Prabhas Salaar Movie Latest Updates: ಸಲಾರ್ ಚಿತ್ರವು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿರುವ ಸಿನಿಮಾ. ಪ್ರಭಾಸ್ - ಪ್ರಶಾಂತ್ ನೀಲ್ ಜೋಡಿಯ ಈ ಸಿನಿಮಾ ಇದೇ ತಿಂಗಳ 28ಕ್ಕೆ ಪ್ರೇಕ್ಷಕರ ಮುಂದೆ ಬರಬೇಕಿತ್ತು, ಆದರೆ ಚಿತ್ರತಂಡ ಅದನ್ನು ಮುಂದೂಡಿದೆ. ಚಿತ್ರದ ಬಿಡುಗಡೆಗೆ ಕಾರಣಗಳನ್ನು ಬಹಿರಂಗಪಡಿಸಿದ್ದು, ಶೀಘ್ರದಲ್ಲೇ ಬಿಡುಗಡೆ ದಿನಾಂಕವನ್ನು ಪ್ರಕಟಿಸಲಾಗುವುದು ಎಂದು ಹೇಳಿದೆ. ನವೆಂಬರ್ ಅಥವಾ ಡಿಸೆಂಬರ್ ನಲ್ಲಿ ಥಿಯೇಟರ್ ಗಳಲ್ಲಿ ಸಲಾರ್ ಸದ್ದು ಮಾಡಲಿದೆ ಎಂಬ ಮಾತು ಸಿನಿ ವಲಯದಲ್ಲಿ ಕೇಳಿ ಬರುತ್ತಿದೆ. ಸಲಾರ್ ಚಿತ್ರ ರಿಲೀಸ್‌ ಮುಂದೂಡಿಕೆಯಾಗಿದ್ದರಿಂದ ಪ್ರಭಾಸ್ ಅಭಿಮಾನಿಗಳಿಗೆ ನಿರಾಸೆಯಾಗಿದೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಪಟಾಕಿ ಪೋರಿಯ ʼಚುಟುಚುಟುʼ ಎನಿಸುವ ಫೋಟೊಸ್‌ ಇಲ್ಲಿದೆ ನೋಡಿ 


ಟೀಸರ್ ಬಿಡುಗಡೆಯಾದಾಗಿನಿಂದ ಸಲಾರ್ ಮೇಲೆ ಭಾರೀ ನಿರೀಕ್ಷೆ ಹುಟ್ಟಿಕೊಂಡಿದೆ. ಈ ಸಿನಿಮಾದ ನಾನ್ ಥಿಯೇಟ್ರಿಕಲ್ ರೈಟ್ಸ್ ದಾಖಲೆ ಬೆಲೆಗೆ ಮಾರಾಟವಾಗಿದೆ ಎಂದು ವರದಿಯಾಗಿದೆ. ಈಗಾಗಲೇ ರೂ.350 ಕೋಟಿ ವ್ಯವಹಾರ ನಡೆದಿರುವುದು ಗೊತ್ತಾಗಿದೆ. ಸ್ಯಾಟಲೈಟ್ ಹಕ್ಕುಗಳನ್ನು ಸ್ಟಾರ್ ನೆಟ್‌ವರ್ಕ್ ಮತ್ತು OTT ಹಕ್ಕುಗಳನ್ನು ನೆಟ್‌ಫ್ಲಿಕ್ಸ್ ಪಡೆದಿವೆ. 


ಹೊಂಬಾಳೆ ಫಿಲಂಸ್ ನಿರ್ಮಾಣದ ಸಲಾರ್ ಚಿತ್ರದಲ್ಲಿ ಪೃಥ್ವಿರಾಜ್ ಸುಕುಮಾರನ್, ಶ್ರುತಿ ಹಾಸನ್ ಮತ್ತು ಜಗಪತಿ ಬಾಬು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ರವಿ ಬಸ್ರೂರ್ ಸಂಗೀತ ನೀಡುತ್ತಿದ್ದಾರೆ. ಸಲಾರ್ ಚಿತ್ರ ಎರಡು ಭಾಗಗಳಲ್ಲಿ ತಯಾರಾಗುತ್ತಿರುವುದು ಗೊತ್ತೇ ಇದೆ. ಈ ವರ್ಷ ಬರುತ್ತಿರುವ ದೊಡ್ಡ ಚಿತ್ರಗಳಲ್ಲಿ ಸಲಾರ್ ಕೂಡ ಒಂದು. 1980 ಬ್ಯಾಕ್ ಡ್ರಾಪ್ ಸಿನಿಮಾದ ಕಥೆ ಸಾಗುತ್ತಿದೆಯಂತೆ. ಸುಣ್ಣದ ಕಲ್ಲು ಮಾಫಿಯಾ ಹಿನ್ನಲೆಯಲ್ಲಿ ಅದ್ಧೂರಿ ಸಾಹಸ ದೃಶ್ಯಗಳು ಇರಲಿದೆ ಎನ್ನಲಾಗಿದೆ. ಪ್ರಭಾಸ್ ಪಾತ್ರವನ್ನು ಒಂದು ರೇಂಜ್ ನಲ್ಲಿ ತೋರಿಸಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.


ಇದನ್ನೂ ಓದಿ: ಚಕ್ ದೇ ಇಂಡಿಯಾ ಖ್ಯಾತಿಯ ಬಾಲಿವುಡ್ ನಟ ರಿಯೊ ಕಪಾಡಿಯಾ ಇನ್ನಿಲ್ಲ   


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.