Jacqueline Fernandez Makeup Artist Shaan Muttathil: ಆಸ್ಕರ್ 2023 ಪ್ರಶಸ್ತಿ ಪ್ರದಾನ ಸಮಾರಂಭ ಇತ್ತೀಚೆಗೆ ಲಾಸ್‌ ಏಂಜಲೀಸ್‌ನಲ್ಲಿ ಅದ್ಧೂರಿಯಾಗಿ ನಡೆಯಿತು ಇದರಲ್ಲಿ ಭಾರತದ 'ದಿ ಎಲಿಫೆಂಟ್ ವಿಸ್ಪರರ್ಸ್' 'ಅತ್ಯುತ್ತಮ ಸಾಕ್ಷ್ಯಚಿತ್ರ ಕಿರು ಆಸ್ಕರ್ಸ್ 2023' ಮತ್ತು RRR ನ ನಾಟು ನಾಟು ಹಾಡಿಗೆ 'ಅತ್ಯುತ್ತಮ ಮೂಲ ಗೀತೆ' ಆಸ್ಕರ್‌ ಒಲಿಯಿತು. ಈ ಎರಡೂ ವಿಭಾಗಗಳಲ್ಲಿ, ಭಾರತವು ಹಿಂದೆಂದೂ ಈ ರೀತಿಯ ಆಸ್ಕರ್‌ಗಳನ್ನು ಪಡೆದಿಲ್ಲ ಮತ್ತು ಆದ್ದರಿಂದ ಇತಿಹಾಸವನ್ನು ಸೃಷ್ಟಿಸಿದ ಈ ತಂಡಗಳಿಗೆ ಹೆಚ್ಚಿನ ಅಭಿನಂದನೆಗಳನ್ನು ನೀಡಲಾಗುತ್ತಿದೆ. ಏತನ್ಮಧ್ಯೆ, ಬಾಲಿವುಡ್ ಖ್ಯಾತ ನಟಿಯ ಮೇಕಪ್ ಕಲಾವಿದರೊಬ್ಬರು ಆಸ್ಕರ್ 2023 ಅನ್ನು RRR ತಂಡವು ಖರೀದಿಸಿದೆ ಎಂದು ಆಘಾತಕಾರಿ ಹೇಳಿಕೆ ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಇತ್ತೀಚೆಗೆ ನಡೆದ ಅಕಾಡೆಮಿ ಅವಾರ್ಡ್ಸ್ ಅಂದರೆ ಆಸ್ಕರ್  ಸಮಾರಂಭದಲ್ಲಿ 'RRR' ಚಿತ್ರದ 'ನಾಟು ನಾಟು' ಹಾಡಿನ ವಿಜಯವು ಎಲ್ಲರಿಗೂ ತುಂಬಾ ಸಂತೋಷವನ್ನುಂಟು ಮಾಡಿದೆ. ಅಂತಹ ಪರಿಸ್ಥಿತಿಯಲ್ಲಿ, RRR ಈ ಆಸ್ಕರ್ ಅನ್ನು ಗೆದ್ದಿಲ್ಲ ಆದರೆ ಅದನ್ನು ಖರೀದಿಸಿದೆ ಎಂಬ ಕಾಮೆಂಟ್‌ ಒಂದು ಹೊರಬಿದ್ದಿದೆ. 


ಇದನ್ನೂ ಓದಿ : ಕಬ್ಜದಲ್ಲಿಉಪ್ಪಿಗೆ ಬಲಗೈ ಬಂಟನಾದ ಅನೂಪ್​ ರೇವಣ್ಣʼ


ಈ ನಟಿಯ ಮೇಕಪ್ ಆರ್ಟಿಸ್ಟ್ ಶಾಕಿಂಗ್ ಹೇಳಿಕೆ!


ಜಾಕ್ವೆಲಿನ್ ಫರ್ನಾಂಡೀಸ್ ಮೇಕಪ್ ಆರ್ಟಿಸ್ಟ್ ಶಾನ್ ಮುತ್ತತ್ತಿಲ್ ಅವರು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಹಾಕಿದ್ದು, ಅದರಲ್ಲಿ 'RRR' ನಾಟು ನಾಟು ಹಾಡನ್ನು ಬದಲಾಯಿಸಿದೆ ಎಂದು ಹೇಳಿದ್ದಾರೆ. 'ಅತ್ಯುತ್ತಮ ಮೂಲ ಗೀತೆ'ಗಾಗಿ ಈ ಆಸ್ಕರ್ ಪ್ರಶಸ್ತಿಯನ್ನು ತಂಡ ಖರೀದಿಸಿದೆ ಎಂದಿದ್ದಾರೆ. 


[[{"fid":"291371","view_mode":"default","fields":{"format":"default","field_file_image_alt_text[und][0][value]":"Jacqueline Fernandez Makeup Artist Shaan Muttathil ","field_file_image_title_text[und][0][value]":"ಮೇಕಪ್ ಆರ್ಟಿಸ್ಟ್ ಶಾನ್ ಮುತ್ತತ್ತಿಲ್"},"type":"media","field_deltas":{"1":{"format":"default","field_file_image_alt_text[und][0][value]":"Jacqueline Fernandez Makeup Artist Shaan Muttathil ","field_file_image_title_text[und][0][value]":"ಮೇಕಪ್ ಆರ್ಟಿಸ್ಟ್ ಶಾನ್ ಮುತ್ತತ್ತಿಲ್"}},"link_text":false,"attributes":{"alt":"Jacqueline Fernandez Makeup Artist Shaan Muttathil ","title":"ಮೇಕಪ್ ಆರ್ಟಿಸ್ಟ್ ಶಾನ್ ಮುತ್ತತ್ತಿಲ್","class":"media-element file-default","data-delta":"1"}}]]


ಶಾನ್ ಮುತ್ತತ್ತಿಲ್ ಅವರು ಆಸ್ಕರ್ 2023 ಮಾರಾಟವಾಗಿದೆ ಎಂದು ಹೇಳಿದರು. ನಾವು ಹೇಳುತ್ತಿರುವ ಮೇಕಪ್ ಕಲಾವಿದನ ಪೋಸ್ಟ್ ಅನ್ನು ಈಗ ಅಳಿಸಲಾಗಿದೆ. ಆದರೆ ಅದರಲ್ಲಿ "ಇದು ತುಂಬಾ ತಮಾಷೆಯ ವಿಷಯ. ನಾವು ಭಾರತದಲ್ಲಿ ಮಾತ್ರ ಪ್ರಶಸ್ತಿಗಳನ್ನು ಖರೀದಿಸಬಹುದು ಎಂದುಕೊಂಡಿದ್ದೆವು. ಆದರೆ ಆಸ್ಕರ್‌ ಅನ್ನು ಸಹ ಖರೀದಿಸಬಹುದು ಎಂದು ನಾನು ಭಾವಿಸಿರಲಿಲ್ಲ. ಹಣವಿದ್ದಲ್ಲಿ ಏನನ್ನು ಕೊಳ್ಳಲು ಸಾಧ್ಯ! ಆಸ್ಕರ್ ಕೂಡ" ಎಂದು ಬರೆಯಲಾಗಿತ್ತು. 


ಇದನ್ನೂ ಓದಿ : 'ಬೇಷರಂ ರಂಗ್ ಹಾಡಿಗೆ ಮೈ ಬಳುಕಿಸಿದ ಯುವತಿ ವೀಡಿಯೋ ಫುಲ್‌ ವೈರಲ್‌ !


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.