BBKS 9 : ಬಿಗ್‌ ಹೌಸ್‌ನಲ್ಲಿ ಆರೋಪ, ವಾದ, ಜಗಳದ ವಾತಾವರಣ ಸೃಷ್ಟಿಯಾಗುತ್ತಿದೆ. ಪರಸ್ಪರ ಆರೋಪಗಳನ್ನು ಮಾಡುತ್ತಿರುವ ದೊಡ್ಮನೆ ಮಂದಿ ಕಳಪೆ ಮಟ್ಟದ ಆಟ ಹಾಗೂ ನಕಲಿತನದ ವ್ಯಕ್ತಿತ್ವ ಎನ್ನುತ್ತ ಏರು ಧ್ವನಿಯಲ್ಲಿ ದೂರುತ್ತಿದ್ದಾರೆ.


COMMERCIAL BREAK
SCROLL TO CONTINUE READING

ಹೌದು, ಬಿಗ್‌ ಬಾಸ್‌ ಸ್ಪರ್ಧಿಗಳ ನಡುವೆ ಯಾವುದೂ ಸರಿಯಾಗಿಲ್ಲ ಎನ್ನುವುದು ಪ್ರೇಕ್ಷಕರಿಗೆ ಗೊತ್ತಾಗಿದೆ. ಒಬ್ಬರನ್ನು ಕಂಡರೆ ಇನ್ನೊಬ್ಬರಿ ಆಗಿ ಬರುತ್ತಿಲ್ಲ. ರೂಪೇಶ್‌ ಶೆಟ್ಟಿ, ಅರುಣ್‌ ಸಾಗರ್‌ ಅವರ ಮೇಲೆ ಆರೋಪ ಮಾಡಿದ್ದು, ಸಾಗರ್‌ ಅವರು ಯಾವುದೇ ರೂಲ್ಸ್‌ ಫಾಲೋ ಮಾಡುತ್ತಿಲ್ಲ. ಎಲ್ಲದ್ದಕ್ಕೂ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ದೂರಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಅರುಣ್‌ಸಾಗರ್‌ ಅವರು, ರೂಪೇಶ್‌ ಶೆಟ್ಟಿ ಮಾನಸಿಕವಾಗಿ ಓಪನ್‌ ಆಗಿಲ್ಲ. ಎಲ್ಲರ ಜೊತೆ ಬೆರೆಯುವ ಗುಣ ಇಲ್ಲ. ತುಂಬಾ ಕಳಪೆ ನೀವು ಎಂದು ಪ್ರತ್ಯಾರೋಪ ಮಾಡಿದ್ದಾರೆ.


ಇದನ್ನೂ ಓದಿ: ನೂರನೇ ವರ್ಷದ ಸ್ವಾತಂತ್ರ್ಯೋತ್ಸವ ನಿಷೇಧಿತ ಪಿಎಫ್ಐ ಟಾರ್ಗೆಟ್..!


ಇನ್ನು ಅನುಪಮ ಮತ್ತು ನೇಹಾ ಗೌಡ ರೂಪೇಶ್‌ ಈ ಮನುಷ್ಯ ನಿಜ ಅನಿಸಲ್ಲ. ತುಂಬಾ ಫೇಕ್‌ ಅನಿಸುತ್ತೆ ನೀವು ಮಾತಾಡೋದು ಎಂದಿದ್ದಾರೆ. ಅದಕ್ಕೆ ರೂಪೇಶ್‌ ರಾಜಣ್ಣ, ಒರಿಜಿನಲ್ ನಾನು, ಇರೋದೆ ಹೀಗೆ, ನಾನೋಬ್ಬ ಹೋರಾಟಗಾರ. ಯಾರ್ಯಾರು ನಾಟವಾಡ್ತೀದಿರಾ ಅನ್ನೋದು ಗೊತ್ತು ಎಂದು ಹೇಳುತ್ತಿದ್ದಂತೆ ಮಾತಿನ ಮಧ್ಯ ಪ್ರವೇಶಿಸಿದ ದೀಪಿಕಾ ಸರ್‌ ಇಲ್ಲಿ ಹೋರಾಟದ ಬಗ್ಗೆ ಮಾತಾನಡುತ್ತಿಲ್ಲ ಎನ್ನುತ್ತಾರೆ.


ಇದನ್ನೂ ಓದಿ: ನಾಗರ ಹಾವಿಗೆ ಮುತ್ತಿಕ್ಕಲು ಹೋಗಿ ಕಚ್ಚಿಸಿಕೊಂಡ ಉರಗ ರಕ್ಷಕ..!


ಇದಕ್ಕೆ ಕೋಪಗೊಂಡ ರೂಪೇಶ್‌ ಅವರು ದೀಪಿಕಾ ಅವರೇ ನಾನು ಮಾತನಾಡುವ ಮಧ್ಯ ಬಾಯಿ ಹಾಕ್ಬೇಡಿ ಎನ್ನುತ್ತಾರೆ. ಈ ವೇಳೆ ಮನೆ ಮಂದಿಗೆ ದೀಪಿಕಾ, ಇವರು ವಿಷಯ ಬಿಟ್ಟು ಬೇರೆ ಏನೋ ಮಾತನಾಡುತ್ತಿದ್ದಾರೆ ಎನ್ನುತ್ತಾರೆ. ಇದರಿಂದ ಕೊಪಗೊಂಡ ರೂಪೇಶ್‌ ಅವರು ಮೈಕ್‌ ಬ್ಯಾಗ್‌ ಬಿಚ್ಚಿಟ್ಟು ಬಿಗ್‌ಹೌಸ್‌ನಿಂದ ಹೊರ ಹೋಗಲು ಮುಂದಾಗುತ್ತಾರೆ. ಈ ವೇಳೆ ಮನೆ ಮಂದಿ ಅವರನ್ನು ತಡೆಯುತ್ತಾರೆ. 


ಸದ್ಯ ದೊಡ್ಮನೆ ಮಂದಿಯಲ್ಲಿರುವ ಮನಸ್ತಾಪಗಳು ಮಾತಿನ ರೂಪದಲ್ಲಿ ಒಂದೊಂದಾಗಿ ಹೊರಗೆ ಬರುತ್ತಿವೆ. ಎಲ್ಲರೂ ನಗು ನಗುತ್ತಾ ಇದ್ದರೂ ಒಳಗೊಳಗೆ ಒಬ್ಬರ ಮೇಲೆ ಒಬ್ಬರು ಕತ್ತಿ ಮಸೆಯುತ್ತಿದ್ದಾರಾ ಎಂಬ ಪ್ರಶ್ನೆ ಮೂಡುವಂತೆ ಮಾಡಿದೆ. ಬಿಗ್‌ ಬಾಸ್‌ ಟಾಸ್ಕ್‌ಗಳಲ್ಲಿ ಬಿಗ್‌ ಹೌಸ್‌ ಸ್ಪರ್ಧಿಗಳ ನಿಜ ರೂಪ ಬಯಲಾಗುತ್ತಾ ಅನ್ನೊದನ್ನ ಕಾಯ್ದು ನೋಡಬೇಕಿದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.