ನವದೆಹಲಿ:ಖ್ಯಾತ ಬಾಲಿವುಡ್ ನಟ ಸಂಜಯ್ ದತ್ತ್ ಅಭಿನಯದ 'ಸಡಕ್-2' ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ಆದಿತ್ಯ ರಾಯ್ ಕಪೂರ್, ಆಲಿಯಾ ಭಟ್ ಹಾಗೂ ಪೂಜಾ ಭಟ್ ಮಹತ್ವದ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮಹೇಶ್ ಭಟ್ ಈ ಚಿತ್ರದ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಈ ಚಿತ್ರದ ಮೂಲಕ ಮಹೇಶ್ ಭಟ್ 21 ವರ್ಷಗಳ ಸುದೀರ್ಘ ಅವಧಿಯ ನಂತರ ಪುನಃ ನಿರ್ದೇಶಕರಾಗಿ ಬೆಳ್ಳಿ ಪರದೆಗೆ ಮರಳುತ್ತಿದ್ದಾರೆ.


COMMERCIAL BREAK
SCROLL TO CONTINUE READING

ಚಿತ್ರದಲ್ಲಿ ಸಂಜಯ್ ದತ್ತ್ ಟ್ರಾವೆಲ್ ಏಜೆಂಟ್ ರವಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಲಿಯಾ ಆರ್ಯಾ ಹಾಗೂ ಆದಿತ್ಯರಾಯ್ ಕಪೂರ್ ವಿಶಾಲ್ ಹೆಸರಿನ ಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದ ಟ್ರೈಲರ್ ಇದೀಗ ಬಿಡುಗಡೆಯಾಗಿದ್ದು, ಟ್ರೈಲರ್ ವಿಕ್ಷೀಸುತ್ತಿದ್ದಂತೆ, ಇದೊಂದು ಸೇಡು ತೀರಿಸಿಕೊಳ್ಳುವ ಕಥಾ ಹಂದರವನ್ನು ಹೊಂದಿದ ಚಿತ್ರವಾಗಿದೆ ಎಂಬಂತೆ ಮೂಡಿಬಂದಿದೆ. ಟ್ರೈಲರ್ ನ ಆರಂಭ, ಈ ಚಿತ್ರದ ಮೊದಲ ಆವೃತ್ತಿಯ ಕೆಲ ಸೀನ್ ಗಳನ್ನು ಒಳಗೊಂಡಿದೆ. ಬಳಿಕ ಆ ಕಥೆ ಮುಂದುವರೆಯುತ್ತಿರುವ ಹಾಗೆ ತೋರಿಸಲಾಗಿದೆ. ಮುಂದಿನ ಆವೃತ್ತಿಯಲ್ಲಿ ತನ ಪ್ರೀತಿಯನ್ನು ಕಳೆದುಕೊಳ್ಳುವ ರವಿ ಜೀವಿಸುವ ಆಸೆಯನ್ನೇ ತೊರೆದಿದ್ದಾನೆ. ಈ ಮಧ್ಯೆ ಆತನ ಜೀವನದಲ್ಲಿ ಆರ್ಯಾ ಹಾಗೂ ವಿಶಾಲ್ ಎಂಟ್ರಿಯಾಗುತ್ತದೆ. ರವಿ ಜೊತೆ ಅವರಿಬ್ಬರೂ ಪ್ರಯಾಣವೊಂದನ್ನು ಕೈಗೊಳ್ಳುತ್ತಿರುವುದು ಕಂಡುಬಂದಿದೆ. ಈ ವೇಳೆ ಶತ್ರುಗಳ ಜೊತೆಗೆ ಅವರ ಮುಖಾಮುಖಿಯಾಗುತ್ತದೆ. ಚಿತ್ರದ ಟ್ರೈಲರ್ ನಲ್ಲಿ ಮಕರಂದ್ ದೇಶಪಾಂಡೆ ತುಂಬಾ ಇಂಪ್ರೆಸಿವ್ ಆಗಿ ಕಂಡುಬಂದಿದ್ದಾರೆ. ಇಲ್ಲಿದೆ ಸಡಕ್ 2 ಚಿತ್ರದ ಟ್ರೈಲರ್...


ಈ ಎಲ್ಲ ತಾರೆಯರನ್ನು ಹೊರತುಪಡಿಸಿ ಚಿತ್ರದಲ್ಲಿ ಗುಲ್ಶನ್ ಗ್ರೋವರ್, ಜಿಶು ಸೆನ್ ಗುಪ್ತಾ, ಪ್ರಿಯಾಂಕಾ ಬೋಸ್, ಮೋಹನ್ ಕುಮಾರ್ ಗಳಂತಹ ತಾರೆಯರು ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರ ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ಮೇಲೆ ಆಗಸ್ಟ್ 28ಕ್ಕೆ ಬಿಡುಗಡೆಯಾಗುತ್ತಿದೆ. 'Sadak 2', 1991 ರಲ್ಲಿ ಬಿಡುಗಡೆಯಾಗಿದ್ದ ಖ್ಯಾತ ಬಾಲಿವುಡ್ ಚಿತ್ರ 'Sadak'ನ ಸಿಕ್ವಲ್ ಚಿತ್ರವಾಗಿದೆ.  ಸಡಕ್ ಚಿತ್ರದಲ್ಲಿ ಸಂಜಯ್ ದತ್ತ್ ಹಾಗೂ ಪೂಜಾ ಭಟ್ ಪ್ರಮುಖ ಭೂಮಿಕೆಯಲ್ಲಿ ಕಂಡುಬಂದಿದ್ದರು.  ಇನ್ನೊಂದೆಡೆ ಈ ಚಿತ್ರದ ನಿರ್ದೇಶಕ ಮಹೇಶ್ ಭಟ್ 1999 ರಲ್ಲಿ ಕೊನೆಯ ಬಾರಿಗೆ 'ಕಾರತೂಸ್' ಚಿತ್ರದ ನಿರ್ದೇಶನ ಮಾಡಿದ್ದರು. ಆ ಚಿತ್ರದಲ್ಲಿಯೂ ಕೂಡ ಸಂಜಯ್ ದತ್ತ್ ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದರು.