Salar: ಇತ್ತೀಚೆಗಷ್ಟೇ ಫ್ಲಾಪ್‌ಗಳನ್ನು ನೀಡಿರುವ ನಟ ಪ್ರಭಾಸ್, ನಿರ್ದೇಶಕ ಪ್ರಶಾಂತ್ ನೀಲ್ ಅವರ 'ಸಲಾರ್' ಚಿತ್ರದಲ್ಲಿ ನಟಿಸಿದ್ದಾರೆ. ಹೊಂಬಾಳೆ ಫಿಲಂಸ್ ನಿರ್ಮಾಣದ ಈ ಚಿತ್ರ ಅದ್ಧೂರಿ ವೆಚ್ಚದಲ್ಲಿ ತಯಾರಾಗಿದ್ದು.. ನಾಯಕನಂತೆಯೇ ಮಲಯಾಳಂ ನಟ ಪೃಥ್ವಿರಾಜ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ...


COMMERCIAL BREAK
SCROLL TO CONTINUE READING

ಡಿಸೆಂಬರ್ 22 ರಂದು ತಮಿಳು, ತೆಲುಗು, ಹಿಂದಿ, ಮಲಯಾಳಂ, ಕನ್ನಡ ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಚಿತ್ರವಾಗಿ ಬಿಡುಗಡೆಯಾದ ಈ ಸಲಾರ್‌ ಸಿನಿಮಾ ಮೂರೇ ದಿನಗಳಲ್ಲಿ ಚಿತ್ರ 300 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ... 400ರ ಸಮೀಪಕ್ಕೆ ಬರುತ್ತಿದೆ ಎನ್ನಲಾಗುತ್ತಿದೆ..


ಇದನ್ನೂ ಓದಿ-ಹೊಸ ವ್ಯವಹಾರದಲ್ಲಿ ರಾಮ್ ಚರಣ್...ಇಂಡಿಯನ್ ಸ್ಟ್ರೀಟ್ ಪ್ರೀಮಿಯರ್ ಲೀಗ್ ಗೆ ಗ್ಲೋಬಲ್ ಸ್ಟಾರ್ ಎಂಟ್ರಿ!


ಅಲ್ಲದೇ ಚಿತ್ರಕ್ಕೆ ಪಾಸಿಟಿವ್ ರಿವ್ಯೂ ಸಿಗುತ್ತಿದ್ದು.. ಇಂದು ಕ್ರಿಸ್ ಮಸ್ ರಜೆ ಇರುವುದರಿಂದ 5 ದಿನಗಳೊಳಗೆ ಚಿತ್ರ 500 ಕೋಟಿ ತಲುಪಲಿದೆ ಎಂದು ವರದಿಮಾಡಲಾಗುತ್ತಿದೆ.. 


ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಈ ಚಿತ್ರವನ್ನು ಆಕ್ಷನ್ ಪವರ್ ಪ್ಯಾಕ್ಡ್ ಚಿತ್ರವಾಗಿ ನಿರ್ದೇಶಿಸಿದ್ದು..  ಪ್ರಭಾಸ್ ಮತ್ತು ಪೃಥ್ವಿರಾಜ್ ಅಭಿನಯವು ಅಭಿಮಾನಿಗಳ ಹೃದಯವನ್ನು ಕದ್ದಿದೆ. ಈ ಚಿತ್ರದಲ್ಲಿ ಪ್ರಭಾಸ್ ಜೊತೆ ನಟಿ ಶ್ರುತಿ ಹಾಸನ್ ನಟಿಸಿದ್ದಾರೆ. ಜಗಪತಿ ಬಾಬು, ಮೈಮ್ ಗೋಪಿ, ಶ್ರೇಯಾ ರೆಡ್ಡಿ, ಬಾಬಿ ಸಿಂಹ, ಜಾನ್ ವಿಜಯ್ ಸೇರಿದಂತೆ ಹಲವರು ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಸದ್ಯದಲ್ಲೇ ಈ ಚಿತ್ರದ ಎರಡನೇ ಭಾಗದ ಚಿತ್ರೀಕರಣ ಹಾಗೂ ಬಿಡುಗಡೆ ದಿನಾಂಕದ ಮಾಹಿತಿ ಹೊರಬೀಳಲಿದೆ ಎಂದು ವರದಿಯಾಗಿದೆ.


ಇದನ್ನೂ ಓದಿ-ಸಲಾರ್‌ ಸುಂದರಿ ಶ್ರೀಯಾ ರೆಡ್ಡಿ ತಂದೆ ಯಾರು ಗೊತ್ತಾ? ಆ ಭಾರತೀಯ ಕ್ರಿಕೆಟಿಗನ ಮಗಳು ಈ ಶಿವಗಾಮಿ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.