ಕರೀನಾ, ಸಾಯಿಪಲ್ಲವಿ, ಶೃತಿ ಹಾಸನ್... ಅಸಲಿಗೆ ಯಶ್ ಜೊತೆ ಟಾಕ್ಸಿಕ್ ಚಿತ್ರದಲ್ಲಿ ನಟಿಸೋದು ಯಾರು? ಚಿತ್ರತಂಡದಿಂದ ಸಿಕ್ತು ಸ್ಪಷ್ಟನೆ!
Toxic Movie Heroine: ರಾಕಿಂಗ್ ಸ್ಟಾರ್ ಯಶ್ ಅಭಿನಯದ `ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್` ಚಿತ್ರದ ಬಗ್ಗೆ ಬಹಳ ಸಮಯದಿಂದ ಕೆಲವು ವದಂತಿಗಳಿವೆ.
Yash Toxic Movie Cast: ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್' ಚಿತ್ರದ ಬಗ್ಗೆ ಬಹಳ ಸಮಯದಿಂದ ಕೆಲವು ವದಂತಿಗಳಿವೆ. ‘ಟಾಕ್ಸಿಕ್’ಗೆ ಸಂಬಂಧಿಸಿದಂತೆ ಪ್ರತಿದಿನ ಒಂದಷ್ಟು ಹೊಸ ಅಪ್‌ಡೇಟ್‌ಗಳು ಹೊರಬರುತ್ತಿವೆ. ಟಾಕ್ಸಿಕ್ ಚಿತ್ರದ ಹೀರೋಯಿನ್ ಯಾರು? ಎಂಬ ವಿಚಾರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ನಾನಾ ರೀತಿಯ ಸುದ್ದಿಗಳು ಹರಿದಾಡುತ್ತಿವೆ.
ಯಶ್ ಅವರ 'ಟಾಕ್ಸಿಕ್' ಚಿತ್ರದಲ್ಲಿ ಕರೀನಾ ಕಪೂರ್ ಖಾನ್, ಸಾಯಿ ಪಲ್ಲವಿ ಮತ್ತು ಶ್ರುತಿ ಹಾಸನ್ ಇರಲಿದ್ದಾರೆ ಎಂದು ಸಾಕಷ್ಟು ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ವದಂತಿಗಳ ನಡುವೆ ಚಿತ್ರದ ನಿರ್ಮಾಪಕರು ಶನಿವಾರ ಎಲ್ಲಾ ಊಹಾಪೋಹಗಳ ಬಗ್ಗೆ ಮೌನ ಮುರಿದಿದ್ದಾರೆ.
ಇದನ್ನೂ ಓದಿ: ಬಹುನಿರೀಕ್ಷಿತ ಶರಣ್ ಅಭಿನಯದ 'ಅವತಾರ ಪುರುಷ 2' ಚಿತ್ರ ಬಿಡುಗಡೆ ದಿನಾಂಕ ಮುಂದಕ್ಕೆ
ಟಾಕ್ಸಿಕ್ ಚಿತ್ರದ ಕಾಸ್ಟಿಂಗ್ ಬಗ್ಗೆ ಹಲವು ವದಂತಿಗಳು ಕೇಳಿಬರುತ್ತಿವೆ. ಈಗ ಈ ವದಂತಿಗಳ ಬಗ್ಗೆ ನಿರ್ಮಾಪಕರು ಮಾತನಾಡಿದ್ದಾರೆ. 'ಟಾಕ್ಸಿಕ್' ಚಿತ್ರದ ನಿರ್ಮಾಪಕರು ಮಾರ್ಚ್ 23 ರಂದು ಸಾಮಾಜಿಕ ಮಾಧ್ಯಮದಲ್ಲಿ ಅಧಿಕೃತ ಹೇಳಿಕೆಯನ್ನು ಹಂಚಿಕೊಂಡಿದ್ದಾರೆ.
ಟಾಕ್ಸಿಕ್ ಸಿನಿಮಾಗೆ ಸಂಬಂಧಿಸಿದ ಹಲವು ವದಂತಿಗಳು ಹರಡುತ್ತಿವೆ. ನಾವಿನ್ನು ತಾರಾಬಳಗದ ಬಗ್ಗೆ ಮಾಹಿತಿ ಹಂಚಿಕೊಂಡಿಲ್ಲ. ಈ ವದಂತಿಗಳ ಕಡೆಗೆ ಗಮನ ಕೊಡಬೇಡಿ ಎಂದು ನಾವು ನಿಮ್ಮನ್ನು ಕೇಳಿಕೊಳ್ಳುತ್ತೇವೆ ಎಂದು ನಿರ್ಮಾಪಕರು ತಿಳಿಸಿದ್ದಾರೆ. ಇಲ್ಲಿಯವರೆಗೆ 'ಟಾಕ್ಸಿಕ್' ನಿರ್ಮಾಪಕರು ನಾಯಕ ನಟಿಯ ಬಗ್ಗೆ ಯಾವುದೇ ಅಧಿಕೃತ ಅಪ್‌ಡೇಟ್ ಹಂಚಿಕೊಂಡಿಲ್ಲ.
ಇದನ್ನೂ ಓದಿ: ಈ ಸ್ಟಾರ್ ನಟಿಯ ಬಾಯ್‌ಫ್ರೆಂಡ್ "ಅನುಷ್ಕಾ ಶರ್ಮಾ ಸಹೋದರ", ಖ್ಯಾತ ನಿರ್ಮಾಪಕ.. ಕರ್ನಾಟಕದೊಂದಿಗೆ ಇದೆ ಆತ್ಮೀಯ ನಂಟು!!
ಯಶ್ ಅಭಿನಯದ 'ಟಾಕ್ಸಿಕ್' ಚಿತ್ರದ ವೀಡಿಯೊವನ್ನು ಬಿಡುಗಡೆ ಮಾಡಿದ ನಿರ್ಮಾಪಕರು, ಚಿತ್ರವು ಏಪ್ರಿಲ್ 10, 2025 ರಂದು ಬಿಡುಗಡೆಯಾಗಲಿದೆ ಎಂದು ಹೇಳಿದ್ದಾರೆ. ಈ ಚಿತ್ರವನ್ನು ಮಲಯಾಳಂ ಸಿನಿಮಾಗೆ ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕಿ ಗೀತು ಮೋಹನದಾಸ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಚಿತ್ರದ ತಾರಾಬಳಗದ ಬಗ್ಗೆ ಬಹಳ ದಿನಗಳಿಂದ ಸಾಕಷ್ಟು ಸುದ್ದಿಗಳು ಸೋಷಿಯಲ್ ಮೀಡಿಯಾದಲ್ಲಿ ಹಡಿದಾಡುತ್ತಿವೆ. ಯಶ್ ಮತ್ತು ಗೀತು ಮೋಹನದಾಸ್ ಕಾಂಬಿನೇಷನ್‌ನಲ್ಲಿ ಬರುತ್ತಿರುವ ಈ ಚಿತ್ರ ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.