Salman Khan Kangana Ranaut : ನಟ ಸಲ್ಮಾನ್ ಖಾನ್ ಅವರು ಇತ್ತೀಚಿಗೆ ತಮ್ಮ 57ನೇ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿಕೊಂಡರು. ಸಲ್ಲು ಬರ್ತಡೇ ಪಾರ್ಟಿಗೆ ಬಾಲಿವುಡ್‌ ಮಂದಿಯಲ್ಲಿ ಸೇರಿದ್ದರು. ಶಾರುಖ್ ಖಾನ್ ಸೇರಿದಂತೆ ಸಲ್ಮಾನ್‌ ಗೆಳೆಯ, ಗೆಳತಿಯರು ಹಾಗೂ ಉದ್ಯಮಿಗಳು ಪಾರ್ಟಿಯಲ್ಲಿದ್ದರು. ಆದರೆ ಸಲ್ಮಾನ್ ಖಾನ್ ಅವರ ಗುಡ್‌ ಫ್ರೆಂಡ್ ಕಂಗನಾ ರನೌತ್ ಮಾತ್ರ ಮಿಸ್‌ ಆಗಿದ್ದು, ಹಲವಾರು ಗಾಸಿಫ್‌ಗಳಿಗೆ ಕಾರಣವಾಗಿದೆ.


COMMERCIAL BREAK
SCROLL TO CONTINUE READING

ಸಲ್ಮಾನ್ ಖಾನ್ ಅವರನ್ನು ತನ್ನ ಆಪ್ತ ಸ್ನೇಹಿತ ಎಂದು ಹೇಳಿಕೊಂಡಿದ್ದ ಕಂಗನಾ ರಣಾವತ್ ಬರ್ತ್‌ ಡೇ ಪಾರ್ಟಿಯಲ್ಲಿ ಕಾಣಿಸಿಕೊಂಡಿಲ್ಲ. ಈ ಬಾರಿ ಭಾಯ್ ಅವರನ್ನು ಪಾರ್ಟಿಗೆ ಆಹ್ವಾನಿಸಲಿಲ್ಲ ಎಂದು ನೆಟ್ಟಿಗರು ಗಾಸಿಪ್‌ ಎಬ್ಬಿಸಿದ್ದಾರೆ. ಕಳೆದ ಬಾರಿ ಕಂಗನಾ, ಸಲ್ಮಾನ್ ಖಾನ್ ಅವರ ಈದ್ ಬ್ಯಾಷ್‌ಗೆ ಹಾಜರಾಗಿದ್ದರು. ಅಲ್ಲದೆ, ಕಾರ್ಯಕ್ರಮದ ಕುರಿತು ಟ್ವೀಟ್ ಮಾಡಿ ಸಂತೋಷ ಹಂಚಿಕೊಂಡಿದ್ದರು. ಆದ್ರೆ ಈಗ ಕ್ಲೋಸ್‌ ಫ್ರೆಂಡ್ ಹುಟ್ಟು ಹಬ್ಬಕ್ಕೆ ಗೈರಾಗಿರುವುದು ಚರ್ಚೆಗೆ ಕಾರಣವಾಗಿದೆ.


ಇದನ್ನೂ ಓದಿ: ‘ಪೊನ್ನಿಯಿನ್ ಸೆಲ್ವನ್’ ಸೀಕ್ವೆಲ್ 2 ಬಿಡುಗಡೆಗೆ ಮುಹೂರ್ತ ಫಿಕ್ಸ್! ಯಾವಾಗ ಗೊತ್ತಾ?


ಈ ಹಿಂದೆ ಕಂಗನಾ, ಸಿದ್ಧಾರ್ಥ್ ಕಣ್ಣನ್ ಅವರೊಂದಿಗಿನ ಸಂವಾದದಲ್ಲಿ ಬಾಲಿವುಡ್ ಪಾರ್ಟಿಗಳಿಗೆ ಹಾಜರಾಗದ ಬಗ್ಗೆ ಮಾತನಾಡಿದ್ದರು. ಈ ವೇಳೆ ಅವರು, "ನಾನು ಬಾಲಿವುಡ್ ಪಾರ್ಟಿಗಳಿಗೆ ಹೋಗಲ್ಲ ಅಂತ ಅಲ್ಲ, ನನಗೆ ಇಷ್ಟ ಬಂದ್ರೆ ಹೋಗುತ್ತೇನೆ. ಸಲ್ಮಾನ್ ನನಗೆ ತುಂಬಾ ಒಳ್ಳೆಯ ಸ್ನೇಹಿತ, ಒಮ್ಮೆ ಅವರು ನನ್ನನ್ನು ಪಾರ್ಟಿಗೆ ಕರೆದಿದ್ದರು, ನಾನು ಹೋಗಿದ್ದೆ ಎಂದು ಹೇಳಿದ್ದರು. ಆದ್ರೆ ಈ ಬಾರಿ ಕಂಗನಾಗೆ ಬಾಯ್‌ ಇನ್ವೈಟ್ ಮಾಡಿಲ್ವಾ.. ಅಂತ ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ.


ಅಲ್ಲದೆ, ಕಂಗನಾ ʼಎಮರ್ಜೆನ್ಸಿʼ ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ ಅದಕ್ಕಾಗಿ ಸಲ್ಮಾನ್ ಖಾನ್ ಅವರ ಬರ್ತ್‌ ಡೇ ಪಾಟಿಗೆ ಬಂದಿಲ್ಲ ಎಂದು ಸಲ್ಲು ಅಭಿಮಾನಿಗಳು ಸಮರ್ಥನೆ ನೀಡಿದ್ದಾರೆ. ಸದ್ಯ ಕಂಗನಾ ತನ್ನ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ.. ನಟನೆಯಲ್ಲಿ ಕಂಗನಾ ಸೂಪರ್‌ ಆದ್ರೆ ಅವರ ಯಾವುದೇ ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡಲಿಲ್ಲ. ಇದರಿಂದ ಹಿಟ್‌ ಸಿನಿಮಾಗಾಗಿ ಶ್ರಮ ವಹಿಸುತ್ತಿದ್ದಾರೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.