಗದಿಂದ ಸ್ವಲ್ಪ ದೂರವಾಗಿದ್ದಾರೆ. ಅವರ ತೂಕವೂ ಗಮನಾರ್ಹವಾಗಿ ಹೆಚ್ಚಾಗಿದೆ. ಕಳೆದ ವರ್ಷ ಮಿಸ್ಟರ್ ಪೊಲಿಶೆಟ್ಟಿ ಚಿತ್ರದಲ್ಲಿ ಮಿಸ್ ಶೆಟ್ಟಿ ನಟಿಸಿದ್ದರು. ಇದರಲ್ಲಿ ನವೀನ್ ಪೋಲಿಶೆಟ್ಟಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.


ಇದನ್ನೂ ಓದಿ-ಸೂಪರ್‌ಸ್ಟಾರ್‌ ರಜನಿಕಾಂತ್‌ ಆರೋಗ್ಯದಲ್ಲಿ ಏರುಪೇರು, ಮಧ್ಯರಾತ್ರಿ ಆಸ್ಪತ್ರೆಗೆ ದಾಖಲಾದ ತಲೈವ! ಅಭಿಮಾನಿಗಳಲ್ಲಿ ಹೆಚ್ಚಾಯ್ತು ಆತಂಕ


ಇದೀಗ ಅನುಷ್ಕಾ ಶೆಟ್ಟಿ ಮದುವೆ ಸುದ್ದಿ ಸದಾ ಸಾಮಾಜಿಕ ಜಾಲತಾಣಗಳಲ್ಲಿ ಹಾಟ್ ಟಾಪಿಕ್ ಆಗಿರುತ್ತದೆ. ಅನುಷ್ಕಾ ಮದುವೆ ಯಾವಾಗ? ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಇತ್ತೀಚೆಗಷ್ಟೇ ಅನುಷ್ಕಾ ಶೆಟ್ಟಿ ಮದುವೆ ಸುದ್ದಿಯೊಂದು ವೈರಲ್ ಆಗಿದೆ. ಸೋಷಿಯಲ್ ಮೀಡಿಯಾ ಟಾಕ್ ಪ್ರಕಾರ, ಅನುಷ್ಕಾ ಉದ್ಯಮಿಯೊಬ್ಬರನ್ನು ಮದುವೆಯಾಗಲಿದ್ದಾರೆ. ಅವರ ಕುಟುಂಬಸ್ಥರೂ ಇವರ ಮದುವೆಗೆ ಒಪ್ಪಿಗೆ ಸೂಚಿಸಿದ್ದು, ಆದರೆ ಈ ಸುದ್ದಿ ಎಷ್ಟು ಸತ್ಯ ಎಂಬುದು ತಿಳಿದಿಲ್ಲ, ಸಾಮಾಜಿಕ ಜಾಲತಾಣಗಳಲ್ಲಿ ವದಂತಿಗಳು ಹರಿದಾಡುತ್ತಿವೆ.


 ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಮತ್ತು ಅನುಷ್ಕಾ ಪ್ರೀತಿಸುತ್ತಿದ್ದಾರೆ. ಮೇಲಾಗಿ ಇವರಿಬ್ಬರ ಕಾಂಬಿನೇಷನ್ ಸಿನಿಮಾಗಳನ್ನು ಇಷ್ಟಪಡುವ ಸಿನಿಪ್ರೇಮಿಗಳು ಅನುಷ್ಕಾ ಮತ್ತು ಪ್ರಭಾಸ್ ಮದುವೆಯಾಗುವುದನ್ನು ನೋಡಲು ತುಂಬಾ ಆಶಿಸುತ್ತಿದ್ದಾರೆ. ಪ್ರಭಾಸ್ ಅಭಿಮಾನಿಗಳು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದು, ನೀವಿಬ್ಬರು ಮದುವೆಯಾಗುತ್ತೀರಾ ಎಂದು ಕೇಳಿದ್ದಾರೆ. ಆದರೆ ಇದೀಗ ಅನುಷ್ಕಾ ನಿಜವಾಗಿಯೂ ಉದ್ಯಮಿಯನ್ನು ಮದುವೆಯಾಗುತ್ತಾರಾ? ಎನ್ನುವ ಪ್ರಶ್ನೆ ಕಾಡುತ್ತಿದೆ.. ಆದರೆ ಈ ಸುದ್ದಿಗೆ ಬ್ಯೂಟಿ ಅನುಷ್ಕಾ ಶೆಟ್ಟಿಯೇ ಪ್ರತಿಕ್ರಿಯಿಸಬೇಕು. ಆಗ ಮಾತ್ರ ಸಾಮಾಜಿಕ ಜಾಲತಾಣಗಳಲ್ಲಿ ಬರುವ ಸುದ್ದಿಗಳ ಬಗ್ಗೆ ಸ್ಪಷ್ಟತೆ ಸಿಗಲಿದೆ.


 
 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.