ʼಬಿಗ್ ಬಾಸ್ʼ ಕಾರ್ಯಕ್ರಮ ಅಂದ್ರೇನೆ ಒಂದು ರೀತಿಯಲ್ಲಿ ಕುತೂಹಲ. ದೊಡ್ಡ ಮನೆಯೊಳಗೆ ಹೋದ ಸ್ಪರ್ಧಿಗಳು ಏನು ಮಾಡ್ತಾರೆ, ಏನು ಮಾತನಾಡುತ್ತಾರೆ ಎಂಬ ಕುತೂಹಲದಿಂದ ಎಲ್ಲರೂ ಬಿಗ್‌ಬಾಸ್‌ ನೋಡುತ್ತಾರೆ. ಬಣ್ಣ ಹಚ್ಚುವ ಕಲಾವಿದರ ನಿಜ ಬಣ್ಣ ಬಯಲು ಮಾಡುವ ರಿಯಾಲಿಟಿ ಶೋ ಎಲ್ಲರಿಗೂ ಅಚ್ಚುಮೆಚ್ಚು ಎಂದರೆ ತಪ್ಪಾಗಲ್ಲ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಬಿಗ್‌ಬಾಸ್ ಒಟಿಟಿ ಮೊದಲ ಸ್ಪರ್ಧಿಯಾಗಿ ಆರ್ಯವರ್ಧನ್ ಗುರೂಜಿ‌ ಎಂಟ್ರಿ!


ಈ ಬಾರಿ ಒಟಿಟಿಯಲ್ಲಿ ಬಿಗ್ ಬಾಸ್ ಸೀಸನ್ ನಡೆಸುತ್ತಿರೋದು ಒಂದಷ್ಟು ಜನರಿಗೆ ನಿರಾಸೆಯಾಗಿದೆ ಅಂದ್ರೆ ತಪ್ಪಿಲ್ಲ. 16 ಸ್ಪರ್ಧಿಗಳು ಒಳ ಹೋಗಿದ್ದಾರೆ. ಮೊದಲ ಸ್ಪರ್ಧಿಯಾಗಿ ಆರ್ಯವರ್ಧನ್ ಗುರೂಜಿ ಹೋಗಿದ್ದಾರೆ. ಎರಡನೇ ಕಂಟೆಸ್ಟೆಂಟ್ ಆಗಿ ಸೋಶಿಯಲ್ ಮೀಡಿಯಾ ಸ್ಟಾರ್ ಸೋನು ಶ್ರೀನಿವಾಸ್ ಗೌಡ ಎಂಟ್ರಿ ಪಡೆದಿದ್ದಾರೆ. 


ಇನ್ನು ಸೋನು ಶ್ರೀನಿವಾಸ ಗೌಡ ಎಂಟ್ರಿ ಆಗುತ್ತಿದ್ದಂತೆ ಸಿಕ್ಕಾಪಟ್ಟೆ ಮಾತನಾಡಿ ಜನರ ತಲೆಯಲ್ಲಿ ʼಇದೇನು ಗುರು ಹಿಂಗ್ ಆಡ್ತಾವಳೇʼ ಅಂತ ಅನ್ನಿಸೋ ಥರ ಮಾಡಿದ್ದಾರೆ. ಇದರ ನಡುವೆ ಸೋನು ಗೌಡ ನಾನು ಸಿಗರೇಟ್ ಸೇದುತ್ತೀನಿ. ಅದ್ರಲ್ಲಿ ತಪ್ಪೇನಿದೆ ಅಂತ ಬಿಗ್ ಬಾಸ್ ಮನೆಯಲ್ಲಿ ರೂಪೇಶ್ ಶೆಟ್ಟಿ ಜೊತೆ ಪ್ರಶ್ನೆ ಮಾಡಿದ್ದಾರೆ. ಅದು ಈಗ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ʼಇದೇನಪ್ಪಾ ಈ ಹುಡುಗಿ ಹಿಂಗ್ ಹೇಳ್ತಿದ್ದಾಳೆʼ ಅಂತ ಜನ ಕೂಡ ಬಾಯಿಬಾಯಿ ಬಡ್ಕೋತ್ತ ಇದ್ದಾರೆ. ಒಂದಷ್ಟು ಜನ ಸೋನು ಗೌಡ ಬೇಗ ಎಲಿಮಿನೇಟ್ ಆಗ್ಲಿ ಅಂತಿದ್ದಾರೆ. 


ಇದನ್ನೂ ಓದಿ: Sonu Srinivas Gouda : ಬಿಗ್‌ಬಾಸ್‌ OTT ಗೆ ಎಂಟ್ರಿ ನೀಡಿದ ಕಿರಿಕ್ ಬೆಡಗಿ ಸೋನು ಶ್ರೀನಿವಾಸ್ ಗೌಡ!


ಸದ್ಯ ಒಟಿಟಿಯಲ್ಲಿ ದಿನದ 24 ಗಂಟೆ ಕೂಡ ನಾವು ಬಿಗ್ ಬಾಸ್ ನೋಡೋದ್ರ ಮೂಲಕ ಮನರಂಜನೆ ಪಡೆಯಬಹುದು. ಯಾವ ಯಾವ ಸ್ಪರ್ಧಿ ತಮ್ಮ ಉಳಿವಿಗಾಗಿ ಏನೇನು ಗೇಮ್ ಪ್ಲೇ ಮಾಡ್ತಾರೆ ಅನ್ನೋದನ್ನ ನಿತ್ಯ ಎಪಿಸೋಡ್ ನೋಡುವುದರ ಮೂಲಕ ತಿಳಿಯೋಣ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.