Salman Khan : ಸಲ್ಮಾನ್ ಖಾನ್ ಬಾಲಿವುಡ್‌ನ ಮಸ್ಕುಲರ್ ಹೀರೋ ಎಂದೇ ಖ್ಯಾತಿ ಪಡೆದಿದ್ದಾರೆ. ಬಾಲಿವುಡ್‌ನ ಖಾನ್‌ಗಳಲ್ಲಿ ಒಬ್ಬರಾದ ಸಲ್ಮಾನ್‌, ಹಿಂದಿ ಚಿತ್ರರಂಗದ ಲೀಡಿಂಗ್‌ ನಟರಲ್ಲಿ ಒಬ್ಬರು. ಆದರೆ ಇತ್ತೀಚೆಗೆ ಅವರ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಅಷ್ಟಾಗಿ ಸದ್ದು ಮಾಡುತ್ತಿಲ್ಲ. ಬೆನ್ನು ಬೆನ್ನಿಗೆ ನಿರಾಸೆ. ಸಲ್ಮಾನ್ ಖಾನ್ ಸತತ ಸೋಲುಗಳನ್ನು ಎದುರಿಸುತ್ತಿದ್ದಾರೆ. 


COMMERCIAL BREAK
SCROLL TO CONTINUE READING

ಆದರೆ ಇತ್ತೀಚೆಗೆ ಅವರು ದಕ್ಷಿಣದತ್ತ ಗಮನ ಹರಿಸಿದ್ದಾರೆ. ಚಿರಂಜೀವಿ ಅಭಿನಯದ ʼಗಾಡ್ ಫಾದರ್ʼ ಚಿತ್ರದಲ್ಲಿ ಅವರು ಅತಿಥಿ ಪಾತ್ರದಲ್ಲಿ ಮಿಂಚಿದ್ದರು. ಅದಕ್ಕೂ ಮುನ್ನ ಅವರು 'ದಬಾಂಗ್ 3' ಚಿತ್ರದ ಪ್ರಚಾರಕ್ಕಾಗಿ ಹೈದರಾಬಾದ್‌ಗೆ ಬಂದಿದ್ದರು. ಅಲ್ಲದೆ, ತೆಲುಗು ಹೀರೋಗಳಾದ ವೆಂಕಟೇಶ್ ಮತ್ತು ರಾಮ್ ಚರಣ್ ಸಲ್ಲು ಬಾಯ್‌ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಚಿತ್ರದಲ್ಲಿ ನಟಿಸಿದ್ದರು. 


ಇದನ್ನೂ ಓದಿ:ಟ್ರೇಲರ್ ಮೂಲಕವೇ ಕುತೂಹಲ ಮೂಡಿಸಿದ ʻಜಿಗರ್ʼ


ಈ ಹಿನ್ನೆಲೆಯಲ್ಲಿ ಅವರು ಸ್ವಾರಸ್ಯಕರ ಕಾಮೆಂಟ್ ಮಾಡಿದ್ದಾರೆ. ಎಲ್ಲಾ ಹೀರೋಗಳು ಹಾಲಿವುಡ್‌ಗೆ ಹೋಗಲು ಬಯಸುತ್ತಾರೆ, ಆದರೆ ನಾನು ದಕ್ಷಿಣ ಕಡೆಗೆ ಹೋಗಲು ಬಯಸುತ್ತೇನೆ ಅಂತ ಹೇಳಿಕೊಂಡಿದ್ದಾರೆ.. ಇದರಿಂದ ಭಾಯ್‌ ಸೌತ್‌ ಸಿನಿ ಪ್ರೇಕ್ಷಕರು, ಅಲ್ಲಿನ ಸಂಪ್ರದಾಯ ಮತ್ತು ಜನ ಇಷ್ಟವಾಗ್ತಾರೆ ಅಂತ ಗೊತ್ತಾಗುತ್ತದೆ ಅಂತ ನೆಟ್ಟಿಗರು ಕಾಮೆಂಟ್‌ ಮಾಡುತ್ತಿದ್ದಾರೆ.


ಅಲ್ಲದೆ, ಹಿಂದಿ ಸಿನಿಮಾಗಳ ಕಥಾ ಶೈಲಿಯಿಂದ ಬೇಸತ್ತಿರುವ ಅವರು ಸೌತ್‌ ಬಾಷೆಯ ಸಿನಿಮಾಗಳಲ್ಲಿ ನಟಿಸಲು ಒಲವು ತೋರುತ್ತಿದ್ದಾರೆ ಅಂತ ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ. ಅಲ್ಲದೆ, ಅತೀ ಶೀಘ್ರದಲ್ಲೇ ತೆಲುಗು ಸಿನಿಮಾ ಮಾಡಲಿದ್ದಾರೆ ಅಂತ ಟಾಕ್‌ ಕೂಡ ಇದೆ..


ಇದನ್ನೂ ಓದಿ:ಜಿಮ್‌ನಲ್ಲಿ ಅರಳಿದ ಪ್ರೀತಿ, 14 ವರ್ಷಗಳ ನಂತರ ಪತಿಯಿಂದ ಬೇರ್ಪಟ್ಟ ಖ್ಯಾತ ನಟಿ !


ಸದ್ಯ ಸಲ್ಮಾನ್ ಖಾನ್ ತಮಿಳು ನಿರ್ದೇಶಕ ಎಆರ್ ಮುರುಗದಾಸ್ ನಿರ್ದೇಶನದ ʼಸಿಕಂದರ್ʼ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದರಲ್ಲಿ ರಶ್ಮಿಕಾ ಮಂದಣ್ಣ ನಾಯಕಿ. ಇದಲ್ಲದೇ ಅಟ್ಲಿ ನಿರ್ದೇಶನದಲ್ಲಿ ಚಿತ್ರವೊಂದು ತಯಾರಾಗಲಿದೆ ಎಂಬ ಮಾಹಿತಿ ಇದೆ. ಅಟ್ಲಿ ಕಳೆದ ವರ್ಷ ಶಾರುಖ್ ಖಾನ್ ಅವರಿಗೆ 'ಜವಾನ್' ನಂತಹ ಬ್ಲಾಕ್ ಬಸ್ಟರ್ ಚಿತ್ರವನ್ನು ಚಿತ್ರರಂಗಕ್ಕೆ ನೀಡಿದ್ದು ಗೊತ್ತೇ ಇದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.