ಬೆಂಗಳೂರು : ಝೈದ್ ಖಾನ್ ನಾಯಕನಾಗಿ ನಟಿಸಿರುವ ಪ್ಯಾನ್‌ ಇಂಡಿಯಾ ಚಿತ್ರ ಬನಾರಸ್ ಬಿಡುಗಡೆಗೂ ಮುನ್ನವೇ ವ್ಯಾಪಕವಾಗಿ ಸುದ್ದಿ ಮಾಡುತ್ತಿದೆ. ಸಧ್ಯ ನಾನಾ ಭಾಷೆಗಳಲ್ಲಿ ಈಗಾಗಲೇ ಸೂಪರ್ ಹಿಟ್ ಸಿನಿಮಾಗಳನ್ನು ವಿತರಿಸಿ ಸೈ ಅನ್ನಿಸಿಕೊಂಡಿರುವ ಸಂಸ್ಥೆಗಳೇ ಬನಾರಸ್ ಸಾರಥ್ಯ ವಹಿಸಿಕೊಂಡಿವೆ. ಇದೀಗ ಅಖಂಡ ತಮಿಳುನಾಡಿನಲ್ಲಿ ಬನಾರಸ್ ಅನ್ನು ತೆರೆಗಾಣಿಸುವ ಜವಾಬ್ದಾರಿಯನ್ನು ಪ್ರತಿಷ್ಠಿತ ವಿತರಣಾ ಸಂಸ್ಥೆ ಶಕ್ತಿ ಫಿಲಂ ಫ್ಯಾಕ್ಟರಿ ವಹಿಸಿಕೊಂಡಿದೆ. 


COMMERCIAL BREAK
SCROLL TO CONTINUE READING

ಈಗಾಗಲೇ ಕರ್ನಾಟಕ, ಕೇರಳ ಮತ್ತು ಉತ್ತರ ಭಾರತದ ಬನಾರಸ್ ವಿತರಣಾ ಹಕ್ಕುಗಳು ಖ್ಯಾತ ಸಂಸ್ಥೆಗಳ ಪಾಲಾಗಿವೆ. ಈ ಮೂಲಕವೇ ಆ ರಾಜ್ಯಗಳಲ್ಲಿ ಬನಾರಸ್ ಸುದ್ದಿ ಕೇಂದ್ರದಲ್ಲಿರುವಾಗಲೇ, ತಮಿಳುನಾಡಿನ ದಿಕ್ಕಿನಿಂದ ಈ ಶುಭ ಸಮಾಚಾರ ಜಾಹೀರಾಗಿದೆ. ಹೀಗೆ ಶಕ್ತಿ ಫಿಲಂ ಫ್ಯಾಕ್ಟರಿ ಬನಾರಸ್ ವಿತರಣಾ ಹಕ್ಕುಗಳನ್ನು ಖರೀದಿಸಿದ ಸುದ್ದಿ ಹೊರಬೀಳುತ್ತಲೇ, ಅಲ್ಲಿನ ಚಿತ್ರಪ್ರೇಮಿಗಳ ಚಿತ್ತ ತಾನೇತಾನಾಗಿ ಬನಾರಸ್‌ ನತ್ತ ವಾಲಿಕೊಂಡಿದೆ.


ಇದನ್ನೂ ಓದಿ: ರಿಷಬ್ ಶೆಟ್ಟಿಗೆ ಎನ್‌ಟಿಆರ್ ರಿಲೇಶನ್ : ಸಂಬಂಧದಲ್ಲಿ ಇಬ್ಬರು ಏನಾಗ್ಬೇಕು ಗೊತ್ತೇ..!


ಇನ್ನು ಅತ್ಯಂತ ಅಚ್ಚುಕಟ್ಟಾಗಿ ಸಿನಿಮಾಗಳನ್ನು ಪ್ರೇಕ್ಷಕರಿಗೆ ತಲುಪಿಸುವಲ್ಲಿ ಹೆಸರುವಾಸಿಯಾಗಿದೆ ಶಕ್ತಿ ಫಿಲಂ ಫ್ಯಾಕ್ಟರಿ. ಈ ಸಂಸ್ಥೆಯ ಕಡೆಯಿಂದ ತೆರೆಕಂಡ ಅದೆಷ್ಟೋ ಚಿತ್ರಗಳು ಸೂಪರ್ ಹಿಟ್ಟಾಗಿವೆ. ಈ ಕಾರಣದಿಂದಲೇ ಬನಾರಸ್ ಬಗೆಗಿನ ನಿರೀಕ್ಷೆ ತಮಿಳುನಾಡಿನಾದ್ಯಂತ ತಾರಕಕ್ಕೇರಿದೆ. ಜಯತೀರ್ಥ ನಿರ್ದೇಶನದಲ್ಲಿ ಮೂಡಿ ಬಂದಿರುವ ಬನಾರಸ್ ಈಗಾಗಲೇ ಹಾಡುಗಳು ಮತ್ತು ಟ್ರೈಲರ್ ಮೂಲಕ ತನ್ನದೇ ಆದ ಸ್ಥಾನ ಗಿಟ್ಟಿಸಿಕೊಂಡಿದೆ. ಇವೆಲ್ಲವುಗಳ ಮೂಲಕವೇ ಬಹುನಿರೀಕ್ಷಿತ ಚಿತ್ರವೆಂಬ ಹೆಗ್ಗಳಿಕೆಯನ್ನೂ ತನ್ನದಾಗಿಸಿಕೊಂಡಿದೆ.


ಜಯತೀರ್ಥ ಮಧುರವಾದ ಪ್ರೇಮಕಥಾನಕಗಳಿಗೆ, ಅಚ್ಚರಿದಾಯಕ ನಿರೂಪಣಾ ಶೈಲಿಗೆ ಹೆಸರಾಗಿರುವ ನಿರ್ದೇಶಕ. ಬನಾರಸ್ ಮೂಲಕ ಅವರು ಮತ್ತೊಂದು ಆಯಾಮದ ಕಥೆ ಹೇಳಹೊರಟಿರೋದು ಈಗಾಗಲೇ ಪಕ್ಕಾ ಆಗಿದೆ. ಇಷ್ಟೊಂದು ವಿಶೇಷತೆಗಳಿರೋದರಿಂದಲೇ ಪ್ರತಿಷ್ಠಿತ ಸಂಸ್ಥೆಗಳು ಪ್ರಶಂಶೆಯೊಂದಿಗೆ ಬನಾರಸ್ ವಿತರಣಾ ಹಕ್ಕುಗಳನ್ನು ಪಡೆದುಕೊಂಡಿವೆ. ಇಂಥಾ ಸಕಾರಾತ್ಮಕ ವಾತಾವರಣದಲ್ಲಿ ದಾಪುಗಾಲಿಡುತ್ತಿರುವ ಬನಾರಸ್, ಇದೇ ನವೆಂಬರ್ ನಾಲಕ್ಕನೇ ತಾರೀಕಿನಂದು ದೇಶಾದ್ಯಂತ ತೆರೆಗಂಡು ಮ್ಯಾಜಿಕ್ ಮಾಡಲಿದೆ.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.