Police Story@25: ‘ಅಗ್ನಿ ಐಪಿಎಸ್’ ಆಗಿ ಮತ್ತೆ ತೆರೆಮೇಲೆ ಬರಲಿದ್ದಾರೆ ಸಾಯಿಕುಮಾರ್..!
‘ಅಗ್ನಿ ಐಪಿಎಸ್’ ಮೂಲಕ ಕರುನಾಡಿನ ಮನೆಮಾತಾಗಿದ್ದ ನಟಭಯಂಕರ ಸಾಯಿಕುಮಾರ್ ಮತ್ತೆ ತೆರೆಮೇಲೆ ಮಿಂಚಲು ಸಿದ್ಧರಾಗಿದ್ದಾರೆ.
ಬೆಂಗಳೂರು: ‘ಅಗ್ನಿ ಐಪಿಎಸ್’ ಮೂಲಕ ಕರುನಾಡಿನ ಮನೆಮಾತಾಗಿದ್ದ ನಟಭಯಂಕರ ಸಾಯಿಕುಮಾರ್ ಮತ್ತೆ ತೆರೆಮೇಲೆ ಮಿಂಚಲು ಸಿದ್ಧರಾಗಿದ್ದಾರೆ. 2 ದಶಕಗಳು ಕಳೆದರೂ ‘ಅಗ್ನಿ ಐಪಿಎಸ್’ ಸಿನಿಮಾ ತನ್ನ ಜನಪ್ರಿಯತೆಯನ್ನು ಕಳೆದುಕೊಂಡಿಲ್ಲ. ಥ್ರಿಲ್ಲರ್ ಮಂಜು ಮತ್ತು ಸಾಯಿಕುಮಾರ್ ಜೋಡಿ ‘ಪೊಲೀಸ್ ಸ್ಟೋರಿ’ ಸಿನಿಮಾದ ಮೂಲಕ ಕನ್ನಡ ಚಿತ್ರರಂಗದಲ್ಲಿ ಇತಿಹಾಸ ಸೃಷ್ಟಿಸಿತ್ತು. 25 ವರ್ಷಗಳ ಹಿಂದೆಯೇ ಈ ಸಿನಿಮಾ ಪ್ಯಾನ್ ಇಂಡಿಯಾ ಹಿಟ್ ಆಗಿ ಸಾಯಿಕುಮಾರ್ ಅವರಿಗೆ ಸ್ಟಾರ್‌ಡಮ್ ತಂದುಕೊಟ್ಟಿತ್ತು. ಇಂದಿಗೂ ನನ್ನಲ್ಲಿ ಆ ‘ಅಗ್ನಿ’ ಸ್ವಲ್ಪ ಇದೆ ಅಂತಾ ನಟ ಹೇಳಿಕೊಂಡಿದ್ದಾರೆ. 'ಪೊಲೀಸ್ ಸ್ಟೋರಿ' ಬಿಡುಗಡೆಯಾಗಿ 25 ವರ್ಷಗಳು ಕಳೆದಿರುವ ಸಂಭ್ರಮಕ್ಕೆ ಈ ವರ್ಷ 'ಅಗ್ನಿ ಐಪಿಎಸ್' ಪಾತ್ರವನ್ನು ಮತ್ತೆ ತೆರೆಮೇಲೆ ತರಲು ಚಿತ್ರತಂಡ ಸಿದ್ಧವಾಗಿದೆ ಅಂತಾ ತಿಳಿಸಿದ್ದಾರೆ.
‘ತಂದೆ-ಮಗನ ಸೆಂಟಿಮೆಂಟ್ ಕಥೆ ಹೊಂದಿರುವ ನನ್ನ ಇತ್ತೀಚಿನ ತೆಲುಗು ಸಿನಿಮಾ ರಿಲೀಸ್ ಆಗಿತ್ತು. ಹೀಗಾಗಿ ನಾನು ಆಂಧ್ರಪ್ರದೇಶದಾದ್ಯಂತ ಸಿನೆಮಾ ಹಾಲ್‌ಗಳಿಗೆ ಭೇಟಿ ನೀಡಿದ್ದೆ. ಈ ಸಿನಿಮಾಗೆ ಪ್ರೇಕ್ಷಕರಿಂದ ಹೇಗೆ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ ಅಂತಾ ತಿಳಿದುಕೊಳ್ಳುವ ಕುತೂಹಲ ನನ್ನಲ್ಲಿತ್ತು. ಈ ಸಿನಿಮಾದ ಕೊನೆಯಲ್ಲಿ ನಾನು ಕೆಲವು ಆಕ್ಷನ್ ದೃಶ್ಯಗಳಲ್ಲಿ ನಟಿಸಿದ್ದೇನೆ. ನನ್ನ ಆಕ್ಷನ್ ದೃಶ್ಯಗಳು ಬಂದತಕ್ಷಣ ಪ್ರೇಕ್ಷಕರು ಅಗ್ನಿ… ಅಗ್ನಿ… ಅಂತಾ ಕೂಗುತ್ತಿದ್ದರು. ಇದನ್ನು ಕೇಳಿದ ಬಳಿಕ ನನಗೆ ಒಂದು ರೀತಿ ಥ್ರಿಲ್ ಆಯಿತು. 2 ದಶಕ ಕಳೆದರೂ ಪ್ರೇಕ್ಷಕರು ಅಗ್ನಿ ಐಪಿಎಸ್ ಪಾತ್ರವನ್ನು ನೆನಪಿನಲ್ಲಿಟ್ಟುಕೊಂಡಿದ್ದಾರಲ್ಲ ಅಂತ ನನಗೆ ಆಶ್ಚರ್ಯವಾಯಿತು' ಅಂತಾ ಹೇಳಿದ್ದಾರೆ.
ಇದನ್ನೂ ಓದಿ: Indian Idol 12 Winner: ಪವನ್ ದೀಪ್ ರಾಜನ್ ಮುಡಿಗೆ ಇಂಡಿಯನ್ ಐಡಲ್ 12 ಪ್ರಶಸ್ತಿ
'ಈ ಬಗ್ಗೆ ನಾನು ಥ್ರಿಲ್ಲರ್ ಮಂಜು ಅವರೊಂದಿಗೆ ಮಾತನಾಡಿದೆ. ಮತ್ತೆ ಅಗ್ನಿ ಐಪಿಎಸ್ ಪಾತ್ರವನ್ನು ತೆರೆಮೇಲೆ ತರುವ ಬಗ್ಗೆ ಚರ್ಚೆ ನೆಡಸಿದ್ದೇವೆ. ಇದಕ್ಕೆ ಅವರು ಓಕೆ ಅಂತಾ ಹೇಳಿದ್ದಾರೆ. ಪ್ರಸ್ತುತ ಸನ್ನಿವೇಶಕ್ಕೆ ಸರಿಹೊಂದುವ ಕಥೆಯನ್ನು ಅನ್ವೇಷಿಸುತ್ತಿದ್ದೇವೆ. ಅಗ್ನಿಯನ್ನು ನಿವೃತ್ತಿಯಿಂದ ಹೊರಹಾಕುವ ವಿಷಯದ ಕಥೆ ಸಿದ್ಧಪಡಿಸಲು ತಯಾರಿ ನಡೆದಿದೆ' ಅಂತಾ ಸಾಯಿಕುಮಾರ್ ಹೇಳಿದ್ದಾರೆ.
'ಅಗ್ನಿ ಪಾತ್ರ ನನಗೆ ಹೇಳಿ ಮಾಡಿಸಿದಂತಿದೆ. ಆದರೆ ನಾನು ಆ ಪಾತ್ರಕ್ಕೆ ಮೂಲ ಆಯ್ಕೆಯಾಗಿರಲಿಲ್ಲ. ಅಂದಿನ ದಿನಗಳಲ್ಲಿ ನಾನು ತೆಲುಗು ಚಿತ್ರಗಳಲ್ಲಿ ವೃತ್ತಿಜೀವನದೊಂದಿಗೆ ಕಷ್ಟಪಡುತ್ತಿದ್ದೆ. ಕನ್ನಡದಲ್ಲಿ ಕೆಲವು ಉತ್ತಮ ಪೋಷಕ ಪಾತ್ರಗಳಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು. ಸಿನಿಮಾವೊಂದರ ಶೂಟಿಂಗ್ ಸೆಟ್ ನಲ್ಲಿ ಥ್ರಿಲ್ಲರ್ ಮಂಜು ನನಗೆ ಅಗ್ನಿ ಐಪಿಎಸ್ ಕಥೆಯನ್ನು ಹೇಳಿದ್ದರು. ಕಥೆ ಕೇಳಿದ ನನಗೆ ಥ್ರಿಲ್ ಆಗಿತ್ತು. ಇದೇ ನನಗೆ ಸೂಕ್ತವಾದ ಸ್ಕ್ರಿಪ್ಟ್ ಎಂದು ನನಗೆ ತಿಳಿದಿತ್ತು. ಏಕೆಂದರೆ ಇದು ಸಂಭಾಷಣೆಗಳ ಮೇಲೆ ಕೇಂದ್ರೀಕರಿಸಿದ ಸಿನಿಮಾ. ಮಂಜು ಅವರು ಕುಮಾರ್ ಗೋವಿಂದ್ ಅವರನ್ನು ಹಾಕಿಕೊಳ್ಳಬೇಕೆಂದು ಇಚ್ಛಿಸಿದ್ದರು. ಕೊನೆಗೆ ನನಗೆ ಈ ಸಿನಿಮಾದ ಆಫರ್ ಸಿಕ್ಕಿತು' ಅಂತಾ ಸಾಯಿಕುಮಾರ್ ಹಿಂದಿನ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
ಇದನ್ನೂ ಓದಿ: ಈ ಮಹಿಳೆಯಲ್ಲಿ Akshay Kumar ನನ್ನು ಕಂಡ ಜನರು, ಮೊದಲ ನೋಟದಲ್ಲಿ ನೀವೂ ಕೂಡ ನಿಬ್ಬೇರಗಾಗುವಿರಿ
ತಮ್ಮ ವೃತ್ತಿಜೀವನದ ಯಶಸ್ಸಿಗೆ ಕನ್ನಡ ಚಿತ್ರಗಳು ಮತ್ತು ಕರುನಾಡಿನ ಜನರೇ ಕಾರಣ ಅಂತಾ ಸಾಯಿಕುಮಾರ್ ಹೇಳಿಕೊಂಡಿದ್ದಾರೆ. ಕನ್ನಡದಲ್ಲಿ ಅವಕಾಶ ನೀಡಿದ ನಿರ್ದೇಶಕರು, ನಿರ್ಮಾಪಕರು, ಸಹ ಕಲಾವಿದರಿಗೂ ಸಾಯಿಕುಮಾರ್ ಧನ್ಯವಾದ ಹೇಳಿದ್ದಾರೆ. ನಾನು ಎಲ್ಲ ರೀತಿಯ ಪಾತ್ರಗಳನ್ನು ಅನ್ವೇಷಿಸಲು ಪ್ರಯತ್ನಿಸುತ್ತಿದ್ದೇನೆ. ಶೀಘ್ರವೇ ಅಗ್ನಿ ಐಪಿಎಸ್ ಪಾತ್ರವನ್ನು ತೆರೆಮೇಲೆ ತರಲು ಪ್ರಯತ್ನಿಸುತ್ತೇವೆ ಅಂತಾ ಡೈಲಾಗ್ ಕಿಂಗ್ ಸಾಯಿಕುಮಾರ್ ಹೇಳಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ