ನವದೆಹಲಿ: ಎಸ್.ಎಸ್.ರಾಜಮೌಳಿ(SS Rajamouli) ನಿರ್ದೇಶನದ ‘ಆರ್​ಆರ್​ಆರ್’ ಚಿತ್ರ ಪ್ರತಿದಿನ ಬಾಕ್ಸ್ ಆಫೀಸ್ ನಲ್ಲಿಇತಿಹಾಸ ಸೃಷ್ಟಿಸುತ್ತಿದೆ. ಚಿತ್ರದ ಸ್ಟ್ರಾಂಗ್ ಸ್ಟಾರ್ಕ್ಯಾಸ್ಟ್ ಆಗಿರುವ ರಾಮ್ ಚರಣ್, ಜೂ.ಎನ್‍ಟಿಆರ್(Jr NTR), ಆಲಿಯಾ ಭಟ್, ಅಜಯ್ ದೇವಗನ್, ಒಲಿವಿಯಾ ಮೋರಿಸ್, ರೇ ಸ್ಟೀವನ್ಸನ್ ಮತ್ತು ಅಲಿಸನ್ ತೆರೆಮೇಲೆ ಅದ್ಭುತ ಮ್ಯಾಜಿಕ್ ಮಾಡಿದ್ದಾರೆ. ಎಲ್ಲ ವರ್ಗದ ಸಿನಿ ಪ್ರೇಕ್ಷಕರು ಹುಚ್ಚೆದ್ದು ಸಿನಿಮಾ ನೋಡುತ್ತಿದ್ದಾರೆ. ಹೀಗಾಗಿಯೇ ಚಿತ್ರ ಕೇವಲ 5 ದಿನದಲ್ಲಿ ವಿಶ್ವಾದ್ಯಂತ 600 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡಿದೆ.


COMMERCIAL BREAK
SCROLL TO CONTINUE READING

600 ಕೋಟಿ ರೂ. ಕ್ಲಬ್ ಸೇರಿದ ಚಿತ್ರ


RRR Box Office Collection) ವಿಶ್ವದಾದ್ಯಂತ ಬಾಕ್ಸ್ ಆಫೀಸ್ ಧೂಳಿಪಟ ಮಾಡುವ ಮೂಲಕ ಕೇವಲ 5 ದಿನಗಳಲ್ಲಿ 600 ಕೋಟಿ ಕ್ಲಬ್ ಪ್ರವೇಶಿಸಿದೆ. ದಿನ 1 ಶುಕ್ರವಾರ - ₹257.15 ಕೋಟಿ, ದಿನ 2 ಶನಿವಾರ - ₹114.38 ಕೋಟಿ, ದಿನ 3 ಭಾನುವಾರ - ₹118.63 ಕೋಟಿ, ದಿನ 4 ಸೋಮವಾರ - ₹72.80 ಕೋಟಿ, ದಿನ 5 ಮಂಗಳವಾರ - ₹58.46 ಕೋಟಿ, ಒಟ್ಟು - ₹621.42 ಕೋಟಿ ರೂ. ಗಳಿಸಿದೆ’ ಎಂದು ತಿಳಿಸಿದ್ದಾರೆ.


ಇದನ್ನೂ ಓದಿ: KGF verse:ಕೆಜಿಎಫ್‌ ತಂಡದಿಂದ ಮತ್ತೊಂದು ಸರ್ಪ್ರೈಸ್! ನೀವು ಹೋಗಬಹುದು ನರಾಚಿ ಲೋಕಕ್ಕೆ..


ಹಿಂದಿ ಆವೃತ್ತಿಯಲ್ಲಿ ‘ಬಾಹುಬಲಿ-1’ ದಾಖಲೆ ಉಡಿಸ್!  


‘RRR’ ಶೀಘ್ರವೇ ‘ಬಾಹುಬಲಿ: ದಿ ಬಿಗಿನಿಂಗ್’(Baahubali: The Beginning)ನ ಆಲ್‍ಟೈಮ್ ಬಾಕ್ಸ್ ಆಫೀಸ್ ಕಲೆಕ್ಷನ್‌ ಮೀರಿಸಲಿದೆಯಂತೆ. ರಾಜಮೌಳಿ ಅವರ ಆಕ್ಷನ್ ಮೂವಿ ಸರಣಿ 'ಬಾಹುಬಲಿ' ಮೊದಲ ಭಾಗದ ಹಿಂದಿ ಆವೃತ್ತಿಯು ಸುಮಾರು 118 ಕೋಟಿ ರೂ. ಕಲೆಕ್ಷನ್ ಮಾಡಿದೆ. ಇದೀಗ ‘RRR’ ಹಿಂದಿ ಆವೃತ್ತಿ ಈಗಾಗಲೇ 5 ದಿನಗಳಲ್ಲಿ ಬರೋಬ್ಬರಿ 107.59 ಕೋಟಿ ರೂ. ಗಳಿಸಿದೆ.


ಹಲವು ದಾಖಲೆ ಮಾಡಿದ RRR


Deepika Padakone: ರಣವೀರ್ ಸಿಂಗ್ ಪ್ರೀತಿಯಿಂದ ದೀಪಿಕಾಗೆ ಇಟ್ಟ ನಿಕ್‌ ನೇಮ್‌ ಏನು ಗೊತ್ತೇ..?


‘ಬಾಹುಬಲಿ: ದಿ ಬಿಗಿನಿಂಗ್’ ದಾಖಲೆ ಮುರಿಯಲಿರುವ RRR


ಎಲ್ಲಾ ಭಾಷೆಗಳಲ್ಲಿ ‘ಬಾಹುಬಲಿ: ದಿ ಬಿಗಿನಿಂಗ್’(Baahubali: The Beginning) ಭಾರತದಲ್ಲಿ 516 ಕೋಟಿ ರೂ. ಗಳಿಸಿದೆ ಮತ್ತು ‘RRR’ ಭಾರತೀಯ ಬಾಕ್ಸ್ ಆಫೀಸ್‌ನಲ್ಲಿ ಸೋಮವಾರದವರೆಗೆ 406 ಕೋಟಿ ರೂ. ಗಳಿಸಿದೆ. ಹೀಗಾಗಿ ಎಲ್ಲಾ ಭಾಷೆಗಳ ಕಲೆಕ್ಷನ್ ಪರಿಗಣಿಸಿದರೂ ಮಾರ್ಚ್ 25ರಂದು ಬಿಡುಗಡೆಯಾದ ಚಿತ್ರ ಮೊದಲ ವಾರದಲ್ಲೇ ‘ಬಾಹುಬಲಿ’ ಕಲೆಕ್ಷನ್‍ಅನ್ನು ಹಿಂದಿಕ್ಕಲಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.