ತೆಲುಗು ಸಿನಿರಂಗಕ್ಕೆ ರುಕ್ಮಿಣಿ ವಸಂತ್ ಎಂಟ್ರಿ..!? ರಾಮ್ ಪೋತಿನೇನಿ ಸಿನಿಮಾದಲ್ಲಿ ಕನ್ನಡತಿ
Rukmini Vasanth telugu movie : ರಕ್ಷಿತ್ ಶೆಟ್ಟಿ ಅಭಿನಯದ ‘ಸಪ್ತಸಾಗರದಾಜೆ ಎಲ್ಲೋ’ ಚಿತ್ರದ ನಾಯಕಿ ರುಕ್ಮಿಣಿ ವಸಂತ್. ಈ ಸಿನಿಮಾ ಎರಡು ಭಾಗಗಳಲ್ಲಿ ತಯಾರಾಗಿದೆ. ಈ ಸಿನಿಮಾದ ಮೂಲಕ ರುಕ್ಮಿಣಿ ಸೌಥ್ ಸಿನಿ ಪ್ರೇಕ್ಷಕರಿಗೆ ಹತ್ತಿರವಾಗಿದ್ದಾರೆ. ಸಧ್ಯ ನಟ ರಾಮ್ ಪೋತಿನೇನಿ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ.
Rukmini Vasanth : ʼಸಪ್ತಸಾಗರದಾಜೆ ಎಲ್ಲೋʼ ಸಿನಿಮಾದ ಮೂಲಕ ನಟಿ ರುಕ್ಮಿಣಿ ವಸಂತ್ ಕನ್ನಡ ಪ್ರೇಕ್ಷಕರಿಗಷ್ಟೇ ಅಲ್ಲ, ಸೌಥ್ ಸಿನಿರಂಗಕ್ಕೂ ಪರಿಚಯವಾಗಿದ್ದಾರೆ. ತಮ್ಮ ಅದ್ಭುತ ನಟನೆಯ ಮೂಲಕ ಮೊದಲ ಸಿನಿಮಾದಿಂದಲೇ ಸಾಕಷ್ಟು ಫ್ಯಾನ್ಸ್ ಪಾಲೋಯಿಂಗ ಗಳಿಸಿದ್ದಾರೆ. ಸಧ್ಯ ರುಕ್ಮಿಣಿ ಟಾಲಿವುಡ್ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.
ಹೌದು.. ಟಾಲಿವುಡ್‌ನ ಎನರ್ಜಿಟಿಕ್ ಸ್ಟಾರ್ ರಾಮ್ ಪೋತಿನೇನಿ ಸಾಲು ಸಾಲು ಚಿತ್ರಗಳಲ್ಲಿ ಮುನ್ನುಗ್ಗುತ್ತಿದ್ದಾರೆ. ಇತ್ತೀಚೆಗಷ್ಟೇ ಬೋಯಪಾಟಿ ಶ್ರೀನು ನಿರ್ದೇಶನದ 'ಸ್ಕಂದ' ಸಿನಿಮಾದ ಮೂಲಕ ರಾಮ್ ಬಿಗ್ ಸ್ಕ್ರೀನ್ ಮೇಲೆ ಅಬ್ಬರಿಸಿದ್ದರು. ಈ ಚಿತ್ರ ನಿರೀಕ್ಷಿತ ಯಶಸ್ಸು ಗಳಿಸಲಿಲ್ಲ. ಸದ್ಯ ರಾಮ್ ಪೂರಿ ಜಗನ್ನಾಥ್ ಜೊತೆ 'ಡಬಲ್ ಸ್ಮಾರ್ಟ್' ಸಿನಿಮಾ ಮಾಡುತ್ತಿದ್ದಾರೆ.
ಇದನ್ನೂ ಓದಿ:ಶಾರುಕ್‌ಗೆ ರಣಬೀರ್ ಶಾಕ್..! ಬಿಡುಗಡೆಗೂ ಮುನ್ನವೇ ಜವಾನ್ ದಾಖಲೆ ಮುರಿದ ಅನಿಮಲ್
ಈ ಹಿಂದೆ ಇವರಿಬ್ಬರ ಕಾಂಬೋದಲ್ಲಿ ಬಂದಿದ್ದ 'ಇಸ್ಮಾರ್ಟ್ ಶಂಕರ್' ಸಿನಿಮಾದ ಸೀಕ್ವೆಲ್ ಆಗಿ ಈ ಸಿನಿಮಾ ನಿರ್ಮಾಣವಾಗುತ್ತಿದೆ. ಈಗಾಗಲೇ ಈ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ಬ್ಲಾಕ್ ಬಸ್ಟರ್ ಹಿಟ್ ಚಿತ್ರದ ಮುಂದುವರೆದ ಭಾಗವಾಗಿ ಬರುತ್ತಿರುವ ಈ ಚಿತ್ರದ ಮೇಲೆ ಸಿನಿಮಾ ಪ್ರೇಕ್ಷಕರಲ್ಲಿ ಭಾರೀ ನಿರೀಕ್ಷೆ ಮೂಡಿಸಿದೆ.
ಇನ್ನೊಂದೆಡೆ ಪೂರಿ ಜತೆಗಿನ ‘ಡಬಲ್ ಸ್ಮಾರ್ಟ್’ ಸಿನಿಮಾ ಮುಗಿಸದೇ ಮತ್ತೊಂದು ಸಿನಿಮಾ ಮಾಡಲು ರಾಮ್ ರೆಡಿಯಾಗುತ್ತಿದ್ದಾರೆ. ಪೀಪಲ್ಸ್ ಮೀಡಿಯಾ ಫ್ಯಾಕ್ಟರಿ ಬ್ಯಾನರ್ ಅಡಿಯಲ್ಲಿ ಈ ಸಿನಿಮಾ ತಯಾರಾಗುತ್ತಿದೆ. ಈಗಾಗಲೇ ಈ ಸಿನಿಮಾದ ಪ್ರೀ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ. ಆದರೆ ಈ ಸಿನಿಮಾವನ್ನು ಯಾರು ನಿರ್ದೇಶಿಸುತ್ತಿದ್ದಾರೆ? ಎಂಬುದು ಇನ್ನೂ ಬಹಿರಂಗವಾಗಿಲ್ಲ.
ಇದನ್ನೂ ಓದಿ:ಈ ವಾರ 7 ಮಂದಿ ನಾಮಿನೇಟ್..! ನಿಮ್ಮ ಪ್ರಕಾರ ಈ ವಾರ ಯಾರು ಔಟ್ ಆಗಬಹುದು?
ಇದೀಗ ಈ ಸಿನಿಮಾದ ಬಗ್ಗೆ ಒಂದು ಕುತೂಹಲಕಾರಿ ವಿಷಯ ಹೊರಬಿದ್ದಿದೆ. ಸಪ್ತಸಾಗರದಾಜೆ ಎಲ್ಲೋ ಸಿನಿಮಾದ ಮೂಲಕ ಮನೆಮಾತಾಗಿರುವ ರುಕ್ಮಿಣಿ ವಸಂತ್ ಅವರು, ರಾಮ್ ಜೊತೆ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲದೆ, ಪೀಪಲ್ಸ್ ಮೀಡಿಯಾ ಫ್ಯಾಕ್ಟರಿ ರುಕ್ಮಿಣಿ ಅವರ ಜೊತೆ ಮಾತುಕತೆ ನಡೆಸುತ್ತಿರುವುದಾಗಿ ತಿಳಿದು ಬಂದಿದೆ.
ರಾಮ್ ಅವರ ಹೆಸರಿಡದ ಸಿನಿಮಾಗೆ ರುಕ್ಮಿಣಿ ವಸಂತ್ ಅವರನ್ನೇ ನಾಯಕಿಯಾಗಿ ತೆಗೆದುಕೊಳ್ಳಲು ಚಿತ್ರತಂಡ ನಿರ್ಧರಿಸಿದ್ದಾಗಿ ತಿಳಿದು ಬಂದಿದೆ. ಅಲ್ಲದೆ, ಈ ಮಾತುಕತೆ ಬಹುತೇಕ ಯಶಸ್ವಿಯಾಗಿದ್ದು, ಮತ್ತೊಬ್ಬ ಕನ್ನಡತಿ ತೆಲುಗು ಸಿನಿರಂಗಕ್ಕೆ ಪ್ರವೇಶ ಮಾಡುವುದು ನೂರಕ್ಕೆ ನೂರು ಖಚಿತವಾಗಿದೆ ಎನ್ನಲಾಗಿದೆ.
ಇದನ್ನೂ ಓದಿ: ಪ್ರಭಾಸ್ ಸಿನಿಮಾದಲ್ಲಿ ಯಂಗ್ ಹೀರೋಯಿನ್ ಸ್ಪೆಷಲ್ ಸಾಂಗ್.. ಯಾರು ಗೊತ್ತಾ?
ರಕ್ಷಿತ್ ಶೆಟ್ಟಿ ಅಭಿನಯದ ‘ಸಪ್ತಸಾಗರದಾಜೆ ಎಲ್ಲೋ’ ಚಿತ್ರದ ನಾಯಕಿ ರುಕ್ಮಿಣಿ ವಸಂತ್. ಈ ಸಿನಿಮಾ ಎರಡು ಭಾಗಗಳಲ್ಲಿ ತಯಾರಾಗಿದೆ. ಸೆಪ್ಟೆಂಬರ್‌ನಲ್ಲಿ 'ಸಪ್ತಸಾಗರದಾಜೆ ಎಲ್ಲೋ ಸೈಡ್ ಎ' ಬಿಡುಗಡೆಯಾಗಿ ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಗಿತ್ತು. ಸಧ್ಯ 'ಸಪ್ತಸಾಗರದಾಜೆ ಎಲ್ಲೋ ಸೈಡ್ ಬಿ' ಇದೇ ತಿಂಗಳ 17ಕ್ಕೆ ಬಿಡುಗಡೆಯಾಗಲಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.