Yash 19 : ಯಶ್ ʼಟಾಕ್ಸಿಕ್ʼ ಮೂಲಕ ಸ್ಯಾಂಡಲ್ವುಡ್ಗೆ ನ್ಯಾಚುರಲ್ ಬ್ಯೂಟಿ ಸಾಯಿ ಪಲ್ಲವಿ ಎಂಟ್ರಿ ಪಕ್ಕಾ..!
Yash 19 updates : ರಾಕಿಂಗ್ ಸ್ಟಾರ್ ಯಶ್ ಮುಂದಿನ ಸಿನಿಮಾದ ಟೈಟಲ್ ರಿವೀಲ್ ಆಗಿದೆ. ಯಶ್ 19ಗೆ ಟಾಕ್ಸಿಕ್ ಎಂಬ ಶೀರ್ಷಿಕೆ ಇಡಲಾಗಿದೆ. ಈ ಸಿನಿಮಾದಲ್ಲಿ ಯಶ್ ಜೊತೆ ನಾಯಕಿಯಾಗಿ ಯಾರು ನಟಿಸುತ್ತಿದ್ದಾರೆ ಎಂಬ ಚರ್ಚೆ ಶುರುವಾಗಿದ್ದು, ರಾಕಿ ಭಾಯ್ ಜೊತೆ ಸ್ಯಾಚುರಲ್ ಬ್ಯೂಟಿ ಸಾಯಿ ಪಲ್ಲವಿ ನಟಿಸುತ್ತಿದ್ದಾರೆ.
Sai Pallavi in Toxic movie : ಯಶ್ 19ನೇ ಸಿನಿಮಾದ ಟೈಟಲ್ ರಿವೀಲ್ ಬೆನ್ನಲ್ಲೇ ಈ ಸಿನಿಮಾದ ನಾಯಕಿ ಯಾರು ಎಂಬ ವಿಚಾರವಾಗಿ ಅಭಿಮಾನಿಗಳು ತಲೆಕಡಿಸಿಕೊಳ್ಳುತ್ತಿದ್ದಾರೆ. ರಾಕಿಯಭಾಯ್ ಜೊತೆ ಮೊದಲನೇ ಬಾರಿಗೆ ಸೌಥ್ ನ್ಯಾಚುರಲ್ ಬ್ಯೂಟಿ ಸಾಯಿ ಪಲ್ಲವಿ ನಟಿಸುತ್ತಿದ್ದಾರೆ. ಈ ಕುರಿತ ಕಂಪ್ಲೀಟ್ ವರದಿ ಇಲ್ಲಿದೆ.
ಹೌದು.. ಮಲಯಾಳಂ ನಿರ್ದೇಶಕಿ ಗೀತು ಮೋಹನ್‌ದಾಸ್ ಆಕ್ಷನ್ ಕಟ್ ಹೇಳಲಿರುವ, ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಸಿನಿಮಾದ ಟೈಟಲ್ ಇಂದು ಬೆಳಗ್ಗೆ ರಿವೀಲ್ ಆಗಿದೆ. ಶೀರ್ಷಿಕೆ ಅನಾವರದ ವಿಡಿಯೋದಲ್ಲಿ ನಿರ್ಮಾಪಕ ಮತ್ತು ನಿರ್ದೇಶಕ ಹೆಸರಿನೊಂದಿಗೆ ಯಶ್ ಲುಕ್ ಅನಾವರಣಗೊಳಿಸಲಾಗಿದೆ.
ಇದನ್ನೂ ಓದಿ: Yash : ಯಶ್ ಹೊಸ ಸಿನಿಮಾ Toxic ಟೈಟಲ್ ಅರ್ಥವೇನು ಗೊತ್ತೆ..? ಸಖತ್ ಇಂಟ್ರಸ್ಟಿಂಗ್ ಆಗಿದೆ
ಇನ್ನು ಟೈಟಲ್ ರಿವೀಲ್ ವಿಡಿಯೋ ನೋಡಿದ ಯಶ್ ಪ್ಯಾನ್ಸ್ ತೆಲೆಯಲ್ಲಿ ಈ ಸಿನಿಮಾಗೆ ನಾಯಕಿ ಯಾರು ಎಂಬ ಪ್ರಶ್ನೆ ಕಾಡಿದೆ. ಮೂಲಗಳ ಪ್ರಕಾರ ಮೊದಲ ಬಾರಿಗೆ ಯಶ್ ಜೊತೆ ಸುಂದರಿ ಸಾಯಿ ಪಲ್ಲವಿ ನಟಿಸುತ್ತಿದ್ದಾರೆ ಎನ್ನಲಾಗಿದೆ. ಆದರೆ ಈ ಕುರಿತು ಚಿತ್ರತಂಡ ಅಧಿಕೃತವಾಗಿ ಮಾಹಿತಿ ನೀಡಿಲ್ಲ.
ಇನ್ನು ತಮಿಳುನಾಡಿನಲ್ಲಿ ಜನಿಸಿದ ಸಾಯಿಪಲ್ಲವಿ ಮಲಯಾಳಂ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಪ್ರಸ್ತುತ ಸೌತ್ ಚಿತ್ರರಂಗದ ಪ್ರಮುಖ ನಟಿಯಾಗಿದ್ದಾರೆ. ಸಧ್ಯ ಟಾಕ್ಸಿಕ್ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಾರೆ ಎನ್ನಲಾಗಿದೆ. ಈ ಚಿತ್ರವನ್ನು ಮಲಯಾಳಂ ನಟಿ ಹಾಗೂ ನಿರ್ದೇಶಕಿ ಕೀತು ಮೋಹನ್ ದಾಸ್ ನಿರ್ದೇಶಿಸಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.