Salman Khan vs lawrence bishnoi gang : ಮುಂಬೈನಲ್ಲಿ ಬಿಷ್ಣೋಯ್ ಬಣ ಸಂಚಲನ ಮೂಡಿಸುತ್ತಿರುವ ವಿಚಾರ ಗೊತ್ತೇ ಇದೆ. ಇತ್ತೀಚೆಗಷ್ಟೇ ಬಾಬಾ ಸಿದ್ದಿಕಿ ಹತ್ಯೆಯ ನಂತರ ಪೊಲೀಸರು ಮತ್ತಷ್ಟು ಅಲರ್ಟ್ ಆಗಿದ್ದಾರೆ. ಬಾಲಿವುಡ್ ಇಂಡಸ್ಟ್ರಿಯ ಹಲವು ಸೆಲೆಬ್ರಿಟಿಗಳಿಗೆ ಬಿಗಿ ಭದ್ರತೆ ಒದಗಿಸುತ್ತಿದ್ದಾರೆ. ಅದರಲ್ಲೂ ಬಿಷ್ಣೋಯ್ ಬಣ ಪ್ರಮುಖ ಟಾರ್ಗೆಟ್ ಆಗಿರುವ ಸಲ್ಮಾನ್ ಖಾನ್ ನಿವಾಸಕ್ಕೆ ಭಾರೀ ಭದ್ರತೆ ಏರ್ಪಡಿಸಲಾಗಿದೆ. 


COMMERCIAL BREAK
SCROLL TO CONTINUE READING

ಈಗಾಗಲೇ ಸಲ್ಮಾನ್ ಮನೆಯ ಹತ್ತಿರ ಸಾರ್ವಜನಿಕರಿಗೆ ಫೋಟೋಗಳು ಮತ್ತು ಸೆಲ್ಫಿಗಳಿಗೆ ಅನುಮತಿ ನಿರಾಕರಿಸಿದ್ದಾರೆ. ಅಲ್ಲದೆ ಸಲ್ಲು ಯಾರನ್ನೂ ಭೇಟಿ ಮಾಡದಿರಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.. ಈ ಮಧ್ಯ, ಸಲ್ಮಾನ್‌ರನ್ನ ಕೊಲ್ಲಲು ಯೋಜಿಸಿದ್ದ ಗ್ಯಾಂಗ್‌ನ ಸುಖ ಎಂಬ ಶಾರ್ಟ್ ಶೂಟರ್ ಅನ್ನು ನವಿ ಮುಂಬೈ ಪೊಲೀಸರು ಬಂಧಿಸಿದ್ದಾರೆ. 


ಇದನ್ನೂ ಓದಿ:'ಖಾಸಗಿ ವಿಡಿಯೋ ಲೀಕ್ʼ ಮಾಡುವುದಾಗಿ ನಟಿ ಅನನ್ಯಾ ಪಾಂಡೆಗೆ ಖಾರುಖ್‌ ಪುತ್ರನಿಂದ ಬೆದರಿಕೆ..!


ಹರಿಯಾಣದ ಪಾಣಿಪತ್‌ನಲ್ಲಿ ಸುಖಾ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಖಚಿತಪಡಿಸಿದ್ದಾರೆ. ಆರೋಪಿನ್ನು ಇಂದು ಮುಂಬೈನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಸುಖ ಬಿಷ್ಣೋಯ್ ಗ್ಯಾಂಗ್ ಶೂಟರ್ ಎಂದು ಗುರುತಿಸಲಾಗಿದೆ. ಜೂನ್‌ನಲ್ಲಿ, ಪನ್ವೇಲ್‌ನಲ್ಲಿರುವ ಫಾರ್ಮ್‌ಹೌಸ್ ಬಳಿ ಸಲ್ಮಾನ್ ಅವರನ್ನು ಗುರಿಯಾಗಿಸಲಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ..


ಏಪ್ರಿಲ್‌ನಲ್ಲಿ ಇಬ್ಬರು ಆರೋಪಿಗಳು ಬಾಂದ್ರಾದಲ್ಲಿರುವ ಸಲ್ಮಾನ್ ಅವರ 'ಗ್ಯಾಲಕ್ಸಿ ಅಪಾರ್ಟ್‌ಮೆಂಟ್' ಹೊರಗೆ ಗುಂಡು ಹಾರಿಸಿದ್ದರು. ಗುಂಡಿನ ದಾಳಿಯ ಹಿಂದೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಕೈವಾಡವಿದೆ ಎಂದು ಸಲ್ಮಾನ್ ಪೊಲೀಸರಿಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಸಲ್ಮಾನ್ ಖಾನ್ ಮತ್ತು ಅವರ ಕುಟುಂಬಕ್ಕೆ ಬಿಷ್ಣೋಯ್ ಪಂಥದಿಂದ ಬೆದರಿಕೆಗಳು ಬಂದಿವೆ ಎಂಬ ಮಾಹಿತಿ ಇವೆ. 


ಇದನ್ನೂ ಓದಿ:ಮದುವೆಯಾಗಿ 12 ವರ್ಷಗಳ ಬಳಿಕ ಗರ್ಭಿಣಿಯಾದ ಸ್ಟಾರ್‌ ನಟಿ.. ಈಕೆಯ ಪತಿ ಇವರೇ ನೋಡಿ!


ಸಲ್ಮಾನ್ ಮನೆ ಹೊರಗೆ ನಡೆದ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿ, ಮುಂಬೈ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ಸಲ್ಮಾನ್ ಹೇಳಿಕೆಯೂ ಸೇರಿದೆ. ಜನವರಿಯಲ್ಲೂ ಇಬ್ಬರು ಅಪರಿಚಿತ ವ್ಯಕ್ತಿಗಳು ನಕಲಿ ಗುರುತಿನ ಚೀಟಿ ತೋರಿಸಿ ಪನ್ವೇಲ್ ಫಾರ್ಮ್‌ಹೌಸ್‌ಗೆ ಪ್ರವೇಶಿಸಲು ಯತ್ನಿಸಿದ್ದರು ಎಂದು ಸಲ್ಮಾನ್ ಹೇಳಿದ್ದಾರೆ. 2022 ರಲ್ಲಿ, ಬಾಂದ್ರಾದಲ್ಲಿ ಸಲ್ಮಾನ್ ಅವರ ಕಟ್ಟಡಕ್ಕೆ ಬೆದರಿಕೆ ಪತ್ರವನ್ನು ಪೊಲೀಸರು ವಶಪಡಿಸಿಕೊಂಡರು.


ಲಾರೆನ್ಸ್ ಬಿಷ್ಣೋಯ್ ಮತ್ತು ಸಂಪತ್ ನೆಹ್ರಾ ಗ್ಯಾಂಗ್ ಸಲ್ಮಾನ್ ಖಾನ್ ಚಲನವಲನಗಳ ಮೇಲೆ ಕಣ್ಣಿಡಲು ಸುಮಾರು 60 ರಿಂದ 70 ಜನರನ್ನು ನೇಮಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅವರೆಲ್ಲರೂ ಬಾಂದ್ರಾದಲ್ಲಿರುವ ಸಲ್ಮಾನ್ ಮನೆ ಮತ್ತು ಪನ್ವೆಲ್ ಫಾರ್ಮ್‌ಹೌಸ್, ಶೂಟಿಂಗ್‌ ಸೆಟ್‌ಗಳ ಮೇಲೆ ಕೇಂದ್ರೀಕರಿಸಿದ್ದಾರೆ. ಈ ಬಗ್ಗೆ ಖಚಿತ ಮಾಹಿತಿ ಪಡೆದು ಅ.24ರಂದು ಪನ್ವೇಲ್ ನಗರ ಪೊಲೀಸ್ ಠಾಣೆಯಲ್ಲಿ ಕೆಲವರ ವಿರುದ್ಧ ಪ್ರಕರಣ ದಾಖಲಾಗಿತ್ತು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ