ಓ ಪ್ರೇಮವೇ, ನೀನೆಷ್ಟು ಕ್ರೂರಿ… ಅಭಿಷೇಕ್ ಬಚ್ಚನ್-ಐಶ್ವರ್ಯ ರೈ ವಿಚ್ಛೇದನ ವದಂತಿ ನಡುವೆ ಸಲ್ಮಾನ್ ಖಾನ್ ಮಾಜಿ ಪ್ರೇಯಸಿ ಹೇಳಿದ್ದೇನು?
Aishwarya Rai Bachchan: ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ದಾಂಪತ್ಯ ಮುರಿದುಬಿದ್ದಿದ್ದು ಇಬ್ಬರೂ ವಿಚ್ಛೇದನಕ್ಕೆ ಕಾಯುತ್ತಿದ್ದಾರೆ ಎಂದು ಚರ್ಚೆಯಾಗುತ್ತಿದೆ. ಇನ್ನೊಂದೆಡೆ ಇತ್ತೀಚೆಗಷ್ಟೇ ಮಾಜಿ ಸಚಿವ ಬಾಬಾ ಸಿದ್ಧಕಿ ಅವರನ್ನು ಕೊಲೆ ಮಾಡಿರುವ ಕುಖ್ಯಾತ ಪಾತಕಿ, ಗ್ಯಾಂಗ್ ಸ್ಟಾರ್ ಲಾರೆನ್ಸ್ ಬಿಷ್ನೋವಿ ‘ನನ್ನ ಮುಂದಿನ ಗುರಿ ಸಲ್ಮಾನ್ ಖಾನ್’ ಎಂದಿದ್ದಾನೆ.
Aishwarya Rai Bachchan: ಖ್ಯಾತ ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಮತ್ತು ಮಾಜಿ ವಿಶ್ವ ಸುಂದರಿ ಐಶ್ವರ್ಯ ರೈ ದಾಂಪತ್ಯದಲ್ಲಿ ಬಹಳ ದೊಡ್ಡ ಬಿರುಕು ಮೂಡಿದೆ, ಈ ಸ್ಟಾರ್ ದಂಪತಿಗಳು ಅಥವಾ ಸೆಲಬ್ರಿಟಿ ಜೋಡಿ ಒಂದಾಗುವುದು ಸಾಧ್ಯವೇ ಇಲ್ಲ, ಶೀಘ್ರವೇ ಇಬ್ಬರೂ ವಿಚ್ಛೇದನ ಪಡೆಯುತ್ತಾರೆ ಎಂಬ ಚರ್ಚೆ ಜೋರಾಗಿ ನಡೆಯುತ್ತಿರುವಾಗಲೇ ‘ಲವ್ ಮಾಡುತ್ತಿದ್ದಾಗ ಐಶ್ವರ್ಯ ರೈ ಮತ್ತು ಸಲ್ಮಾನ್ ಖಾನ್ ನಡುವಿನ ಸಂಬಂಧ ಹೇಗಿತ್ತು?’ ಎನ್ನುವ ಮಾಹಿತಿಯೊಂದು ಹೊರಬಿದ್ದಿದೆ.
ಹಿಂದಿ ಚಿತ್ರರಂಗದಲ್ಲಿ ಯಶಸ್ಸಿನ ತುತ್ತ ತುದಿಯಲ್ಲಿದ್ದ ವೇಳೆಯಲ್ಲೇ ಸಲ್ಮಾನ್ ಖಾನ್ ಮತ್ತು ಐಶ್ವರ್ಯ ರೈ ನಡುವೆ ಪ್ರೇಮಾಂಕುರವಾಗಿತ್ತು. ಸಲ್ಮಾನ್ ಖಾನ್ ಮತ್ತು ಐಶ್ವರ್ಯ ಡೇಟಿಂಗ್ ನಲ್ಲಿ ಇದ್ದರು ಎಂದು ಕೂಡ ಹೇಳಲಾಗುತ್ತದೆ. ಬಳಿಕ ಇವರಿಬ್ಬರು ಮದುವೆಯಾಗುತ್ತಾರೆ ಎನ್ನುವ ಗಾಸಿಪ್ ಬಾಲಿವುಡ್ ಅಂಗಳವನ್ನು ತಲ್ಲಣಗೊಳಿಸಿತ್ತು. ಆದರೆ ಆಗಿದ್ದೇ ಬೇರೆ. ಪ್ರೇಮ ಫಲಿಸಲಿಲ್ಲ ಎನ್ನುವುದನ್ನೂ ಮೀರಿ ಇಬ್ಬರೂ ಹೊಡೆದಾಡಿಕೊಂಡರು ಎನ್ನುವ ಮಟ್ಟಗೆ ಸಂಬಂಧ ಹಾಳಾಗಿತ್ತು. ಅನಂತರ ಸಲ್ಮಾನ್ ಖಾನ್ ಮತ್ತು ಐಶ್ವರ್ಯ ಎಂದೂ ಮುಖಾಮುಖಿಯಾಗಲಿಲ್ಲ.
ಇದೀಗ ಒಂದೆಡೆ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ದಾಂಪತ್ಯ ಮುರಿದುಬಿದ್ದಿದ್ದು ಇಬ್ಬರೂ ವಿಚ್ಛೇದನಕ್ಕೆ ಕಾಯುತ್ತಿದ್ದಾರೆ ಎಂದು ಚರ್ಚೆಯಾಗುತ್ತಿದೆ. ಇನ್ನೊಂದೆಡೆ ಇತ್ತೀಚೆಗಷ್ಟೇ ಮಾಜಿ ಸಚಿವ ಬಾಬಾ ಸಿದ್ಧಕಿ ಅವರನ್ನು ಕೊಲೆ ಮಾಡಿರುವ ಕುಖ್ಯಾತ ಪಾತಕಿ, ಗ್ಯಾಂಗ್ ಸ್ಟಾರ್ ಲಾರೆನ್ಸ್ ಬಿಷ್ನೋವಿ ‘ನನ್ನ ಮುಂದಿನ ಗುರಿ ಸಲ್ಮಾನ್ ಖಾನ್’ ಎಂದಿದ್ದಾನೆ. ಸಲ್ಮಾನ್ ಖಾನ್ ಗೆ ಜೀವಭಯ ಶುರುವಾಗಿದೆ. ಇಂತಹ ಸಂದರ್ಭದಲ್ಲಿ ಸಲ್ಮಾನ್ ಖಾನ್ ಮತ್ತು ಐಶ್ವರ್ಯ ರೈ ನಡುವಿನ ಸಂಬಂಧ ಹೇಗಿತ್ತು ಎನ್ನುವ ಹೇಳಿಕೆಯೊಂದು ಹೊರಬಿದ್ದಿದೆ.
ಇದನ್ನೂ ಓದಿ- ತಮ್ಮ ದಾಂಪತ್ಯ ಜೀವನದ ಗುಟ್ಟು ಬಿಚ್ಚಿಟ್ಟ ಅಭಿಷೇಕ್ ಬಚ್ಚನ್..! ಐಶ್ವರ್ಯ ರೈ ಇಷ್ಟೆಲ್ಲಾ ಮಾಡಿದ್ದೆ ಬಿರುಕಿಗೆ ಕಾರಣವಾಯ್ತಾ..?
ಸಲ್ಮಾನ್ ಖಾನ್ ಮತ್ತು ಐಶ್ವರ್ಯ ರೈ ಪ್ರೇಮ ಸಂಬಂಧದ ಬಗ್ಗೆ ಮಾತನಾಡಿರುವವರು ಬೇರೆ ಯಾರೂ ಅಲ್ಲ. ಸಲ್ಮಾನ್ ಖಾನ್ ಅವರ ಮತ್ತೊಬ್ಬ ಮಾಜಿ ಪ್ರೇಯಸಿ ಸೋಮಿ ಅಲಿ. ಸೋಮಿ ಅಲಿ ಈಗ ಭಾರತದಲ್ಲಿ ಇಲ್ಲ. ಸುಮಾರು 8 ವರ್ಷ ಸಲ್ಮಾನ್ ಖಾನ್ ಜೊತೆ ಡೇಟಿಂಗ್ ನಲ್ಲಿ ಇದ್ದು ನಂತರ ‘ಇನ್ನು ಸಲ್ಮಾನ್ ಖಾನ್ ನೀಡುವ ದೌರ್ಜನ್ಯವನ್ನು ಸಹಿಸಲಾರೆ’ ಎಂದು ಹೇಳಿ ದೇಶವನ್ನೇ ಬಿಟ್ಟು ಹೋಗಿದ್ದಾಳೆ. ಇದೀಗ ಸಲ್ಮಾನ್ ಖಾನ್ ಅವರಿಗೆ ಲಾರೆನ್ಸ್ ಬಿಶ್ನೋವಿ ಗ್ಯಾಂಗ್ ನಿಂದ ಜೀವ ಬೆದರಿಕೆ ಬಂದಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ್ದಾರೆ.
ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಮಾತನಾಡಿರುವ ಸೋಮಿ ಅಲಿ ‘ನಾನು ಗಮನಿಸಿರುವಂತೆ ಸಲ್ಮಾನ್ ಖಾನ್ ಗ್ಯಾಂಗ್ ಸ್ಟಾರ್ ಲಾರೆನ್ಸ್ ಬಿಶ್ನೋವಿಗಿಂತಲೂ ಕ್ರೂರಿ’ ಎಂದು ಹೇಳಿದ್ದಾಳೆ. ಸಲ್ಮಾನ್ ಖಾನ್ ಜೊತೆ ಲಿವಿಂಗ್ ರಿಲೇಷನ್ ನಲ್ಲಿ ಇದ್ದಾಗ ತೀವ್ರತೆರೆನಾದ ದೈಹಿಕ ಮತ್ತು ಮಾನಸಿಕ ಹಿಂಸೆ ಅನುಭವಿಸಿದ್ದೆ. ಇನ್ನು ಸಹಿಸಲು ಸಾಧ್ಯವೇ ಇಲ್ಲ ಎನ್ನುವ ಹಂತ ತಲುಪಿದಾಗ ಬಿಟ್ಟುಹೋದೆ’ ಎಂದು ಹೇಳಿಕೊಂಡಿದ್ದಾಳೆ.
ಇದನ್ನೂ ಓದಿ- ವಿಚ್ಛೇದನ ವದಂತಿಗಳ ನಡುವೆ ಅಭಿಷೇಕ್ ಬಚ್ಚನ್ ಒಬ್ಬ..... ಎಂದ ಐಶ್ವರ್ಯ ರೈ! ಹೇಳಿಕೆ ವೈರಲ್
ಸೋಮಿ ಅಲಿ ತನ್ನ ಮತ್ತು ಸಲ್ಮಾನ್ ಖಾನ್ ನಡುವಿನ ಸಂಬಂಧ, ಜೊತೆಯಲ್ಲಿ ಇದ್ದಾಗ ಅನುಭವಿಸಿದ ನೋವುಗಳನ್ನು ಮಾತ್ರ ಹಂಚಿಕೊಂಡಿಲ್ಲ. ಮಾಜಿ ಪ್ರೇಯಸಿಯರಾದ ಐಶ್ವರ್ಯ ರೈ ಮತ್ತು ಕತ್ರಿನಾ ಕೈಫ್ ಜೊತೆಗೂ ಸಲ್ಮಾನ್ ಖಾನ್ ಕೆಟ್ಟದಾಗಿ ನಡೆದುಕೊಳ್ಳುತ್ತಿದ್ದರು. ದೈಹಿಕವಾಗಿ ಮತ್ತು ಮಾನಸಿಕವಾಗಿ ಹಿಂಸೆ ಕೊಡುತ್ತಿದ್ದರು ಎಂದು ಹೇಳಿದ್ದಾರೆ. ಆದರೂ ಸಲ್ಮಾನ್ ಖಾನ್ ನನ್ನೊಂದಿಗೆ ನಡೆದುಕೊಂಡಷ್ಟು ಕ್ರೂರವಾಗಿ ಅವರ ಇತರೆ ಮಾಜಿ ಪ್ರೇಯಸಿಯರೊಂದಿಗೆ ನಡೆದುಕೊಂಡಿಲ್ಲ ಅಂತಾನೂ ಹೇಳಿದ್ದಾಳೆ.
ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ವಿಚ್ಛೇದನ ವದಂತಿ ಮತ್ತು ಸಲ್ಮಾನ್ ಖಾನ್ ಅವರಿಗೆ ಕುಖ್ಯಾತ ಗ್ಯಾಂಗ್ ಸ್ಟಾರ್ ಕಡೆಯಿಂದ ಜೀವ ಭಯ ಇರುವ ವೇಳೆಯಲ್ಲಿ ಸೋಮಿ ಅಲಿ, ಸಲ್ಮಾನ್ ಖಾನ್ ಮತ್ತು ಐಶ್ವರ್ಯ ರೈ ಸಂಬಂಧದ ಬಗ್ಗೆ ಮಾತನಾಡಿರುವುದು ವಿಶೇಷವಾಗಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.