ಬೆಂಗಳೂರು: ಎಸ್.ಎಸ್.ರಾಜಮೌಳಿ ನಿರ್ದೇಶನದ, ಜೂನಿಯರ್ ಎನ್ ಟಿಆರ್ ಹಾಗೂ ರಾಮ್ ಚರಣ್ ನಟನೆಯ ತ್ರಿಬಲ್ ಆರ್ ಸಿನಿಮಾ ಬಾಕ್ಸಾಫೀಸ್‌ ಕೊಳ್ಳೆ ಹೊಡೆದು, ಈಗ ಜೀ5 ಒಟಿಟಿಯಲ್ಲಿ ಧೂಳ್ ಎಬ್ಬಿಸ್ತಿದೆ. ಇದೇ ತಿಂಗಳ 20ರಂದು ತಾರಕ್ ಹುಟ್ಟುಹಬ್ಬದಂದು ಒಟಿಟಿಗೆ ಲಗ್ಗೆ ಇಟ್ಟ ತ್ರಿಬಲ್ ಆರ್ ಸಿನಿಮಾ ಹೊಸದೊಂದು ರೆಕಾರ್ಡ್ ಬರೆದಿದೆ.


COMMERCIAL BREAK
SCROLL TO CONTINUE READING

1 ನಿಮಿಷಕ್ಕೆ 1000 ಮಿಲಿಯನ್ಸ್


ಆರ್ ಆರ್ ಆರ್ ಸಿನಿಮಾ ಜೀ5 ಒಟಿಟಿಯಲ್ಲಿ ಭರ್ಜರಿ ರೆಸ್ಪಾನ್ಸ್ ಪಡೆದುಕೊಳ್ತಿದೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಭಾಷೆಯಲ್ಲಿ ಬಿಡುಗಡೆಯಾದ ದೃಶ್ಯ ವೈಭವ ತ್ರಿಬಲ್ ಆರ್ ಸಿನಿಮಾ, ಜಸ್ಟ್ ಒಂದೇ ಒಂದು ನಿಮಿಷದಲ್ಲಿ 1000 ಮಿಲಿಯನ್ಸ್ ಸ್ಟ್ರೀಮಿಂಗ್ ಪಡೆದುಕೊಂಡಿದ್ದು, ಜೊತೆಗೆ ಜೀ5ಯಲ್ಲಿ ನಾಲ್ಕು ಭಾಷೆಯಲ್ಲಿಯೂ ಟ್ರೇಡಿಂಗ್ ಕಮಾಲ್ ಮಾಡ್ತಿದೆ. RRR ಸಿನಿಮಾಕ್ಕೆ ನೀವು ತೋರಿಸುತ್ತಿರುವ ಪ್ರೀತಿಗೆ ನಾನು ಕೃತಜ್ಞ. ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂ ಈ ನಾಲ್ಕು ಭಾಷೆಯಲ್ಲಿಯೂ ಸಿನಿಮಾಗೆ ಭರ್ಜರಿ ರೆಸ್ಪಾನ್ಸ್ ಸಿಕ್ತಿದ್ದು,ನಿಮ್ಮ ಅದ್ಭುತ ಪ್ರತಿಕ್ರಿಯೆ ಧನ್ಯವಾದ ಎಂದು ಜೂನಿಯರ್ ಎನ್ ಟಿಆರ್ ಟ್ವೀಟ್ ಮಾಡಿದ್ದಾರೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.