Sara Tendulkar : ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ ಡೀಪ್‌ಫೇಕ್ AI ಫೋಟೋಗಳು ಮತ್ತು ವೀಡಿಯೊಗಳು ಹಾವಳಿ ಹೆಚ್ಚಾಗಿದೆ. ಭಾರತೀಯ ಸೆಲೆಬ್ರಿಟಿಗಳು ನಿರಂತರವಾಗಿ ಇದಕ್ಕೆ ಬಲಿಯಾಗುತ್ತಿದ್ದಾರೆ. ರಶ್ಮಿಕಾ ಮಂದಣ್ಣ ಮತ್ತು ಕತ್ರಿನಾ ಕೈಫ್ ನಂತರ, ಇದೀಗ ಪ್ರಸಿದ್ಧ ಭಾರತೀಯ ಕ್ರಿಕೆಟ್ ತಂಡದ ಆಟಗಾರ ಶುಭಮನ್ ಗಿಲ್ ಮತ್ತು ಸಚಿನ್ ತೆಂಡೂಲ್ಕರ್ ಅವರ ನೆಚ್ಚಿನ ಸಾರಾ ತೆಂಡೂಲ್ಕರ್ ಡೀಪ್‌ಫೇಕ್‌ಗೆ ಒಳಗಾಗಿದ್ದಾರೆ.


COMMERCIAL BREAK
SCROLL TO CONTINUE READING

ಹೌದು.. ಶುಭಮನ್‌ ಗಿಲ್‌ ಮತ್ತು ಸಾರಾ ಇಬ್ಬರು ಕುಳಿತು ಒಟ್ಟಿಗೆ ಸಮಯ ಕಳೆಯುತ್ತಿರುವ ಫೋಟೋ ಒಂದು ವೈರಲ್‌ ಆಗಿದೆ. ಈ ಚಿತ್ರ ಡೀಪ್‌ಫೇಕ್ ಅಂತ ತಿಳಿದುಬಂದಿದೆ. ಅಲ್ಲದೆ, ಸಾರಾ ತೆಂಡೂಲ್ಕರ್ ಅವರ ನಕಲಿ ಎಕ್ಸ್ ಖಾತೆಯ ಪ್ರಕರಣವೂ ಸಹ ಬೆಳಕಿಗೆ ಬಂದಿದ್ದು, ಈ ಕುರಿತು ಪ್ರತಿಕ್ರಿಯಿಸಿ, ಸಂಪೂರ್ಣ ವಿಷಯದ ಸತ್ಯವನ್ನು ಬಹಿರಂಗ ಪಡಿಸಿದ್ದಾರೆ.


ಇದನ್ನೂ ಓದಿ ಸುವರ್ಣ ಜಾಕ್‌ಪಾಟ್‌ : ಗೇಮ್ ಶೋದಲ್ಲಿ ಸೆಲೆಬ್ರಿಟಿಗಳು ಭಾಗಿ!


ಇನ್‌ಸ್ಟಾಗ್ರಾಮ್‌ನಲ್ಲಿ ಸ್ಟೇಟಸ್ ಹಾಕಿಕೊಂಡು ಬೇಸರ ವ್ಯಕ್ತಪಡಿಸಿರುವ ಸಾರಾ, 'ನಮ್ಮೆಲ್ಲರಿಗೂ ಸಂತೋಷ, ದುಃಖ ಮತ್ತು ನಮ್ಮ ದೈನಂದಿನ ದಿನಚರಿಯನ್ನು ಹಂಚಿಕೊಳ್ಳಲು ಸಾಮಾಜಿಕ ಮಾಧ್ಯಮವು ಉತ್ತಮ ಸ್ಥಳವಾಗಿದೆ. ಆದರೆ, ಅಂತರ್ಜಾಲದಲ್ಲಿ ತಂತ್ರಜ್ಞಾನದ ದುರುಪಯೋಗವನ್ನು ನೋಡಿದ್ರೆ ಶಾಕ್‌ ಆಗುತ್ತಿದೆ. ಸತ್ಯಕ್ಕೆ ದೂರವಿರುವ ನನ್ನ ಕೆಲವು ನಕಲಿ ಫೋಟೋಗಳನ್ನು ನಾನು ನೋಡಿದ್ದೇನೆ ಎಂದು ಡೀಪ್‌ಫೇಕ್‌ ಚಿತ್ರಗಳ ಬಗ್ಗೆ ಬೇಸರ ವ್ಯಕ್ತಪಡಿಸಿದರು.


[[{"fid":"354008","view_mode":"default","fields":{"format":"default","field_file_image_alt_text[und][0][value]":false,"field_file_image_title_text[und][0][value]":false},"type":"media","field_deltas":{"1":{"format":"default","field_file_image_alt_text[und][0][value]":false,"field_file_image_title_text[und][0][value]":false}},"link_text":false,"attributes":{"class":"media-element file-default","data-delta":"1"}}]]


ಅಲ್ಲದೆ, ನಾನು X ನಲ್ಲಿ ಯಾವುದೇ ಖಾತೆಯನ್ನು ಹೊಂದಿಲ್ಲ ಮತ್ತು ನನ್ನ ಹೆಸರಿನಲ್ಲಿರುವ ನಕಲಿ ಖಾತೆಗಳನ್ನು ತನಿಖೆ ಮಾಡಲಾಗುತ್ತದೆ, ಮತ್ತು ಅವುಗಳನ್ನು ಅಮಾನತುಗೊಳಿಸುತ್ತದೆ ಎಂದು ನಾನು ಭಾವಿಸುತ್ತೇನೆ. ಜನರನ್ನು ದಾರಿ ತಪ್ಪಿಸುವ ಉದ್ದೇಶದಿಂದ ಈ ರೀತಿ ಕೃತ್ಯ ಮಾಡಲಾಗುತ್ತಿದೆ ಎಂದು ಸಾರಾ ಹೇಳಿಕೊಂಡಿದ್ದಾರೆ.


ಇದನ್ನೂ ಓದಿ : ಮೊಟ್ಟ ಮೊದಲ ಬಾರಿಗೆ ಲಿಡ್ಕರ್ ಗೆ ಬ್ರ್ಯಾಂಡ್ ಅಂಬಾಸಿಡರ್ ಆದ ಡಾಲಿ ಧನಂಜಯ


ಇನ್ನು ಸಾರಾ ತೆಂಡೂಲ್ಕರ್ ಮತ್ತು ಶುಬ್‌ಮಾನ್ ಗಿಲ್ ಅವರ ಮಾರ್ಫ್ ಮಾಡಿದ ಫೋಟೋ ಅಕ್ಟೋಬರ್ 26 ರಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಲು ಪ್ರಾರಂಭಿಸಿತು. ಈ ಚಿತ್ರವನ್ನು ನೋಡಿದ ಜನರು ಗೊಂದಲಕ್ಕೊಳಗಾದರು. ಅಲ್ಲದೆ, ಇಬ್ಬರೂ ಲವ್‌ ಮಾಡುತ್ತಿದ್ದಾರೆ ಎಂದು ತಮ್ಮ ಸಂಬಂಧವನ್ನು ಅಧಿಕೃತಗೊಳಿಸಿದ್ದಾರೆ ಎಂದು ಭಾವಿಸಿದ್ದರು. ಆದರೆ ಸ್ವಲ್ಪ ಸಮಯದ ನಂತರ ಈ ಚಿತ್ರ ಫೇಕ್‌ ಎಂದು ತಿಳಿದುಬಂದಿತ್ತು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.