Salaar Collection Day 2 : ಪ್ರಭಾಸ್ ಅವರ ಸ್ಟಾರ್‌ಡಮ್ ಮತ್ತು ಕೆಜಿಎಫ್ ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ಅವರ ಹೈ ಆಕ್ಟೇನ್ ಆಕ್ಷನ್ ಸಂಚಲನವನ್ನು ಸೃಷ್ಟಿಸಿದೆ. ಬಾಕ್ಸ್ ಆಫೀಸ್‌ನಲ್ಲಿ ಬಿರುಗಾಳಿಯಂತೆ 'ಸಲಾರ್' ಆಗಮಿಸಿದ್ದು, ಅವರ ವೇಗಕ್ಕೆ ದಾಖಲೆಗಳೆಲ್ಲವೂ ಧೂಳಿಪಟವಾಗಿವೆ. ಸಲಾರ್‌ ಶುಕ್ರವಾರ ಮೊದಲ ದಿನ ದೇಶದಲ್ಲಿ 90.70 ಕೋಟಿ ರೂಪಾಯಿಗಳ ಬಂಪರ್ ಓಪನಿಂಗ್ ಪಡೆದರೆ, ಎರಡನೇ ದಿನವೂ ಅದರ ಪ್ರದರ್ಶನ ಮುಂದುವರೆಯಿತು. 2023 ರ ಎಲ್ಲಾ ಆರಂಭಿಕ ದಾಖಲೆಗಳನ್ನು ಸಲಾರ್‌ ಬ್ರೇಕ್‌ ಮಾಡಿದೆ. ಎರಡೇ ದಿನಗಳಲ್ಲಿ ಚಿತ್ರ ದೇಶದಲ್ಲಿ 150 ಕೋಟಿ ಕ್ಲಬ್ ಸೇರಿದೆ. ವಿಶ್ವದಾದ್ಯಂತ 200 ಕೋಟಿ ಕ್ಲಬ್ ಸೇರಿದೆ. 


COMMERCIAL BREAK
SCROLL TO CONTINUE READING

ಮೂಲತಃ ತೆಲುಗಿನಲ್ಲಿ ತಯಾರಾದ 'ಸಲಾರ್' ಈಗ ದೇಶಾದ್ಯಂತ ಐದು ಭಾಷೆಗಳಲ್ಲಿ 6000 ಕ್ಕೂ ಹೆಚ್ಚು ಪರದೆಗಳಲ್ಲಿ ಪ್ರದರ್ಶನಗೊಳ್ಳುತ್ತಿದೆ. ಶನಿವಾರ ಥಿಯೇಟರ್‌ಗಳಲ್ಲಿ 'ಸಲಾರ್' ಸರಾಸರಿ ಪ್ರೇಕ್ಷಕರ ಆಕ್ಯುಪೆನ್ಸಿ 75.64% ಆಗಿತ್ತು. ಶನಿವಾರವೂ ಬಹುತೇಕ ಶೋಗಳು ಹೌಸ್ ಫುಲ್ ಆಗಿವೆ. ವಿಶೇಷವಾಗಿ ಸಂಜೆ ಮತ್ತು ರಾತ್ರಿ ಶೋಗಳಲ್ಲಿ ಜನಸಂದಣಿ ಹೆಚ್ಚಾಗಿತ್ತು. 


ಇದನ್ನೂ ಓದಿ: Salar: ಭರ್ಜರಿ ವರ್ಲ್ಡ್ ವೈಡ್ ಕಲೆಕ್ಷನ್.. ಬಾಲಿವುಡ್ ಗೆ ಮತ್ತೆ ಟೆನ್ಶನ್! 


ವರದಿ ಪ್ರಕಾರ, ಎರಡನೇ ದಿನವಾದ ಶನಿವಾರ 'ಸಲಾರ್' ದೇಶದಲ್ಲಿ 59.32 ಕೋಟಿ ರೂ. ನಿವ್ವಳ ಕಲೆಕ್ಷನ್ ಮಾಡಿದೆ. ಇನ್ನೂ ಎರಡೇ ದಿನಗಳಲ್ಲಿ 'ಸಲಾರ್' ದೇಶದಲ್ಲಿ ಒಟ್ಟು 150.02 ಕೋಟಿ ನೆಟ್ ಕಲೆಕ್ಷನ್ ಮಾಡಿದೆ. ಭಾನುವಾರದಂದು ಈ ಅಂಕಿಅಂಶಗಳು ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. 


ಪ್ರಭಾಸ್ ಅಭಿನಯದ 'ಸಲಾರ್' ಕೂಡ ವಿಶ್ವಾದ್ಯಂತ ಕಲೆಕ್ಷನ್ ನಲ್ಲಿ ಭಾರೀ ಸಂಚಲನ ಮೂಡಿಸಿದೆ. ವಿಶ್ವಾದ್ಯಂತ ಮೊದಲ ದಿನವೇ 178.70 ಕೋಟಿ ಕಲೆಕ್ಷನ್ ಮಾಡಿದ್ದ ಈ ಚಿತ್ರ ಎರಡೇ ದಿನದಲ್ಲಿ 200 ಕೋಟಿ ಕ್ಲಬ್ ಸೇರಿದೆ. ಸಲಾರ್ ಚಿತ್ರದ ವಿಶ್ವಾದ್ಯಂತ ಕಲೆಕ್ಷನ್ ಈಗ ಎರಡು ದಿನಗಳಲ್ಲಿ 275 ಕೋಟಿ ರೂ.


'ಸಲಾರ್' ಗಳಿಕೆಯ ವೇಗವು 'ಜವಾನ್' ಮತ್ತು 'ಅನಿಮಲ್‌'ಗಿಂತ ವೇಗವಾಗಿದೆ. 2017 ರಲ್ಲಿ 'ಬಾಹುಬಲಿ 2' ನಂತರ ಪ್ರಭಾಸ್ ಅವರ ಮೂರು ಚಿತ್ರಗಳು 'ಸಾಹೋ', 'ರಾಧೆ ಶ್ಯಾಮ್' ಮತ್ತು 'ಆದಿಪುರುಷ' ಸತತವಾಗಿ ವಿಫಲವಾದವು. ಇದೀಗ ಸಲಾರ್‌ ಮೂಲಕ ಸೂಪರ್‌ ಕಮ್‌ ಬ್ಯಾಕ್‌ ಮಾಡಿದ್ದಾರೆ. 


ಇದನ್ನೂ ಓದಿ: Salar: ಚಿತ್ರರಂಗಕ್ಕೆ ಮತ್ತೊಬ್ಬ ಶಿವಗಾಮಿ ಎಂಟ್ರಿ.. ರಮ್ಯಾ ಕೃಷ್ಣನ್‌ ಅವರನ್ನೇ ಮೀರಿಸ್ತಾರಾ ಶ್ರೀಯಾ ರೆಡ್ಡಿ! 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.