Sapta sagaradache ello: ರುಕ್ಮಿಣಿ ವಸಂತ್‌ ಹಾಗೂ ರಕ್ಷಿತ್‌ ಶೆಟ್ಟಿ ನಟನೆಯ 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾ ರಿಲೀಸ್‌ ಆಗಿ ಭರ್ಜರಿ ಸೌಂಡ್‌ ಮಾಡಿತ್ತು. ಮನು-ಪ್ರಿಯಾ ಕೆಮಿಸ್ಟ್ರಿಗೆ ಸ್ಯಾಂಡಲ್‌ವುಡ್‌ ಮಾತ್ರವಲ್ಲದೇ ಟಾಲಿವುಡ್‌ ಮಂದಿ ಕೂಡ ಫಿದಾ ಆಗಿದ್ದರು. 


COMMERCIAL BREAK
SCROLL TO CONTINUE READING

ಟಾಲಿವುಡ್‌ನಲ್ಲಿ 'ಸಪ್ತ ಸಾಗರಾಲು ದಾಟಿ' ಎನ್ನುವ ಟೈಟಲ್‌ ಮೂಲಕ ಸಿನಿಮಾ ರಿಲೀಸ್‌ ಆಗಿ ಮೊದಲ ದಿನವೇ ಬ್ರೇಕ್ ಈವನ್ ಆಗಿತ್ತು. ಅಲ್ಲದೇ ವಾರಾಂತ್ಯದಲ್ಲೂ ಭರ್ಜರಿ ಕಲೆಕ್ಷನ್‌ ಮಾಡಿತ್ತು. ಇನ್ನು ಈ ಸಿನಿಮಾಗೆ ಸೋಷಿಯಲ್‌ ಮಿಡಿಯಾದಲ್ಲಿ ಮೆಚ್ಚುಗೆಯ ಮಹಾಪೂರವೇ ಹರಿದು ಬಂದಿತ್ತು. 


ಇದನ್ನೂ ಓದಿ-ರಕ್ಷ್ ರಾಮ್ ನಾಯಕನಾಗಿ ನಟಿಸುತ್ತಿರುವ 'ಬರ್ಮ' ಚಿತ್ರದ ಚಿತ್ರೀಕರಣ ಆರಂಭ..!


ರುಕ್ಮಿಣಿ ವಸಂತ್‌ ಪ್ರಿಯಾ ಪಾತ್ರದಲ್ಲಿ ನಟಿಸಿ ಎಲ್ಲರಿಗೂ ಮೋಡಿ ಮಾಡಿದ್ದಾರೆ. ಇದಲ್ಲದೇ ಗಣೇಶ್ ಜೋಡಿಯಾಗಿ 'ಬಾನದಾರಿಯಲ್ಲಿ' ಚಿತ್ರದಲ್ಲಿ ರುಕ್ಮಿಣಿ ನಟಿಸಿದ್ದು, ಈ ಸಿನಿಮಾ ಸಹ ಇದೇ ವಾರದಲ್ಲಿ ತೆರೆಗೆ ಬರಲಿದೆ. ಜೊತೆಗೆ ಶ್ರೀಮುರುಳಿ ಅವರ 'ಬಘೀರ', ಶಿವಣ್ಣನ 'ಬೈರತಿ ರಣಗಲ್' ಚಿತ್ರದಲ್ಲಿ ನಮ್ ಪುಟ್ಟಿ ಕಾಣಿಸಿಕೊಳ್ಳಲಿದ್ದಾರೆ. ಒಟ್ಟಿನಲ್ಲಿ ರುಕ್ಮಿಣಿ ವಸಂತ್‌ ಸದ್ಯ ಬಹುಬೇಡಿಕೆಯ ನಟಿ. 


ಇನ್ನು ಅತ್ತ ಟಾಲಿವುಡ್ನಲ್ಲಿ  ಕನ್ನಡ ನಟಿಯರ ಹಾವಳಿ ಜೋರಾಗಿದೆ. ಶ್ರೀಲೀಲಾ, ರಶ್ಮಿಕಾ ಸಖತ್‌ ಮಿಂಚುತ್ತಿದ್ದಾರೆ. ಹೀಗಿರುವಾಗ ರುಕ್ಮಿಣಿ ವಸಂತ್ ಶೀಘ್ರದಲ್ಲೇ ಟಾಲಿವುಡ್‌ಗೆ ಎಂಟ್ರಿ ಕೊಡಬಹುದು ಎನ್ನಲಾಗುತ್ತಿದೆ. ಇತ್ತೀಚೆಗೆ ಭಾಗವಹಿಸಿದ ಸಂದರ್ಶನದಲ್ಲಿ ನಟಿ ರುಕ್ಮಿಣಿ ವಸಂತ್‌ ಸಹ ನನಗೆ ತೆಲುಗಿನಲ್ಲಿ ನಟಿಸುವ ಅವಕಾಶ ಸಿಕ್ಕರೆ ಮಿಸ್‌ ಮಾಡಿಕೊಳ್ಳುವುದಿಲ್ಲ ಎಂದಿದ್ದಾರೆ. 


ಇದನ್ನೂ ಓದಿ-"ಗರುಡ ಪುರಾಣ" ಚಿತ್ರದ ಟೀಸರ್ ಬಿಡುಗಡೆಗೊಳಿಸಿದ ಅಶ್ವಿನಿ ಪುನೀತ್ ರಾಜಕುಮಾರ್


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=q9auZ2eqeZo
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.