ನವದೆಹಲಿ: 90 ರ ದಶಕದಲ್ಲಿ ಕಾಶ್ಮೀರಿ ಪಂಡಿತರ ನಿರ್ಗಮನದ ಕುರಿತು ಸಂದರ್ಶನವೊಂದರಲ್ಲಿ ನೀಡಿದ ಹೇಳಿಕೆಗಳು ಸಾಮಾಜಿಕ ಮಾಧ್ಯಮದಲ್ಲಿ ವಿವಾದವನ್ನು ಸೃಷ್ಟಿಸಿದ ನಂತರ ನಟಿ ಸಾಯಿ ಪಲ್ಲವಿ ಇಂದು ಸ್ಪಷ್ಟೀಕರಣವನ್ನು ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಗ್ರೇಟ್ ಆಂಧ್ರದ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ, ನಟಿ ಸಾಯಿ ಪಲ್ಲವಿ ಮಾತನಾಡುತ್ತಾ ಧರ್ಮದ ಹೆಸರಿನಲ್ಲಿ ನಡೆಯುವ ಹಿಂಸಾಚಾರವನ್ನು ಖಂಡಿಸಿ ಹೇಳಿಕೆ ನೀಡಿದ್ದರು. ಆದರೆ ಅವರ ಹೇಳಿಕೆಗಳಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು, ಕೆಲವರು ಅವರ ಹೇಳಿಕೆಯನ್ನು ಮೆಚ್ಚಿಕೊಂಡರೆ, ಕೆಲವರು ಅದನ್ನು ಟೀಕಿಸಿದ್ದರು.


ಇದನ್ನೂ ಓದಿ: ಸಿನಿಮಾರಂಗದ ಕಹಿ ಸತ್ಯ ಬಿಚ್ಚಿಟ್ಟ ಸ್ಯಾಂಡಲ್‌ವುಡ್‌ ತಾರೆ ರಮ್ಯಾ!!


ಈಗ ಅವರ ಹೇಳಿಕೆ ವಿವಾದ ಸ್ಪರೂಪ ಪಡೆದುಕೊಂಡ ಬೆನ್ನಲ್ಲೇ ಇಂದು ವಿಡಿಯೋ ಮೂಲಕ ಹೇಳಿಕೆ ವಿಚಾರವಾಗಿ ನಟಿ ಸಾಯಿ ಪಲ್ಲವಿ ಸ್ಪಷ್ಟೀಕರಣ ನೀಡಿದ್ದಾರೆ. "ನಾನು ಇನ್ನು ಮುಂದೆ ಹೃದಯದಿಂದ ಮಾತನಾಡುವ ಮೊದಲು ಎರಡು ಬಾರಿ ಯೋಚಿಸುತ್ತೇನೆ, ಏಕೆಂದರೆ ನನ್ನ ಮಾತುಗಳನ್ನು ತಪ್ಪಾಗಿ ಅರ್ಥೈಸಿಕೊಳ್ಳಬಹುದು' ಎಂದು ಅವರು ಹೇಳಿದ್ದಾರೆ.



'ನಾನು ಕಾಶ್ಮೀರ ಫೈಲ್ಸ್ ವೀಕ್ಷಿಸಿದ ನಂತರ ನಾನು ವಿಚಲಿತಳಾಗಿದ್ದೆ. ನರಮೇಧದಂತಹ ದುರಂತವನ್ನು ಮತ್ತು ಅದರಿಂದ ಇನ್ನೂ ಬಾಧಿತವಾಗಿರುವ ಪೀಳಿಗೆಯನ್ನು ಎಂದಿಗೂ ಲಘುವಾಗಿ ಪರಿಗಣಿಸುವುದಿಲ್ಲ, ಅದರ ಜೊತೆಗೆ ಕೊವಿಡ್ ಸಂದರ್ಭದಲ್ಲಿ ನಡೆದ ಸಾಮೂಹಿಕ ಹತ್ಯೆಯನ್ನು ಕೂಡ ನಾನು ಎಂದಿಗೂ ಸಹಿಸುವುದಿಲ್ಲ, ಆ ವಿಡಿಯೋವನ್ನು ನೋಡಿದ ನಂತರ ಅದು ಹಲವಾರು ದಿನಗಳ ಕಾಲ ನನ್ನನ್ನು ವಿಚಲಿತಳನ್ನಾಗಿಸಿತ್ತು' ಎಂದು ಅವರು ಹೇಳಿದರು.


ಇದನ್ನೂ ಓದಿ: ಕ್ರಿಕೆಟ್ ಕಾಶಿ ಲಾರ್ಡ್ಸ್ ಗ್ರೌಂಡ್ ಇಟ್ಟಿಗೆ ಮೇಲೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹೆಸರು..!


"ಯಾವುದೇ ಧರ್ಮದ ಹೆಸರಿನಲ್ಲಿ ಹಿಂಸೆ ದೊಡ್ಡ ಪಾಪ ಎಂದು ನಾನು ತಿಳಿಸಲು ಬಯಸುತ್ತೇನೆ. ಆನ್‌ಲೈನ್‌ನಲ್ಲಿ ಅನೇಕ ಜನರು ಸಾಮೂಹಿಕ ಹತ್ಯೆ ಘಟನೆಗಳನ್ನು ಸಮರ್ಥಿಸಿಕೊಂಡಿದ್ದಾರೆ.ಎಲ್ಲಾ ಜೀವಗಳು ಮುಖ್ಯವೆಂದು ನಾನು ನಂಬುತ್ತೇನೆ.ಮಗು ಜನಿಸಿದಾಗ ಅದು ತನ್ನ ಅಸ್ಮಿತೆ ಬಗ್ಗೆ ಭಯಪಡುವ ದಿನ ಬರುವುದಿಲ್ಲ ಎಂದು ನಾನು ಭಾವಿಸುತ್ತೇನೆ" ಎಂದು ಅವರು ಹೇಳಿದರು.


ಸಾಯಿ ಪಲ್ಲವಿ ಅಭಿನಯದ ತೆಲುಗು ಚಿತ್ರ 'ವಿರಾಟ ಪರ್ವಂ' ಈ ವಾರ ಬಿಡುಗಡೆಯಾಗಿದ್ದು.ರಾಣಾ ದಗ್ಗುಬಾಟಿ ಸಹ ನಟಿಸಿರುವ ಚಲನಚಿತ್ರವು 1990 ರ ದಶಕದ ನೈಜ ಘಟನೆಗಳಿಂದ ಪ್ರೇರಿತವಾಗಿದೆ. ಇದು ತೆಲಂಗಾಣ ಪ್ರದೇಶದಲ್ಲಿ ನಕ್ಸಲೀಯ ಚಳವಳಿಯ ಹಿನ್ನೆಲೆಯ ಪ್ರೇಮಕಥೆಯ ಕುರಿತಾಗಿದೆ.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.