Sai Pallavi in Ramayana : ಕಳೆದ ಹಲವು ದಿನಗಳಿಂದ ಆಲಿಯಾ ಭಟ್ ಅವರು ನಿತೇಶ್ ತಿವಾರಿ ಅವರ 'ರಾಮಾಯಣ' ಚಿತ್ರದಿಂದ ಹೊರಬಂದಿದ್ದಾರೆ ಎಂಬ ಸುದ್ದಿ ಅಂತರ್ಜಾಲದಲ್ಲಿ ಹರಿದಾಡುತ್ತಿದೆ. ಇದೀಗ ಆಲಿಯಾ ಬದಲಿಗೆ ಸಾಯಿ ಪಲ್ಲವಿ ಸೀತೆಯ ಪಾತ್ರ ಮಾಡಲಿದ್ದಾರೆ ಎಂಬ ಗಾಳಿ ಸುದ್ದಿಯ ಹರಿದಾಡುತ್ತಿದೆ. ಡೇಟ್ ಸಮಸ್ಯೆಯ ಕಾರಣದಿಂದ ಆಲಿಯಾ ಚಿತ್ರ ತೊರೆಯಲು ನಿರ್ಧರಿಸಿದ್ದಾರೆ. ಇದಾದ ನಂತರ 'ರಾಮಾಯಣ' ನಿರ್ಮಾಪಕರು ಸಾಯಿ ಪಲ್ಲವಿಯನ್ನು ಚಿತ್ರದಲ್ಲಿ ಸೀತೆಯ ಪಾತ್ರಕ್ಕೆ ಆಯ್ಕೆ ಮಾಡಿದ್ದಾರೆ. ಈ ಚಿತ್ರದಲ್ಲಿ ರಣಬೀರ್ ಕಪೂರ್ ಎದುರು ನಟಿ ಸಾಯಿ ಪಲ್ಲವಿ ನಟಿಸಲಿದ್ದಾರೆ ಎಂದು ವರದಿ ಮಾಡಲಾಗಿದೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: ರಾಷ್ಟ್ರ ಪ್ರಶಸ್ತಿ ವಿಜೇತ ಈ ಸಿನಿಮಾಗಳನ್ನು ನೋಡಬೇಕೇ? ಯಾವ OTT ಪ್ಲಾಟ್‌ಫಾರ್ಮ್ ಗಳಲ್ಲಿ ಲಭ್ಯವಿದೆ ತಿಳಿಯಿರಿ


ಈ ಬಗ್ಗೆ ಇನ್ನೂ ಅಧಿಕೃತ ದೃಢೀಕರಣ ಅಥವಾ ಪ್ರಕಟಣೆ ಇಲ್ಲ. ದಿನಾಂಕ ಸಂಬಂಧಿತ ಸಮಸ್ಯೆಗಳಿಂದ ಆಲಿಯಾ ಭಟ್ ಚಿತ್ರದಿಂದ ಹೊರಗುಳಿದಿದ್ದಾರೆ ಎಂದು ವರದಿಯಾಗಿದೆ. ರಣಬೀರ್ ಕಪೂರ್ ಇನ್ನೂ ಚಿತ್ರದ ಭಾಗವಾಗಿದ್ದಾರೆ. ಇವರಲ್ಲದೆ 'ಕೆಜಿಎಫ್' ಸ್ಟಾರ್ ಯಶ್ ಕೂಡ ರಾವಣನಿಗೆ ಹಲವು ಲುಕ್ ಟೆಸ್ಟ್ ಗಳನ್ನು ನೀಡುತ್ತಿದ್ದಾರೆ. ಆದರೆ, ನಟ ಇನ್ನೂ ಅಧಿಕೃತವಾಗಿ ಚಿತ್ರಕ್ಕೆ ಸಹಿ ಹಾಕಿಲ್ಲ.


'ಆದಿಪುರುಷ' ಚಿತ್ರದ ನಂತರ ನಿರ್ಮಾಪಕರು ಜಾಗರೂಕರಾಗಿದ್ದಾರೆ. ರಾಮಾಯಣ ಚಲನಚಿತ್ರದ ಶೂಟಿಂಗ್‌ ಈ ವರ್ಷದ ಡಿಸೆಂಬರ್‌ನಲ್ಲಿ ಪ್ರಾರಂಭವಾಗಲಿದೆ ಎಂದು ವರದಿಯಾಗಿದೆ. ಆದಾಗ್ಯೂ, ಸಮಯ ಬದಲಾಗುತ್ತಿದೆ ಎಂದು ತೋರುತ್ತದೆ. ಮೂರು ಭಾಗಗಳ ಈ ಚಿತ್ರ ಇನ್ನೂ ಪ್ರಿ-ಪ್ರೊಡಕ್ಷನ್ ಹಂತದಲ್ಲಿದ್ದು, ಡಿಸೆಂಬರ್ ವೇಳೆಗೆ ಪೂರ್ಣಗೊಳ್ಳುವುದಿಲ್ಲ ಎಂದು ವರದಿ ಹೇಳಿದೆ. ನಿತೇಶ್ ತಿವಾರಿ ಮತ್ತು ರವಿ ಉದಯವಾರ್ ನಿರ್ದೇಶಿಸಲಿರುವ 'ರಾಮಾಯಣ' ಚಿತ್ರೀಕರಣವು 2024 ರ ಮಧ್ಯಭಾಗದಲ್ಲಿ ಪ್ರಾರಂಭವಾಗುವ ನಿರೀಕ್ಷೆಯಿದೆ. 


ಇದನ್ನೂ ಓದಿ: ಜೈಲರ್ ಒಟ್ಟು ಕಲೆಕ್ಷನ್ ಎಷ್ಟು ಕೋಟಿ ಗೊತ್ತೇ? ಮತ್ತೊಂದು ದಾಖಲೆ ಬರೆದ ರಜನಿ ಸಿನಿಮಾ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.