ನವದೆಹಲಿ: ಹಿರಿಯ ಬಾಲಿವುಡ್ ನಟಿ, ಇಸ್ಕೆಮಿಯಾ ಎಂಬ ಹೃದಯ ಸಮಸ್ಯೆಯಿಂದ ಬಳಲುತ್ತಿದ್ದ ಸೈರಾ ಬಾನು ಅವರನ್ನು ಚಿಕಿತ್ಸೆಗಾಗಿ ಹಿಂದುಜಾ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಈಗ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಅವರ ವೈದ್ಯರು ಬುಧವಾರ ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ದಿಲೀಪ್ ಕುಮಾರ್ ಅವರ ಪತ್ನಿಯಾಗಿರುವ ಸೈರಾ ಬಾನು (Saira Banu),ಮೂರು ದಿನಗಳ ಹಿಂದೆ ಖಾರ್ ನಲ್ಲಿರುವ ಆಸ್ಪತ್ರೆಯ ಐಸಿಯುಗೆ ದಾಖಲಿಸಲಾಗಿತ್ತು.ಅವರನ್ನು ವಿಚಾರಣೆ ಮಾಡುತ್ತಿದ್ದ ಖ್ಯಾತ ಹೃದ್ರೋಗ ತಜ್ಞ ಡಾ.ನಿತಿನ್ ಎಸ್. ಗೋಖಲೆಯವರ, ಆಕೆಯ ಹೃದಯದಲ್ಲಿನ ಎಡ ಕುಹರವು ಸ್ಥಗಿತಗೊಂಡಿತ್ತು, ಇದು ಅವರ ಹೃದಯ ಮತ್ತು ಶ್ವಾಸಕೋಶದಲ್ಲಿ ನೀರು ಸೇರಿಕೊಳ್ಳಲು ಕಾರಣವಾಯಿತು ಎಂದು ತಿಳಿಸಿದ್ದಾರೆ.


ಇದನ್ನೂ ಓದಿ : Dilip Kumar Health Update : ಮತ್ತೆ ಬಿಗಡಾಯಿಸಿತು ದಿಲೀಪ್ ಕುಮಾರ್ ಆರೋಗ್ಯ ; ದಿಗ್ಗಜ ನಟನಿಗೆ ಆಗಿದ್ದೇನು ?


ಸಮಸ್ಯೆಯನ್ನು ಈಗ ನಿಯಂತ್ರಿಸಲಾಗಿದೆ ಮತ್ತು ಅವರು ಈಗ ಚೇತರಿಸಿಕೊಂಡಿದ್ದಾರೆ.ನಾಳೆ ಅವರನ್ನು ಐಸಿಯುನಿಂದ ಹೊರಗೆ ಸ್ಥಳಾಂತರಿಸುತ್ತೇವೆ ಮತ್ತು ನಂತರ ಮುಂದಿನ ಕ್ರಮಗಳನ್ನು ತಿಳಿಸುತ್ತೇವೆ" ಎಂದು ಗೋಖಲೆ ಐಎಎನ್‌ಎಸ್‌ಗೆ ತಿಳಿಸಿದರು.1961ರಲ್ಲಿ ಜಂಗ್ಲೀ ಚಿತ್ರದ ಮೂಲಕ ಹದಿಹರೆಯದಲ್ಲಿ ತನ್ನ ನಟನಾ ವೃತ್ತಿಜೀವನವನ್ನು ಆರಂಭಿಸಿದ ಸಾಯಿರಾ,1960-70ರ ದಶಕದ ಅಗ್ರಗಣ್ಯ ನಾಯಕಿಯರಲ್ಲಿ ಒಬ್ಬರಾಗಿದ್ದರು, ಅಂದಿನ ಪ್ರಮುಖ ನಟರೊಂದಿಗೆ ಕೆಲಸ ಮಾಡಿದರು. 


ಇದನ್ನೂ ಓದಿ : Dilip Kumar Health Update : ಮತ್ತೆ ಬಿಗಡಾಯಿಸಿತು ದಿಲೀಪ್ ಕುಮಾರ್ ಆರೋಗ್ಯ ; ದಿಗ್ಗಜ ನಟನಿಗೆ ಆಗಿದ್ದೇನು ?


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ