ಬೆಂಗಳೂರು: ಎಸ್‌‍ಪಿಬಿ (SPB) ಎಂದೇ ಖ್ಯಾತಿಗಳಿಸಿದ್ದ ಎಸ್.ಪಿ. ಬಾಲಸುಬ್ರಹ್ಮಣ್ಯಂ ಸ್ರೀಪತಿ ಪಂಡಿತರಾದ್ಯುಲು ಬಾಲಸುಬ್ರಹ್ಮಣ್ಯಂ ಅವರ ಆರಂಭದ ದಿನಗಳು ಹೀಗಿದ್ದವು.


  • COMMERCIAL BREAK
    SCROLL TO CONTINUE READING

    1946ರ ಜೂನ್ 4ರಂದು ಎಸ್.ಪಿ.‌ ಬಾಲಸುಬ್ರಹ್ಮಣ್ಯಂ (SP Balasubrahmanyam) ಆಂಧ್ರಪ್ರದೇಶದ ನೆಲ್ಲೂರಿನಲ್ಲಿ ಜನಿಸಿದರು.‌ ತಂದೆ ಸಂಬಮೂರ್ತಿ ಹರಿಕಥಾ ವಿದ್ವಾಂಸರು, ತಾಯಿ ಶಕುಂತಲಮ್ಮ. 

  • ಇಂಜಿನಿಯರಿಂಗ್ ಮಾಡಿದ್ದ ಎಸ್.ಪಿ.‌ ಬಾಲಸುಬ್ರಹ್ಮಣ್ಯಂ ಅವರು ಕಾಲೇಜು ದಿನಗಳಲ್ಲೇ ಸಂಗೀತ ಲೊಕದತ್ತ ಆಕರ್ಷಿತರಾಗಿದ್ದರು. ಕಾಲೇಜಿನಲ್ಲಿ‌ ಸಂಗೀತ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದ ಅವರು, ಮೊದಮೊದಲು ಪಿ.ಬಿ. ಶ್ರೀನಿವಾಸ್ ಅವರ ಹಾಡುಗಳನ್ನು ಅದ್ಭುತವಾಗಿ ಹಾಡಿ ಎಲ್ಲರ ಮೆಚ್ಚುಗೆ ಗಳಿಸಿದ್ದರು. ಎಸ್.ಪಿ.‌ ಬಾಲಸುಬ್ರಹ್ಮಣ್ಯಂ ಅವರ ಸಂಗೀತ ಕಲೆಯನ್ನು ಮೊದಲಿಗೆ ಗುರುತಿಸಿದ್ದು ಸಂಗೀತ ನಿರ್ದೇಶಕ ಕೋದಂಡಪಾಣಿ ಅವರು.

  • 1966ರಲ್ಲಿ "ಶ್ರೀ ಶ್ರೀ ಮರ್ಯಾದ ರಾಮಣ್ಣ" ಎಂಬ ತೆಲುಗು ಸಿನಿಮಾ ಮೂಲಕ ಎಸ್.ಪಿ.‌ ಬಾಲಸುಬ್ರಹ್ಮಣ್ಯಂ ಚಲನಚಿತ್ರ ಗಾಯನ ಕ್ಷೇತ್ರಕ್ಕೆ ಕಾಲಿಟ್ಟರು. ಅದೇ ವರ್ಷ ಅವರು "ನಕ್ಕರೆ ಅದೇ ಸ್ವರ್ಗ" ಎಂಬ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೂ ಪದಾರ್ಪಣೆ ಮಾಡಿದರು. ಇದಾದ ಮೇಲೆ  "ಹೋಟೆಲ್ ರಾಮಣ್ಣ" ಎಂಬ ಸಿನಿಮಾ ಮೂಲಕ ತಮಿಳು ಚಿತ್ರರಂಗವನ್ನು ಪ್ರವೇಶಿಸಿದರು.


ಜೀವನಯಾನ ಮುಗಿಸಿದ ಗಾನಗಾರುಡಿಗ: ಖ್ಯಾತ ಗಾಯಕ 'ಎಸ್ ಪಿ ಬಾಲಸುಬ್ರಹ್ಮಣ್ಯಂ' ಇನ್ನಿಲ್ಲ


  • ಚಿತ್ರಜಗತ್ತಿಗೆ ಕಾಲಿಟ್ಟ ಸಂದರ್ಭದಲ್ಲಿಯೆ ಜೆಮಿನಿ ಗಣೇಶನ್, ಶಿವಾಜಿ ಗಣೇಶನ್, ಎಂ.ಜಿ ರಾಮಚಂದ್ರನ್,‌ ಎನ್.ಟಿ. ರಾಮರಾವ್ ಅವರ ಹಾಡುಗಳಿಗೆ ಎಸ್.ಪಿ. ಬಾಲಸುಬ್ರಹ್ಮಣ್ಯಂ ಕಂಠವಾಗಿದ್ದರು. ಇದಾದ ಮೇಲೆ "ಶಂಕರಾಭರಣಂ" ಸಿನಿಮಾ‌ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದರು. ‌"ಶಂಕರಾಭರಣಂ" ಸಿನಿಮಾದ ಹಾಡಿಗಾಗಿ‌ ಮೊದಲ ಬಾರಿಗೆ ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿದ್ದರು.

  • 1981ರಲ್ಲಿ ಒಂದೇ ದಿನ 21 ಕನ್ನಡ ಚಿತ್ರದ ಹಾಡುಗಳಿಗೆ ಹಾಡಿದ್ದರು. ಇದೇ ರೀತಿ ತಮಿಳಿನಲ್ಲಿ 19 ಹಾಡುಗಳನ್ನು ಹಾಡಿದ್ದರು. ಅದೇ ವರ್ಷ (1981ರಲ್ಲಿ) "ಏಕ್ ದುಜೆ ಕೆ‌ ಲಿಯೇ" ಸಿನಿಮಾ ಮೂಲಕ ಹಿಂದಿಗೆ ಪದಾರ್ಪಣೆ ಮಾಡಿದ್ದರು. ಆ ಸಿನಿಮಾದ "ತೆರೆ ಮೇರೆ ಬೀಚ್ ಮೆ.." ಹಾಡಿಗೆ ಮತ್ತೊಮ್ಮೆ ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿದ್ದರು.


ಎಸ್‌ಪಿಬಿ ಆರೋಗ್ಯದ ಬಗ್ಗೆ ಪುತ್ರ ಎಸ್‌ಪಿ ಚರಣ್ ಹೇಳಿದ್ದೇನು? ವಾಚ್ ವಿಡಿಯೋ