ರಾಜಮೌಳಿ ನಿರ್ದೇಶನದ RRR ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ಒಂದೊಂದೇ ದಾಖಲೆಗಳನ್ನು ಉಡೀಸ್ ಮಾಡುತ್ತಿದೆ. ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ರಾಜಮೌಳಿ ಅಂದ್ರೆನೆ ಬಿಗ್ ಬಜೆಟ್ ಸಿನಿಮಾ ಅನ್ನೋ ಅಷ್ಟು ಟ್ರೆಂಡ್ ಕ್ರಿಯೇಟ್ ಆಗಿದೆ. ರಾಜಮೌಳಿ ಸಿನಿಮಾ ಸೆಟ್ ಏರಿದಾಗಲೇ ಬಾಕ್ಸಾಫೀಸ್ ನಲ್ಲಿ ಧೂಳೆಬ್ಬಿಸೋದು ಪಕ್ಕಾ ಆಗಿರುತ್ತೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಸಖತ್ ಪ್ರಾಮಿಸಿಂಗ್ ಆಗಿದೆ ಪೊಲಿಟಿಕಲ್ ಡ್ರಾಮಾ ಧೀರ ಭಗತ್ ರಾಯ್ ಟೀಸರ್!


ಹಿಂದಿಯಲ್ಲಿ ಆರ್​ಆರ್​ಆರ್ ಅಬ್ಬರ ಬಲು ಜೋರಾಗಿದೆ. ಆರೇ ದಿನದಲ್ಲಿ 120 ಕೋಟಿ ರೂಪಾಯಿ ಬಾಚಿಕೊಂಡಿದೆ. ಎಸ್​ಎಸ್​ ರಾಜಮೌಳಿ (SS Rajamouli) ಅವರು ಪ್ರತಿ ಸಿನಿಮಾದಿಂದ ಸಿನಿಮಾಗೆ ಅಪ್​ಗ್ರೇಡ್​ ಆಗುತ್ತಿದ್ದಾರೆ. 


ಇದೀಗ ಆರ್​ಆರ್​ಆರ್ (RRR) ಸಿನಿಮಾ ಕಲೆಕ್ಷನ್​ ಹೊಸ ದಾಖಲೆ ಬರೆದಿದೆ. ಸಿನಿಮಾ ತೆರೆ ಕಂಡು ಆರು ದಿನಕ್ಕೆ ಬಾಹುಬಲಿ: ದಿ ಬಿಗಿನಿಂಗ್​ (Bahubali) ಮಾಡಿದ್ದ ದಾಖಲೆಯನ್ನೇ ಪುಡಿ ಪುಡಿ ಮಾಡಿದೆ. 2015ರಲ್ಲಿ ಬಾಹುಬಲಿ  ಸಿನಿಮಾ ತೆರೆಗೆ ಬಂದಿತ್ತು. ಈ ಚಿತ್ರದ ಲೈಫ್​ಟೈಮ್​ ಕಲೆಕ್ಷನ್​ 650 ಕೋಟಿ ರೂಪಾಯಿ. ಈಗ ಆರ್​ಆರ್​ಆರ್ ಚಿತ್ರ 672 ಕೋಟಿ ರೂಪಾಯಿ ಗಳಿಸಿದೆ. 


ಇದನ್ನೂ ಓದಿ: ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿ ಆಶಿಕಾ,ರೋಹನ್‌..!


ಮೊದಲ ವಾರ ಪೂರ್ಣಗೊಳ್ಳುವುದರೊಳಗೆ ಸಿನಿಮಾ (Cinema) ಕಲೆಕ್ಷನ್​ 700 ಕೋಟಿ ರೂಪಾಯಿ ದಾಟಲಿದೆ ಎಂದು ಅಂದಾಜಿಸಲಾಗಿದೆ. ಹಿಂದಿಯಲ್ಲಿ ಆರು ದಿನಕ್ಕೆ ಈ ಸಿನಿಮಾ 120 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.